ಹುಡುಗರ ಸಾಮರ್ಥ್ಯವನ್ನು ಮ್ಯಾಗಿಗೆ ಹೋಲಿಸಿದ್ದ ನಟಿ ರೆಜಿನಾ ಇದೀಗ ನಾನು ಸೀರಿಯಲ್ ಡೇಟರ್ ಅಂತಿದ್ದಾರೆ…

First Published | Sep 20, 2024, 12:01 PM IST

ತನ್ನ ಇತ್ತೀಚಿನ ಸಂದರ್ಶನವೊಂದರಲ್ಲಿ, ರೆಜಿನಾ ಕಸಾಂಡ್ರಾ ತನ್ನ ಲವ್ ಲೈಫ್ ಮತ್ತು ರಿಲೇಶನ್ ಶಿಪ್ ಬಗ್ಗೆ ಮಾತನಾಡಿದ್ದು, ತಾನು ಸೀರಿಯಲ್ ಡೇಟರ್ ಎಂದು ಬೋಲ್ಡ್ ಆಗಿ ಉತ್ತರಿಸಿದ್ದಾರೆ. 
 

ಸೂರ್ಯಕಾಂತಿ ಸಿನಿಮಾದ ಬೆಡಗಿ ರೆಜಿನಾ ಕಸಾಂಡ್ರಾ (Regina Cassandra) ಇತ್ತೀಚೆಗೆ ತಮ್ಮ ಉತ್ಸವಂ ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್ ತೆರಳಿದ್ದರು. ಅಲ್ಲಿ ಸುಮನ್ ಯೂಟ್ಯೂಬ್ ಚಾನೆಲ್ನೊಂದಿಗೆ ಮಾತನಾಡಿದ ನಟಿ ತನ್ನ ಲವ್ ಲೈಫ್ ಮತ್ತು ಹಿಂದಿನ ರಿಲೇಶನ್ ಶಿಪ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನ ಬಹಿರಂಗಪಡಿಸಿದ್ದಾರೆ.  

ಉತ್ಸವಂ ಚಿತ್ರದಲ್ಲಿನ ತನ್ನ ಪಾತ್ರದ ಬಗ್ಗೆ ಮಾತನಾಡಿದ, ರೆಜಿನಾ ಕಸಾಂಡ್ರಾ ನಿಜ ಜೀವನದಲ್ಲಿಯೂ ತನ್ನ ಬಗ್ಗೆ ಕಾಳಜಿ ವಹಿಸುವ ವ್ಯಕ್ತಿಯನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ತನ್ನ ಲವ್ ಲೈಫ್ (love life), ಅಫೇರ್ ಮತ್ತು ಪ್ರಪೋಸಲ್ ಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸಹ ನಟಿ ರೆಜಿನಾ ಹಂಚಿಕೊಂಡರು. 

Tap to resize

ಈ ಹಿಂದೆ ನನಗೆ ಹಲವಾರು ಪ್ರಪೋಸಲ್ ಗಳು ಬಂದಿದ್ದವು, ನಾನು ರಿಲೇಶನ್’ಶಿಪ್ ನಲ್ಲೂ ಇದ್ದೆ ಎಂದಿದ್ದಾರೆ. ನಾನು ಹಲವಾರು ಜನರ ಜೊತೆ ರಿಲೇಶನ್’ಶಿಪ್ ನಲ್ಲಿದ್ದೆ ಹಾಗಾಗಿ ನನ್ನನ್ನು ಸೀರಿಯಲ್ ಡೇಟರ್ ( I am a serial dater) ಅಂತಾನೆ ಹೇಳಬಹುದು ಎಂದು ಬೋಲ್ಡ್ ಆಗಿ ಹೇಳಿಕೆ ಕೊಟ್ಟಿದ್ದಾರೆ. 

ತಾನು ಇಷ್ಟಪಡುವ ಹುಡುಗ ಹೇಗಿರಬೇಕು ಎಂದು ಹೇಳಿದ ರೆಜಿನಾ, ಜವಾಬ್ದಾರಿಯುತ ಮತ್ತು ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿಯೊಂದಿಗೆ ಇರಲು ನಾನು ಇಷ್ಟಪಡುತ್ತೇನೆ. ನೀವು ನನ್ನನ್ನು ಹೈಪರ್ ಇಂಡಿಪೆಂಡೆಂಟ್ ವುಮೆನ್ ವಿಭಾಗದಲ್ಲಿ ಸೇರಿಸಬಹುದು. ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿರುವ ವ್ಯಕ್ತಿಯೊಂದಿಗೆ ಇರೋದಕ್ಕೆ ನನಗೆ ಇಷ್ಟ. ಆದರೆ ನಾನು ಈಗ ರಿಲೇಶನ್ ಶಿಪ್ ನಿಂದ ಬ್ರೇಕ್ ತೆಗೆದುಕೊಂಡಿದ್ದೇನೆ ಎಂದಿದ್ದಾರೆ. 

ಇನ್ನು ರೆಜಿನಾ ಮತ್ತು ಸಂದೀಪ್ ಕಿಶನ್ (Sundeep Kishen) ಕೆಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಇಬ್ಬರೂ ರಿಲೇಶನ್’ಶಿಪ್ ನಲ್ಲಿದ್ದಾರೆ ಎನ್ನುವ ಗುಸು ಗುಸು ಕೇಳಿ ಬಂದಿತ್ತು.. ಸಂದೀಪ್ ಜೊತೆಗಿನ ಸಂಬಂಧದ ಬಗ್ಗೆ ಹೇಳಿದ ರೆಜಿನಾ ನಾವಿಬ್ಬರು 'ಟಾಮ್ ಅಂಡ್ ಜೆರ್ರಿ' ಇದ್ದ ಹಾಗೆ ಎಂದಿದ್ದಾರೆ. 

"ನಾವು ಪರಸ್ಪರ ಸಾಕಷ್ಟು ಜಗಳ ಮಾಡ್ತೇವೆ; ಎರಡು ತಿಂಗಳ ಕಾಲ ಪರಸ್ಪರ ಮಾತನಾಡುವುದಿಲ್ಲ. ಮತ್ತೆ, ಏನೂ ನಡೆದೇ ಇಲ್ಲ ಎನ್ನುವ ಹಾಗೆ ನಾವು ಪರಸ್ಪರ ಮಾತನಾಡುತ್ತೇವೆ, ಆದ್ದರಿಂದ ನಮ್ಮ ಸ್ನೇಹವು ಇನ್ನೂ ಇದೆ ಎಂದಿದ್ದಾರೆ ರೆಜಿನಾ. ಆದ್ರೆ ಅವನು ನನ್ನ ಜೊತೆ ಯಾವಾಗ್ಲೂ ಇರ್ತಾನೆ, ನಾನು ಕೂಡ ಅವನ ಜೊತೆ ಇರುತ್ತೇನೆ ಅನ್ನೋದು ನಮಗೆ ಗೊತ್ತಿದೆ ಎಂದಿದ್ದಾರೆ. 

ರೆಜಿನಾ ಯಾವಾಗ್ಲೂ ತಮ್ಮ ಬೋಲ್ಡ್ ಸ್ಟೇಟ್ ಮೆಂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ನಟಿ ಹುಡುಗರ ಸೆಕ್ಸ್ ಸಾಮರ್ಥ್ಯ ಮ್ಯಾಗಿ ಥರ. ಎರಡೇ ನಿಮಿಷದಲ್ಲಿ ಆಗಿ ಬಿಡುತ್ತೆ ಎಂದಿದ್ದರು. ಆದಾದ ನಂತರ ಹುಡುಗಿ ಜೊತೆಗಿನ ಲಿಪ್ ಕಿಸ್ ಬಗ್ಗೆ ಹೇಳಿಕೆ ಕೊಟ್ಟು ಸುದ್ದಿಯಲ್ಲಿದ್ದರು. ಇದೀಗ ನಾನು ಸೀರಿಯಲ್ ಕಿಸ್ಸರ್ ಎಂದು ಹೇಳುವ ಮೂಲಕ ಸುದ್ದಿಯಲ್ಲಿದ್ದಾರೆ.  

Latest Videos

click me!