ಫೋಟೋಗಳು :ರವೀನಾ ಟಂಡನ್ ಸೀ ಫೇಸಿಂಗ್ ಬಂಗ್ಲೆ ಹೇಗಿದೆ ನೋಡಿ!
First Published | Oct 27, 2020, 8:11 PM ISTಬಾಲಿವುಡ್ ನಟಿ ರವೀನಾ ಟಂಡನ್ ಅನೇಕ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದರು. ಅವರ ಕಾಲದ ಫೇಮಸ್ ನಟಿಯರಲ್ಲಿ ಒಬ್ಬರಾಗಿದ್ದ ರವೀನಾ ಲವ್ ಲೈಫ್‌ನಿಂದಾಗಿ ಸುದ್ದಿಯಲ್ಲಿದ್ದರು. ಅಕ್ಷಯ್ ಕುಮಾರ್‌ನಿಂದ ಅಜಯ್ ದೇವಗನ್ ವರೆಗೆ ಹಲವು ಕೋಸ್ಟಾರ್‌ಗಳ ಜೊತೆ ಇವರ ಹೆಸರು ಕೇಳಿ ಬಂದಿತ್ತು. ಆದರೆ ಪ್ರೀತಿಯಲ್ಲಿ ಮಾತ್ರ ಮೋಸ ಹೋದರು. ಅಕ್ಷಯ್ ಜೊತೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ, ವಿಷಯ ಮದುವೆಯವರೆಗೆ ತಲುಪುವ ಮೊದಲೇ ಇಬ್ಬರ ಸಂಬಂಧವು ಮುರಿದು ಹೋಯಿತು. ನಂತರ, ರವೀನಾ ಚಲನಚಿತ್ರ ವಿತರಕ ಅನಿಲ್ ತಡಾನಿಯನ್ನು ವಿವಾಹವಾದರು. ನಟಿಯ ಮುಂಬೈನ ಬಾಂದ್ರಾದಲ್ಲಿರುವ ಭವ್ಯ ಬಂಗಲೆ 'ನಿಲಯ'ದ ಫೋಟೋಗಳು ಇಲ್ಲಿವೆ.