ರಶ್ಮಿಕಾ - ದೇವರಕೊಂಡ: ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ಸೌತ್‌ ಸ್ಟಾರ್ಸ್‌!

Published : Aug 01, 2021, 05:26 PM ISTUpdated : Aug 01, 2021, 05:42 PM IST

ದಕ್ಷಿಣದ ಹಲವು ಸ್ಟಾರ್ಸ್‌ ತಮ್ಮ ನಟನೆಯ ಮೂಲಕ ಇಡೀ ದೇಶ ಗಮನ ಸೆಳೆದಿದ್ದಾರೆ. ಅದರ ಜೊತೆಗೆ  ಸೌತ್‌ನಿಂದ ಸಾಕಷ್ಟು ಜನ ನಟ ನಟಿಯರು ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಶ್ರೀದೇವಿಯಿಂದ ಹಿಡಿದು ಕಿಚ್ಚ ಸುದೀಪ್‌ ವರೆಗೆ  ರಜನಿಕಾಂತ್, ಕಮಲ್ ಹಾಸನ್, ರಾಣಾ ದಗ್ಗುಬತಿ, ಪ್ರಭಾಸ್ ಮುಂತಾದವರು  ಈ ಪಟ್ಟಿಯಲ್ಲಿದ್ದಾರೆ. ಇಷ್ಟೇ ಅಲ್ಲದೇ ಹಲವು ಯಂಗ್‌ ತಾರೆಗಳು ಸಹ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಆ ಮಾಹಿತಿ ಇಲ್ಲಿ.

PREV
17
ರಶ್ಮಿಕಾ  -  ದೇವರಕೊಂಡ: ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ಸೌತ್‌ ಸ್ಟಾರ್ಸ್‌!

ಅನೇಕ ಬಾಲಿವುಡ್ ನಟರು ಆಲಿಯಾ ಭಟ್, ರವೀನಾ ಟಂಡನ್, ಸಂಜಯ್ ದತ್, ಐಶ್ವರ್ಯ ರೈ, ಶಾರುಖ್ ಖಾನ್ ಮುಂತಾದ ದಕ್ಷಿಣದ ಸಿನಿಮಾರಂಗಕ್ಕೆ ಪ್ರವೇಶ ನೀಡಲು ಸಜ್ಜಾಗಿರುವ ಸಮಯದಲ್ಲೇ ಸೌತ್‌ನ ಹಲವು ಮುಖಗಳ ಬಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ. ನಾಗಚೈತನ್ಯ, ವಿಜಯ್ ದೇವರಕೊಂಡ, ವಿಜಯ್ ಸೇತುಪತಿ, ರಶ್ಮಿಕಾ ಮಂದಣ್ಣ, ಮುಂತಾದ ದಕ್ಷಿಣದ ಜನಪ್ರಿಯ ಚಲನಚಿತ್ರ ನಟರು ಸಮಂತಾ ಅಕ್ಕಿನೇನಿ, ಜೀವಾ ಮತ್ತು ಇತರರು ಪ್ಯಾನ್-ಇಂಡಿಯಾ ದೊಡ್ಡ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

27

ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದು, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ನಟಿಸಲಿದ್ದಾರೆ. ಇದರ ಜೊತೆ ರಶ್ಮಿಕಾ ಅಮಿತಾಬ್ ಬಚ್ಚನ್ ಮತ್ತು ನೀನಾ ಗುಪ್ತಾ ಜೊತೆ ಮತ್ತೊಂದು ಬಾಲಿವುಡ್ ಚಿತ್ರ ಗುಡ್‌ಬೈನಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ.

37

ರಾಜಿ' ವೆಬ್‌ ಸೀರಿಸ್‌ನಿಂದ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚಿಗೆ ಗಳಿಸಿರುವ ಸಮಂತಾ ಅಕ್ಕಿನೇನಿ ಫ್ಯಾಮಿಲಿ ಮ್ಯಾನ್ 2 ಮೂಲಕ ಪ್ರಸ್ತುತ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸ್ಕ್ರಿಪ್ಟ್ ಓದುತ್ತಿದ್ದಾರೆ.

47

ಸೌತ್‌ನ ಹಾರ್ಟ್‌ಥ್ರೊಬ್‌ ವಿಜಯ್ ದೇವರಕೊಂಡ ಸಹ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಲಿಗರ್ ಚಿತ್ರದಲ್ಲಿ ದೇವರಕೊಂಡ ಅನನ್ಯ ಪಾಂಡೆ, ರೋನಿತ್ ರಾಯ್ ಮತ್ತು ರಮ್ಯಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸಿದ್ದಾರೆ ಮತ್ತು ಕರಣ್ ಜೋಹರ್ ಸಹ-ನಿರ್ಮಾಣ ಮಾಡಿದ್ದಾರೆ

57

ಅರ್ಜುನ್ ರೆಡ್ಡಿ ನಟಿ ಶಾಲಿನಿ ಪಾಂಡೆ ರಣವೀರ್ ಸಿಂಗ್ ಅವರ ಜಯೇಶ್‌ಭಾಯ್ ಜೋರ್ದಾರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. YRF ಪ್ರೊಡೆಕ್ಷನ್‌ನ ಈ ಸಿನಿಮಾವನ್ನು ದಿವ್ಯಾಂಗ್ ಥಕ್ಕರ್ ನಿರ್ದೇಶಿಸಿದ್ದಾರೆ.

67

ತೆಲುಗು ನಟ ನಾಗಾರ್ಜುನ ಅವರ ಪುತ್ರ ಅಕ್ಕಿನೇನಿ ನಾಗ ಚೈತನ್ಯ, ಅಮೀರ್ ಖಾನ್ ಅವರ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

77

ತಮಿಳು ಜನಪ್ರಿಯ ತಾರೆ ವಿಜಯ್ ಸೇತುಪತಿ ತಮಿಳು ಚಿತ್ರ ಮನಗರಂ ಚಿತ್ರದ ರಿಮೇಕ್ ಮುಂಬೈಕರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂತೋಷ್ ಶಿವನ್ ನಿರ್ದೇಶನದ ಈ ಚಿತ್ರದಲ್ಲಿ ತಾನ್ಯಾ ಮಣಿಕ್ತಾಲಾ, ವಿಕ್ರಾಂತ್ ಮಾಸ್ಸಿ, ಹೃಧು ಹರೂನ್, ಸಂಜಯ್ ಮಿಶ್ರಾ, ರಣವೀರ್ ಶೋರೆ ಮತ್ತು ಸಚಿನ್ ಖೇಡೇಕರ್ ನಿರ್ಣಾಯಕ ಪಾತ್ರಗಳಲ್ಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories