ಮುಂಬೈ( ಡಿ. 02) ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಇಡೀ ವರ್ಷ ಚರ್ಚೆಯಲ್ಲಿ ಇತ್ತಿ. ಇದರ ಪರಿಣಾಮ ಎನ್ನುವಂತೆ 2020ರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ನಟಿ ರಿಯಾ ಚಕ್ರವರ್ತಿ ಅತಿ ಹೆಚ್ಚು ಸರ್ಚ್ ಗೆ ಒಳಗಾದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಜೂನ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ದೆಹಲಿಯ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದಾದ ಮೇಲೆ ಪ್ರಕರಣದಕ್ಕೆ ಸಂಬಂಧಿಸಿ ಒಬ್ಬರಾದ ಮೇಲೆ ಒಬ್ಬರ ಹೆಸರು ಹೊರಗೆ ಬಂದಿತು. ಸುಶಾಂತ್ ಗೆಳತಿ ನಟಿ ರಿಯಾ ಚಕ್ರವರ್ತಿ ಗೂ ಇದಕ್ಕೂ ಲಿಂಕ್ ಇದೆ ಎಂಬ ಅನುಮಾನ ಜೋರಾಯಿತು. ಇದಾದ ಮೇಲೆ ಬಾಲಿವುಡ್ ನಲ್ಲಿ ಡ್ರಗ್ಸ್ ಘಾಟಿನ ವಾಸನೆ ಎದ್ದಿತ್ತು. ನಟಿ ರಿಯಾ ಚಕ್ರವರ್ತಿಯನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಮಹಾರಾಷ್ಟ್ರ ಪೊಲೀಸ್, ಸಿಬಿಐ ಕೊನೆಗೆ ಇಡಿ ಸಹ ಪ್ರಕರಣದಲ್ಲಿ ಪ್ರವೇಶ ಮಾಡುವಂತಹ ಸ್ಥಿತಿ ನಿರ್ಮಾಣ ಆಗಿತ್ತು. ಇದೆಲ್ಲ ಕಾರಣಕ್ಕೆ ಅತಿಹೆಚ್ಚು ಸರ್ಚ್ ಗೆ ಒಳಗಾದವರ ಪಟ್ಟಿಯಲ್ಲಿ ರಿಯಾ ಮತ್ತು ಸುಶಾಂತ್ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. Late Bollywood actor Sushant Singh Rajput and actress girlfriend Rhea Chakraborty are the most searched male and female celebrity of 2020. ಸರ್ಚ್ ವಿಚಾರದಲ್ಲಿ ರಿಯಾ ಮತ್ತು ಸುಶಾಂತ್ ಗೆ ಅಗ್ರ ಸ್ಥಾನ