ಆಮೀರ್ ಖಾನ್‌ರ ಲಾಲ್ ಸಿಂಗ್ ಚಡ್ಡಾ ಬಿಟ್ಟಿದ್ದೇಕೆ ವಿಜಯ್‌ ಸೇತುಪತಿ?

Suvarna News   | Asianet News
Published : Feb 17, 2021, 11:47 AM ISTUpdated : Aug 19, 2021, 12:42 PM IST

ತಮಿಳು ಸೂಪರ್‌ ಸ್ಟಾರ್‌ ವಿಜಯ್‌ ಸೇತುಪತಿ ಬಾಲಿವುಡ್‌ಗೆ ಕಾಲಿಡಲಿರುವ ವಿಷಯ ತಿಳಿದು ಫ್ಯಾನ್ಸ್‌ ಸಖತ್‌ ಖುಷಿಯಾಗಿದ್ದರು. ಆದರೆ ಈಗ ಅಭಿಮಾನಿಗಳಿಗೆ ಭಾರಿ ನಿರಾಶೆ ಆಗಿದೆ. ವಿಜಯ್‌ ಸೇತುಪತಿ ಆಮೀರ್‌ ಖಾನ್‌ ಅವರ ಲಾಲ್ ಸಿಂಗ್ ಚಡ್ಡಾ ಪ್ರಾಜೆಕ್ಟ್ ಅನ್ನು ತೊರೆದಿದ್ದಾರಂತೆ. ಖುದ್ದು ಸೇತುಪತಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದು ಹೀಗೆ.

PREV
112
ಆಮೀರ್ ಖಾನ್‌ರ ಲಾಲ್ ಸಿಂಗ್ ಚಡ್ಡಾ ಬಿಟ್ಟಿದ್ದೇಕೆ ವಿಜಯ್‌ ಸೇತುಪತಿ?

ವಿಜಯ್ ಸೇತುಪತಿ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾವನ್ನು ತ್ಯಜಿಸಲು ನಿಜವಾದ ಕಾರಣವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅಮೀರ್ ಖಾನ್ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

212

ಸೂಪರ್‌ ಸ್ಟಾರ್‌ ವಿಜಯ್‌ ಮತ್ತು ಅಮೀರ್ ಖಾನ್ ಅವರ ಸಿನಿಮಾ ಲಾಲ್ ಸಿಂಗ್ ಚಾಧಾಗೆ ಸೇರಲಿದ್ದಾರೆ ಎಂಬ ವಿಷಯದಿಂದ ಸೇತುಪತಿಯ ಅಭಿಮಾನಿಗಳು ಸಂತೋಷಪಟ್ಟಿದ್ದರು. ಆದರೆ ಅಭಿಮಾನಿಗಳ ಆಸೆ ಈಡೇರಲೇ ಇಲ್ಲ. 

312

ವಿಜಯ್ ಹೆಚ್ಚಾಗಿದ್ದರಿಂದ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಿಡಬೇಕಾಯಿತು ಎನ್ನಲಾಗಿದೆ.

412

ಆಮೀರ್ ಸಿನಿಮಾ ತೊರೆದಿರುವುದು ಹಾಗೂ ಮತ್ತು ಬಾಲಿವುಡ್ ಸ್ಟಾರ್‌ ಬಗ್ಗೆಯೂ ನ್ಯೂಸ್ ಮಿನಿಟ್‌ಗೆ ನೀಡಿದ ಸಂದರ್ಶನದಲ್ಲಿ ವಿಜಯ್ ಮಾತನಾಡಿದ್ದಾರೆ.  

512

ಮಿ. ಪರ್ಫೆಕ್ಷನಿಸ್ಟ್ ಎಂದೇ ಖ್ಯಾತರಾದ ಆಮೀರ್ ಖಾನ್ ಗುಣಗಾನ ಮಾಡಿರುವ ನಟ ಸೇತುಪತಿ, ಮುಂಬಯಿಗೆ ಹೋದಾಗ ಆಮೀರ್ ತಮ್ಮ ಮನೆಗೆ ಅವರನ್ನು ಆಹ್ವಾನಿಸಿದ ಆತಿಥ್ಯ ನೀಡಿದ ಬಗೆಯನ್ನು ಹಂಚಿಕೊಂಡಿದ್ದಾರೆ. ಆಮೀರ್‌ಗೆ ಇರುವ ಸಿನಿಮಾ ಜ್ಞಾನವನ್ನು ನೋಡಿ ಬೆರಗಾಗಿದ್ದೇನೆ, ಎಂದೂ ಹೇಳಿದ್ದಾರೆ.

612

'ನಾನು ಅಮೀರ್ ಸರ್ ಮೇಲೆ ತುಂಬಾ ಗೌರವವನ್ನು ಹೊಂದಿದ್ದೇನೆ. ಅವರು ಪಾತ್ರಗಳನ್ನು ಆಯ್ಕೆ ಮಾಡುವ ರೀತಿ, ಪ್ರತಿ ಬಾರಿಯೂ ವಿಭಿನ್ನವಾದದ್ದನ್ನು ಪ್ರಯತ್ನಿಸಲು ನನಗೆ ಪ್ರೇರಣೆ ನೀಡಿತ್ತದೆ. ಲಾಲ್ ಸಿಂಗ್ ಚಾಧಾಗಾಗಿ ನಾನು ಅವರನ್ನು ವೈಯಕ್ತಿಕವಾಗಿ ತಿಳಿದುಕೊಂಡಾಗ, ಅವರ ನಮ್ರತೆ ಮತ್ತು ಸಿನೆಮಾ ಜ್ಞಾನದಿಂದ ನಾನು ಇನ್ನಷ್ಟು ಪ್ರಭಾವಿತನಾಗಿದ್ದೆ. ಅವರೊಂದಿಗೆ ಇರುವುದರಿಂದ ಸಾಕಷ್ಟು ಕಲಿಯುವ ಅನುಭವ ಸಿಗುತ್ತದೆ,' ಎಂದು ವಿಜಯ್ ಸೇತುಪತಿ ಹೇಳಿದರು.

712

ಆದರೂ, ಆಮೀರ್ ಸಿನಿಮಾದಿಂದ ವಿಜಯ್ ಹೊರ ಬರಬೇಕಾಗಿದೆ. 

812

ತೂಕ ಹೆಚ್ಚಾದ ಕಾರಣದಿಂದ ಸಿನಿಮಾ ತಪ್ಪಿದ ವರದಿಯ ಬಗ್ಗೆ ಕೇಳಿದಾಗ. 'ನನ್ನ ದೇಹ ಮತ್ತು ಮನಸ್ಸಿನಿಂದ ನಾನು ತುಂಬಾ ಕಂಫರ್ಟಬಲ್‌ ಆಗಿದ್ದೇನೆ. ನಾನು ಯಾವುದೇ ಪ್ರಾಜೆಕ್ಟ್‌ಗೆ  ಹೋದರೂ ಅವು ನನ್ನೊಂದಿಗೆ ಹೋಗುತ್ತವೆ, ' ಎಂದಿದ್ದಾರೆ ವಿಜಯ್.

912

'ಕೋವಿಡ್‌ ಕಾರಣದಿಂದ ಎಲ್ಲಾ ಯೋಜನೆಗಳೂ ಉಲ್ಟಾ ಹೊಡೆದವು. ಲಾಕ್‌ಡೌನ್ ತೆರವು ನಂತರ ಐದು ತೆಲುಗು ಪ್ರಾಜೆಕ್ಟ್‌ಗಳ ವಿವಿಧ ಹಂತಗಳ ಪ್ರೊಡಕ್ಷನ್‌ ಪೂರ್ಣಗೊಳಿಸಿದೆ. ನನ್ನ ವೇಳಾಪಟ್ಟಿಯಲ್ಲಿ ನಾನು ಲಾಲ್ ಸಿಂಗ್ ಚಾಧಾಗೆ ಅವಕಾಶ ಕಲ್ಪಿಸಲು ಸಾಧ್ಯವಾಗಲಿಲ್ಲ,' ಎಂದಿದ್ದಾರೆ ತಮಿಳು ಸೂಪರ್‌ಸ್ಟಾರ್‌. 
 
1012

ಆಮೀರ್ ಖಾನ್ ಬಗ್ಗೆ ಮಾತನಾಡುತ್ತಾ, ಬಾಲಿವುಡ್ ಸ್ಟಾರ್‌ ಚೆನ್ನೈಗೆ ಬಂದು ಸ್ಕ್ರಿಪ್ಟ್ ತಯಾರಿಸಿ,  ರಾತ್ರಿಯಿಡೀ ಉಳಿದುಕೊಂಡಿದ್ದನ್ನು ವಿಜಯ್ ನೆನಪಿಸಿಕೊಂಡಿದ್ದಾರೆ.

1112

'ಆಮೀರ್ ಸರ್ ವೈಯಕ್ತಿಕವಾಗಿ ನನಗೆ ಈ ಪಾತ್ರವನ್ನು ನೀಡಿದರು. ನಂತರ ಅವರು ತಮಿಳುನಾಡಿಗೆ ನಾನು ಶೂಟಿಂಗ್‌ ಮಾಡುವ ಸ್ಥಳಕ್ಕೆ ಬಂದು ಚಿತ್ರಕಥೆ ಹೇಳಿದರು. ಕೆಲವು ಕಾರಣಗಳಿಂದ ನಿರ್ದೇಶಕ ಅದ್ವೈತ್ ಚಂದನ್ ಬರಲು ಸಾಧ್ಯವಾಗಲಿಲ್ಲ. ಅಮೀರ್ ಒಬ್ಬರೇ ಬಂದು, ಸ್ಕ್ರಿಪ್ಟ್ ನಿರೂಪಿಸಿ, ಮರುದಿನ ಬೆಳಿಗ್ಗೆ ಹೋದರು. ಅಷ್ಟು ದೊಡ್ಡ ನಟನಾದರೂ ಸ್ವಲ್ಪವೂ ಜಂಭವಿಲ್ಲ. ಆಮೀರ್ ಅದ್ಭುತ ಕಥೆಗಾರ. ಅವರು ಕಥೆಯನ್ನು ನಿರೂಪಿಸಿದ ರೀತಿ ಮೋಡಿ ಮಾಡುವಂತಿತ್ತು. ನಾನು ತಕ್ಷಣ ಯೆಸ್‌ ಎಂದಿದ್ದೆ,' ಎಂದು ನೆನಪಿಸಿಕೊಳ್ಳುತ್ತಾರೆ ವಿಜಯ್.

1212

'ನಾನು ಮುಂಬೈಗೆ ಹೋದಾಗ, ಅಮೀರ್ ಸರ್ ನನ್ನನ್ನು ಅವರ ಮನೆಗೆ ಆಹ್ವಾನಿಸಿದ್ದರು. ಒಂದು ಬಾರಿ ಅಲ್ಲ, ಎರಡು ಬಾರಿ. ಅವರು ಪರ್ಫೆಕ್ಟ್‌ ಹೋಸ್ಟ್‌. ಅವರ ವಿನಯ ಮತ್ತು ಸಿನೆಮಾ  ಜ್ಞಾನಕ್ಕೆ ನಾನು ಫುಲ್ ಫಿದಾ. ಮುಂದಿನ ದಿನಗಳಲ್ಲಿ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾದರೆ ಸಂತೋಷ' ಎಂದು ವಿಜಯ್‌ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories