ಆದರೆ ಅನೇಕ ಜನರು ಇದನ್ನು ನಕಾರಾತ್ಮಕವಾಗಿ ನೋಡಿದರು, ಕೆಟ್ಟದಾಗಿ ಮಾತನಾಡಿದರು. ಆದರೆ ನನಗೆ ಅದು ಒಂದು ಒಳ್ಳೆಯ ಅನುಭವವನ್ನು ನೀಡಿತು, 'ನನ್ನ ಮಗನ ಸಮ್ಮುಖದಲ್ಲಿ ನನ್ನ ಮದುವೆ ನಡೆಯುವುದಕ್ಕಿಂತ ದೊಡ್ಡ ವಿಷಯ ಯಾವುದು, ಎಷ್ಟು ಜನರಿಗೆ ಈ ಅವಕಾಶ ಸಿಗುತ್ತದೆ. ನನ್ನ ಮಗನ ಮುಂದೆ ನನ್ನ ಮದುವೆ ನಡೆಯುವ ಪರಿಕಲ್ಪನೆ ನನಗೆ ತುಂಬಾ ಇಷ್ಟವಾಯಿತು' ಎಂದು ರೇಣು ದೇಸಾಯಿ ಹೇಳಿದ್ದಾರೆ. ತಮ್ಮ ಮದುವೆ ಕೆಲವೇ ಬಂಧುಮಿತ್ರರ ಸಮ್ಮುಖದಲ್ಲಿ ಅಚ್ಚ ತೆಲುಗು ಸಂಪ್ರದಾಯದಂತೆ ನಡೆಯಿತು ಎಂದು ರೇಣು ದೇಸಾಯಿ ಹೇಳಿದ್ದಾರೆ.