ನಾನು ಆರ್‌ಸಿಬಿಯ ನಿಷ್ಠಾವಂತ ಅಭಿಮಾನಿ: ನ್ಯಾಷನಲ್​ ಕ್ರಶ್ ರಶ್ಮಿಕಾ ಮಂದಣ್ಣ

First Published | Apr 1, 2024, 11:37 AM IST

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡಕ್ಕಿರುವ ಕ್ರೇಜ್​ ಬೇರೆ ಯಾವ ತಂಡಕ್ಕೂ ಇಲ್ಲ. 16 ವರ್ಷಗಳ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಜಯಿಸದಿದ್ದರೂ ಆರ್​ಸಿಬಿಗೆ ಇರುವ ಕ್ರೇಜ್​ ಮತ್ತು ಖ್ಯಾತಿ ಗುಲಗಂಜಿಯಷ್ಟು ಕಡಿಮೆಯಾಗಿಲ್ಲ. 

ಕೆಲವು ದಿನಗಳ ಹಿಂದಷ್ಟೇ ಕಾಲಿವುಡ್​ ನಟಿ ವರ್ಷಾ ಬೊಲ್ಲಮ್ಮಾ ತಾನು ಆರ್​ಸಿಬಿ ಫ್ಯಾನ್​ ಎಂದು ಹೇಳಿಕೊಂಡಿದ್ದರು. ಅಲ್ಲದೆ, ಒಂದು ಬಾರಿಯಾದರೂ ಆರ್​ಸಿಬಿ ಕಪ್​ ಗೆಲ್ಲಬೇಕು ಎಂದರು. ಇದೀಗ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಕೂಡ ತಾನು ಆರ್​ಸಿಬಿ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ತಾನು ಆರ್‌ಸಿಬಿಯ ನಿಷ್ಠಾವಂತ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಆರ್‌ಸಿಬಿ ಅಭಿಮಾನಿ. ಜೊತೆಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಮೇಲೂ ಅಭಿಮಾನ ಇದೆ. 

Tap to resize

ಆ ಎರಡು ತಂಡಗಳು ಎದುರು ಬದುರು ಬಂದಾಗ ಏನು ಮಾಡಬೇಕು ಅಂತ ಯೋಚಿಸಬೇಕು ಎಂದು ಹೇಳಿದ್ದಾರೆ. ಈ ಟ್ವೀಟ್‌ಗೆ ಆರ್‌ಬಿಸಿ ಅಭಿಮಾನಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.
 

ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ,  2016ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಬಳಿಕ ಎರಡು ಕನ್ನಡ ಸಿನಿಮಾದಲ್ಲಿ ನಟಿಸಿದರು. ನಂತರ ಟಾಲಿವುಡ್​ಗೆ ಹಾರಿದ್ದಾರೆ.

ಚಲೋ ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಗೀತಾ ಗೋವಿಂದಂ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ, ರಶ್ಮಿಕಾ ಜೋಡಿ ಟಾಲಿವುಡ್ ಜನರನ್ನು ಮೋಡಿ ಮಾಡಿತು.
 

ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಷ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಯ್ತು. ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು ಬಾಲಿವುಡ್ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ ಇದೀಗ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

Latest Videos

click me!