2025ರ ಮೋಸ್ಟ್ ಪಾಪುಲರ್ ಇಂಡಿಯನ್ ಸ್ಟಾರ್ಸ್ ಹೆಸರಿನಲ್ಲಿ ಐಎಂಡಿಬಿ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ ‘ಕಾಂತಾರ 1’ ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ 10ನೇ ಸ್ಥಾನ ಪಡೆದುಕೊಂಡಿದ್ದಾರೆ.
ಸಿನಿಮಾ ರಂಗದ ಪ್ರತಿಷ್ಠಿತ ಸಂಸ್ಥೆ ಐಎಂಡಿಬಿ 2025ರ ಅತ್ಯಂತ ಜನಪ್ರಿಯ ನಟ- ನಟಿಯರ ಪಟ್ಟಿ ಬಿಡುಗಡೆ ಮಾಡಿದ್ದು, ಈ ಟಾಪ್ 10 ಪಟ್ಟಿಯಲ್ಲಿ ಮೂವರು ಕನ್ನಡದವರೇ ಇದ್ದಾರೆ.
26
ಮೂವರು ಕನ್ನಡದ ತಾರೆಯರು
ಇದೇ ಮೊದಲ ಬಾರಿಗೆ ಮೂವರು ಕನ್ನಡದ ತಾರೆಗಳೇ ಜಾಗ ಪಡೆದುಕೊಂಡಿದ್ದು, ಒಂದೇ ಚಿತ್ರದಿಂದ ಇಬ್ಬರು ಈ ಪಟ್ಟಿಯಲ್ಲಿರುವುದು ಮತ್ತೊಂದು ವಿಶೇಷವಾಗಿದೆ.
36
10ನೇ ಸ್ಥಾನದಲ್ಲಿ ರಿಷಬ್ ಶೆಟ್ಟಿ
2025ರ ಮೋಸ್ಟ್ ಪಾಪುಲರ್ ಇಂಡಿಯನ್ ಸ್ಟಾರ್ಸ್ ಹೆಸರಿನಲ್ಲಿ ಐಎಂಡಿಬಿ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ ‘ಕಾಂತಾರ 1’ ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ 10ನೇ ಸ್ಥಾನ ಪಡೆದುಕೊಂಡಿದ್ದಾರೆ.
9ನೇ ಸ್ಥಾನದಲ್ಲಿ ‘ಕಾಂತಾರ 1’ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಇದ್ದಾರೆ. 6ನೇ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ ಇದ್ದಾರೆ. 1ನೇ ಸ್ಥಾನದಲ್ಲಿ ‘ಸೈಯಾರಾ’ ಚಿತ್ರದ ನಾಯಕ ಅಹಾನ್ ಪಾಂಡೆ, ನಾಯಕಿ ಅನೀತ್ ಪಡ್ಡ 2ನೇ ಸ್ಥಾನದಲ್ಲಿದ್ದಾರೆ.
56
7ನೇ ಸ್ಥಾನದಲ್ಲಿ ಕಲ್ಯಾಣಿ ಪ್ರಿಯದರ್ಶನ್
3ನೇ ತಾರೆಯಾಗಿ ಅಮೀರ್ ಖಾನ್, 4ನೇ ಸ್ಥಾನದಲ್ಲಿ ಇಶಾನ್ ಖಟ್ಟರ್, 5ನೇ ನಟನಾಗಿ ಲಕ್ಷ್ಯ ಇದ್ದಾರೆ. 7ನೇ ಸ್ಥಾನದಲ್ಲಿ ಕಲ್ಯಾಣಿ ಪ್ರಿಯದರ್ಶನ್, 8ನೇ ಸ್ಥಾನದಲ್ಲಿ ತೃಪ್ತಿ ದಿಮ್ರಿ ಇದ್ದಾರೆ. ಐಎಂಡಿಬಿಯಂತಹ ಸಂಸ್ಥೆ ಕನ್ನಡದ ಸಿನಿಮಾ, ನಟ- ನಟಿಯರನ್ನು ಗುರುತಿಸುವುದು ತೀರಾ ಅಪರೂಪ.
66
ಕನ್ನಡದತ್ತ ತಿರುಗಿ ನೋಡುವಂತೆ ಮಾಡಿವೆ
ಆದರೆ, ಯಶ್ ನಟನೆಯ ‘ಕೆಜಿಎಫ್’ ಹಾಗೂ ರಿಷಬ್ ಶೆಟ್ಟಿ ಅವರ ‘ಕಾಂತಾರ 1’ ಚಿತ್ರಗಳು ಪರಿಸ್ಥಿತಿಯನ್ನು ಬದಲಾಯಿಸಿದ್ದು, ಎಲ್ಲರೂ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿವೆ ಎಂಬುದಕ್ಕೆ 2025ರ ಜನಪ್ರಿಯ ತಾರೆಗಳ ಪಟ್ಟಿಯೂ ಒಂದು ಸಾಕ್ಷಿ.