ಮದುವೆಯ ನಂತರ ಬಂಗಲೆಯಿಂದ ಹೊರ ಬಂದ ಕಪಲ್ ಮೀಡಿಯಾಗೆ ಪೋಸ್ ನೀಡಿದರು.
undefined
ದಿಯಾ ಮಿರ್ಜಾರ ಪತಿ ವೈಭವ್ ರೇಖಿ ಕುರ್ತಾ ಪೈಜಾಮ ಮತ್ತು ಪಗಡಿಯಲ್ಲಿ ಕಾಣಿಸಿಕೊಂಡರು.
undefined
ಸ್ವತಃ ನಟಿ ದಿಯಾ ಮಿರ್ಜಾ ಫೋಟೋಗ್ರಾಫರ್ಸ್‌ಗೆ ಸ್ವೀಟ್ ಹಂಚಿದರು. ಈ ಸಮಯದಲ್ಲಿ ಫೋಟೋಗ್ರಾಫರ್ಸ್ ನವ ಜೋಡಿಗೆ ಶುಭ ಹಾರೈಸಿದರು.
undefined
ಈ ಮೊದಲು ದಿಯಾ ಹಾಗೂ ವೈಭವ್ ರಿಲೆಷನ್‌ಶಿಪ್ ಅನ್ನು ಗೌಪ್ಯವಾಗಿ ಇಟ್ಟಿದ್ದರು.
undefined
ಇವರಿಬ್ಬರು ಜೊತೆಯಾಗಿ ಹೊರಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ದಿಯಾ ಹಾಗೂ ವೈಭವ್ ಭೇಟಿ ಲಾಕ್‌ಡೌನ್ ಸಮಯದಲ್ಲಿ ಆಯಿತು, ಎನ್ನಲಾಗುತ್ತಿದೆ.
undefined
ವೈಭವ್ ರೇಖಿ ಬ್ಯುಸಿನೆಸ್‌ಮ್ಯಾನ್ ಆಗಿದ್ದಾರೆ.
undefined
ಕೆಲವು ಸಮಯಗಳಿಂದ ಸ್ನೇಹಿತರಾಗಿದ್ದ ವೈಭವ್ ಹಾಗೂ ದಿಯಾ ಮದುವೆಯಾಗಲು ನಿರ್ಧರಿಸಿ, ಯೋಚನೆಯನ್ನು ಬೇಗನೇ ಕಾರ್ಯ ರೂಪಕ್ಕೆ ತಂದಿದ್ದಾರೆ.
undefined
ದಿಯಾ ಹಾಗೂ ರೇಖಿ ಇಬ್ಬರಿಗೂ ಇದು ಎರಡನೇ ಮದುವೆ.
undefined
ದಿಯಾ ಮಿರ್ಜಾರ ಮೊದಲ ಪತಿ ಫಿಲ್ಮಂ ಮೇಕರ್ ಸಾಹಿಲ್ ಸಂಘ್ ಆಗಿದ್ದರೆ, ವೈಭವ್ ಫೇಮಸ್ ಯೋಗ ಥೆರಿಪಿಸ್ಟ್ ಸುನೈನಾರನ್ನು ಮದುವೆಯಾಗಿದ್ದರು. ನಂತರ ಎರಡೂ ಜೋಡಿಯೂ ಬೇರೆಯಾಗಿತ್ತು.ಸುನೈನಾ ಹಾಗೂ ವೈಭವ್‌ಗೆ ಒಬ್ಬ ಮಗಳೂ ಇದ್ದಾಳೆ.
undefined
ದಿಯಾ ಮಿರ್ಜಾ ಸಾಹಿಲ್ ಸಂಘ್ ಅವರನ್ನು ಅಕ್ಟೋಬರ್ 18, 2014ರಂದು ವಿವಾಹವಾಗಿದ್ದರು. ಸಾಹಿಲ್ ಅವರ ಬ್ಯುಸಿನೆಸ್ ಪಾರ್ಟನರ್ ಕೂಡ ಆಗಿದ್ದರು. 5 ವರ್ಷಗಳ ನಂತರ, ಇಬ್ಬರೂ ಆಗಸ್ಟ್ 2019ರಲ್ಲಿ ಬೇರೆಯಾದರು.
undefined
39 ವರ್ಷದ ದಿಯಾ ಮಿರ್ಜಾ 'ರಹನಾ ಹೈ ತೇರೆ ದಿಲ್ ಮೇ' ಚಿತ್ರದ ಮೂಲಕ ಗುರುತಿಸಲ್ಪಟ್ಟರು. ಈ ಸಿನಿಮಾದಲ್ಲಿ ಆರ್ ಮಾಧವನ್ ಮತ್ತು ಸೈಫ್ ಅಲಿ ಖಾನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು.ದಿಯಾ ಮಿಸ್ ಏಷ್ಯಾ ಪೆಸಿಫಿಕ್ ಕಿರೀಟವನ್ನು ಗೆದ್ದಿದ್ದಾರೆ.
undefined