`ಇನ್ನು ಎರಡು ಮೂರು ವರ್ಷದಲ್ಲಿ ಮಕ್ಕಳು ದೊಡ್ಡವರಾಗ್ತಾರೆ. ಕಾಲೇಜಿಗೆ ಹೋಗ್ತಾರೆ. ಆಗ ಅವರಿಗೆ ಫ್ರೆಂಡ್ಸ್, ಲವರ್ಸ್ ಅನ್ನೋ ಹೊಸ ಲೋಕ ಸಿಗುತ್ತೆ. ಅವರ ಜೊತೆ ಜಾಸ್ತಿ ಸಮಯ ಕಳೆಯುತ್ತಾರೆ. ಪೇರೆಂಟ್ಸ್ ಮೇಲೆ ಅಷ್ಟಾಗಿ ಡಿಪೆಂಡ್ ಆಗಲ್ಲ, ಕೇವಲ ಸಪೋರ್ಟ್‌ಗೆ ಮಾತ್ರ ಪೇರೆಂಟ್ಸ್ ಬೇಕಾಗುತ್ತಾರೆ, ಆದ್ರೆ ದಿನವಿಡೀ ಪೇರೆಂಟ್ಸ್ ಬೇಕಾಗಿರಲ್ಲ. ಆಗ ನಾನು ಫ್ರೀ ಆಗ್ತೀನಿ, ನನ್ನ ಮದುವೆ ಜೀವನ ಎಂಜಾಯ್ ಮಾಡಬಹುದು. ಅದಕ್ಕೆ ಇಷ್ಟು ದಿನ ಕಾಯ್ತಿದ್ದೀನಿ ಅಂತ ಹೇಳಿದ್ದಾರೆ ರೇಣು ದೇಸಾಯಿ. ಇನ್ನು ಎರಡು ಮೂರು ವರ್ಷದಲ್ಲಿ ಖಂಡಿತ ಮದುವೆ ಆಗ್ತೀನಿ, ನನಗೆ ಮದುವೆ ಜೀವನ ಬೇಕು, ಎಲ್ಲರ ತರ ನಾನೂ ಮದುವೆ ಜೀವನ ಎಂಜಾಯ್ ಮಾಡಬೇಕು ಅಂತ ಅಂದುಕೊಂಡಿದ್ದೀನಿ` ಅಂತ ಹೇಳಿದ್ದಾರೆ ರೇಣು ದೇಸಾಯಿ.