ಬಟ್ಟೆಯಲ್ಲ ರಶ್ಮಿಕಾ ವಿಜಯ್ ಜ್ಯುವೆಲರಿ ಬಗ್ಗೆ ಚರ್ಚೆ , ನವ ದಂಪತಿಗೆ ಗೋಲ್ಡ್‌ ಕಪಲ್‌ ಪಟ್ಟ

Published : Feb 27, 2026, 12:29 PM IST

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ರಾಯಲ್ ವೆಡ್ಡಿಂಗ್ ಸದ್ಯ ಸುದ್ದಿಯಲ್ಲಿದೆ. ಫೆಬ್ರವರಿ 26 ರಂದು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಆಂಧ್ರ, ಕೊಡವ ಪದ್ಧತಿ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ರಶ್ಮಿಕಾ ಹಾಗೂ ವಿಜಯ್  ಧರಿಸಿದ್ದ ಆಭರಣಗಳು ಈಗ ಟ್ರೆಂಡ್ ಆಗ್ತಿದೆ. 

PREV
15
ಗೋಲ್ಡನ್ ಕಪಲ್

ಬಂಗಾರದ ಬೆಲೆ ಆಕಾಶ ಮುಟ್ಟಿದೆ. ಜನಸಾಮಾನ್ಯರು ಬಂಗಾರ ಅಂದ್ರೆ ಮಾರು ದೂರು ಓಡುವ ಸ್ಥಿತಿ ಇದೆ. ಆದ್ರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯಲ್ಲಿ ಈ ಬಂಗಾರವೇ ಹೈ ಲೈಟ್. ಕೋಟಿ ಕೋಟಿ ಬೆಲೆ ಬಾಳುವ ಬಂಗಾರದ ಆಭರಣಗಳಲ್ಲಿ ದಂಪತಿ ಮುಚ್ಚಿ ಹೋಗಿದ್ರು. ಅದೇ ಕಾರಣಕ್ಕೆ ನೆಟ್ಟಿಗರು ಅವರನ್ನ ಗೋಲ್ಡನ್ ಕಪಲ್ ಅಂತ ಕರಿತಿದ್ದಾರೆ.

25
ಮೈ ತುಂಬಾ ಬಂಗಾರ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮೈತುಂಬ ಚಿನ್ನದ ಆಭರಣ ಧರಿಸಿದ್ದು, ನೆಟ್ಟಿಗರ ಕಣ್ಣು ಕುಕ್ಕಿದೆ. ಡ್ರೆಸ್ ಗೆ ತಕ್ಕಂತೆ ಚಿನ್ನದ ಆಭರಣಗಳನ್ನು ಅವರು ಮ್ಯಾಚ್ ಮಾಡಿದ್ದಾರೆ. ದಂಪತಿ ತಲೆಯಿಂದ ಕಾಲಿನವರೆಗೆ ಚಿನ್ನದ ಆಭರಣಗಳಿಂದ ಅಲಂಕಾರಗೊಂಡಿದ್ರು. ರಶ್ಮಿಕಾ ಮೈಮೇಲಿದ್ದ ಬಂಗಾರ ಎಲ್ಲರ ಗಮನ ಸೆಳೆದಿದೆ. ವಿಜಯ್ ಅವರ ಆಭರಣಗಳು ಟ್ರೆಂಡ್ಸೆಟರ್ ಆಗಿ ಮಾರ್ಪಟ್ಟಿವೆ.

35
ಫ್ಯಾಷನ್ ಐಕಾನ್ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ, ರಾಜನಂತೆ ಮಿಂಚಿದ್ದಾರೆ. ಮಣಿರತ್ನಂ, ಬನ್ಸಾಲಿ ಸಿನಿಮಾ ಶೂಟಿಂಗ್ ನಿಂದ ನೇರವಾಗಿ ಮದುವೆ ಮಂಟಪಕ್ಕೆ ಬಂದಂತೆ ಕಾಣ್ತಿದ್ರು ವಿಜಯ್ ದೇವರಕೊಂಡ. ವಿಜಯ್ ಪ್ರಾಚೀನ ಮತ್ತು ಸಾಂಪ್ರದಾಯಿಕ ಟೆಂಪಲ್ ಆಭರಣಗಳನ್ನು ಧರಿಸಿದ್ದರು. ತಮ್ಮ ಆಭರಣಗಳೊಂದಿಗೆ ಫ್ಯಾಷನ್ ಜಗತ್ತನ್ನು ಸೆಳೆದಿದ್ದಾರೆ. ಕಿವಿಯೋಲೆ, ಉದ್ದನೆಯ ಟೆಂಪಲ್ ಸ್ಟೇಟ್ಮೆಂಟ್ ಹಾರ, ಕಾಸು ಮಾಲೆ, ಹಣೆಯ ಮೇಲೆ ಪೆಲ್ಲಿ ಬಾಸಿಂಗ, ತೋಳಿನ ಪಟ್ಟಿ, ಮಣಿಕಟ್ಟಿನ ಪಟ್ಟಿ, ಎಂಕಲ್ ಬಳೆ, ಟೆಂಪಲ್ ಹರಾಮ್, ಚಿನ್ನದ ಉಂಗುರಗಳು ಮತ್ತು ಚಿನ್ನದ ಬೆಲ್ಟ್ ಸೇರಿದಂತೆ ಚಿನ್ನದ ಆಭರಣಗಳನ್ನು ವಿಜಯ್ ದೇವರಕೊಂಡ ಧರಿಸಿದ್ದರು.

45
ಬಂಗಾರದ ವಧು ರಶ್ಮಿಕಾ

ರಶ್ಮಿಕಾ, ಹೈದ್ರಾಬಾದ್ ಪರಂಪರೆ ಬಿಂಬಿಸುವ ದಪ್ಪ ಕೆಂಪು ಬಾರ್ಡರ್ ಹೊಂದಿರುವ ರಿಚ್ ರಸ್ಟ್ ಸೀರೆಯನ್ನು ಧರಿಸಿದ್ದರು. ರಶ್ಮಿಕಾ ಗೋಲ್ಡನ್ ದುಪಟ್ಟಾ ಮೇಲೆ ವಿಜಯ್ ದೇವರಕೊಂಡ ಅವರಿಗಾಗಿ ಒಂದು ರೋಮ್ಯಾಂಟಿಕ್ ಬರವಣಿಗೆ ಇತ್ತು. In every lifetime ಅಂತ ಅವರು ಬರೆಸಿಕೊಂಡಿದ್ದಾರೆ. ಗೋಲ್ಡ್ ವಿಷ್ಯಕ್ಕೆ ಬರೋದಾದ್ರೆ ರಶ್ಮಿಕಾ ಅಗಲವಾದ ಟೆಂಪಲ್ ಚೋಕರ್ ಧರಿಸಿದ್ದರು. ಮ್ಯಾಂಗೋ ಶೈಲಿಯ ಉದ್ದನೆಯ ಸರ ಮತ್ತು ಕಾಸು ಮಾಲೆ ಸೇರಿದಂತೆ ಭಾರವಾದ ಮಲ್ಟಿಲೇಯರ್ ಗೋಲ್ಡ ಟೆಂಪಲ್ ಹಾರವನ್ನು ಧರಿಸಿದ್ದರು. ಗೋಲ್ಡ್ ಚೈನ್ ಅಟ್ಯಾಚ್ ಆಗಿರುವ ಕಿವಿಯೋಲೆ, ಟಿಕ್ಕಾ, ಮಾತಾ ಪಟ್ಟಿ, ಶೋಲ್ಡರ್ ಗೋಲ್ಡ್ ಕಫ್ಗಳು, ಚಿನ್ನದ ಬಳೆಗಳು, ಸೊಂಟಪಟ್ಟಿ, ಪೆಲ್ಲಿ ಬಾಸಿಂಗ, ಗೋಲ್ಡ್ ಹೇರ್ ಎಕ್ಸಸರಿಸ್ ಧರಿಸಿದ್ದರು. ಇಷ್ಟೇ ಅಲ್ಲ ಚಿನ್ನದ ಉಂಗುರ ಸೇರಿದಂತೆ ಅನೇಕ ಆಭರಣ ರಶ್ಮಿಕಾ ಸೌಂದರ್ಯ ಡಬಲ್ ಮಾಡಿತ್ತು. ಅತ್ಯಂತ ಕಡಿಮೆ ಮೇಕಪ್ ಮಾಡ್ಕೊಂಡಿದ್ದ ಅವರ ಲುಕ್ ಎಲ್ಲರನ್ನು ಸೆಳೆದಿದೆ.

55
ಅಭಿಮಾನಿಗಳ ಮೆಚ್ಚುಗೆ

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಅಭಿಮಾನಿಗಳ ಮನಸ್ಸು ಮುಟ್ಟಿದೆ. ಇಲ್ಲಿ ಆಡಂಭರ, ಆಭರಣಕ್ಕಿಂತ ಜನರು ಭಾವನೆಗಳಿಗೆ ಬೆಲೆ ನೀಡಿದ್ದಾರೆ. ಸಂಪ್ರದಾಯ, ಸಂಸ್ಕೃತಿ ಬಿಂಬಿಸುವ ಈ ಮದುವೆ ಒಂದು ದೈವಿಕ ಕ್ಷಣ ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories