Published : May 04, 2025, 07:23 PM ISTUpdated : May 04, 2025, 07:34 PM IST
ರಶ್ಮಿಕಾ ಮಂದಣ್ಣ ವರ್ಷಗಳಿಂದ ರಹಸ್ಯವಾಗಿಟ್ಟಿದ್ದ ಕೆಲ ಸೆಲ್ಫಿಗಳನ್ಮು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. ಹಲವು ಅವತಾರದ 8 ಸೆಲ್ಫಿ ಇದೀಗ ವೈರಲ್ ಆಗಿದೆ. ಇದೇ ಮೊದಲ ಬಾರಿಗೆ ಎಲ್ಲೂ ಪೋಸ್ಟ್ ಮಾಡದೆ,ಯಾರ ಜೊತೆಗೂ ಹಂಚಿಕೊಳ್ಳದ ರಶ್ಮಿಕಾ ಸೆಲ್ಫಿ ಫೋಟೋ ಇದು.
ರಶ್ಮಿಕಾ ಮಂದಣ್ಣ ಸದ್ಯ ಅತೀ ಹೆಚ್ಚು ಬೇಡಿಕೆಯ ನಟಿ. ಬಾಲಿವುಡ್, ಕಾಲಿವುಡ್ ಸೇರಿದಂತೆ ಭಾರತೀಯ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಂಬರ್ 1 ನಟಿಯಾಗಿ ಮಿಂಚುತ್ತಿದ್ದಾರೆ. ಸತತ ಸೂಪರ್ ಹಿಟ್ ಸಿನಿಮಾ ನೀಡಿದ ಹೆಗ್ಗಳಿಕೆಗೆ,ಪ್ರತಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಶ್ಮಿಕಾ ಮಂದಣ್ಣ ಅಭಿನಯಿಸಿದ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇದೀಗ ರಶ್ಮಿಕಾ ಮಂದಣ್ಣ ತಮ್ಮ ಸೀಕ್ರೆಟ್ ಫೋಟೋಗಳನ್ನು ಬಹಿರಂಗಪಡಿಸಿದ್ದಾರೆ.
27
ರಶ್ಮಿಕಾ ಮಂದಣ್ಣ ವೀಕೆಂಡ್‌ಗೆ ಅಭಿಮಾನಿಗಳು ಸೆಲ್ಫಿ ಫೋಟೋ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ವರ್ಷಗಳಿಂದ ರಶ್ಮಿಕಾ ಮಂದಣ್ಣ ರಹಸ್ಯವಾಗಿಟ್ಟಿದ್ದ ಕೆಲ ಸೆಲ್ಫಿ ಫೋಟೋಗಳನ್ನು ಬಹಿರಂಗಪಡಿಸಿದ್ದಾರೆ. ಇದು ಕೆಲ ವರ್ಷಗಳ ಸೆಲ್ಫಿ ಫೋಟೋ ಆಗಿದೆ. ಈ ಫೋಟೋಗಳನ್ನು ರಶ್ಮಿಕಾ ಮಂದಣ್ಣ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಲ್ಲ. ಯಾರ ಜೊತೆಗೂ ಹಂಚಿಕೊಂಡಿಲ್ಲ. ಹೀಗಾಗಿಯೇ ಈ ಪೋಟೋಗಳು ಹಲವರ ಕುತೂಹಲ ಹೆಚ್ಚಿಸಿದೆ.
37
ಈ ರಹಸ್ಯ ಸೆಲ್ಫಿ ಫೋಟೋಗಳನ್ನು ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ನಾನು ವರ್ಷಗಳಿಂದ ರಹಸ್ಯವಾಗಿ ಕಾಪಾಡಿಕೊಂಡಿದ್ದ ಸೆಲ್ಫಿ ಫೋಟೋಗಳನ್ನು ಇಲ್ಲಿ ಡಂಪ್ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. 8 ಸೆಲ್ಫಿ ಫೋಟೋಗಳನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. ಬೆಳಗ್ಗೆ ಎದ್ದಾಗ ತೆಗೆದ ಸೆಲ್ಫಿ, ಪ್ರಯಾಣದ ವೇಳೆ, ಜಿಮ್ ಅಭ್ಯಾಸದ ನಡುವು ಹೀಗೆ ಹಲವು ಸಂದರ್ಭಗಳಲ್ಲಿ ತೆಗೆದ ಸೆಲ್ಫಿ ಇದಾಗಿದೆ.
ರಶ್ಮಿಕಾ ಮಂದಣ್ಣ ಸದ್ಯ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ಸಿಕಂದರ್ ಸಿನಿಮಾ ತರೆ ಕಂಡ ಬಳಿಕ ಇದೀಗ ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿಕಂದರ್ ಸಿನಿಮಾ ತೆರೆಗೆ ಬಂದ ಬಳಿಕ ಹುಟ್ಟು ಹಬ್ಬ ಆಚರಿಸಿಕೊಂಡ ರಶ್ಮಿಕಾ ಮಂದಣ್ಣ ಕೆಲ ದಿನ ವಿಶ್ರಾಂತಿ ಪಡೆದ್ದರು. ಓಮನ್‌ನಲ್ಲಿ ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು.
57
ಆ್ಯನಿಮಲ್, ಪುಷ್ಪಾ 2, ಛಾವಾ ಸತತ 3 ಸೂಪರ್ ಹಿಟ್ ಸಿನಿಮಾ ಕೊಟ್ಟ ರಶ್ಮಿಕಾ ಮಂದಣ್ಣ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಆದರೆ ರಶ್ಮಿಕಾ ಹಾಗೂ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ರಶ್ಮಿಕಾ ಸಿನಿ ಕರಿಯರ್‌ನಲ್ಲಿ ಕೊಂಚ ಹಿನ್ನಡೆ ಕೊಟ್ಟ ಸಿನಿಮಾ ಆಗಿ ಸಿಕಂದರ್ ಗುರತಿಸಿಕೊಂಡಿದೆ.
67
ಅಲ್ಲು ಅರ್ಜುನ್ ಜೊತೆಗೆ ಪುಷ್ಪಾ 2 ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಹಲವು ದಾಖಲೆ ಬರೆದಿತ್ತು. ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮೂಲಕ ದಾಖಲೆ ಬರೆದಿತ್ತು. ಇನ್ನು ರಣಬೀರ್ ಕಪೂರ್ ಜೊತೆಗಿನ ಆ್ಯನಿಮಲ್ ಸಿನಿಮಾ ಕೂಡ ಬಾಲಿವುಡ್ ಸಿನಿಮಾ ರಂಗಕ್ಕೇ ಚೇತರಿಕೆ ನೀಡಿದ ಸಿನಿಮಾ ಆಗಿತ್ತು. ಇಷ್ಟೇ ಅಲ್ಲ ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧಾರಿತ ಛಾವಾ ಸಿನಿಮಾ ಕೂಡ ಭರ್ಜರಿ ಹಿಟ್ ಕಂಡಿತ್ತು.
77
ಸದ್ಯ ರಶ್ಮಿಕಾ ಮಂದಣ್ಣ ಊಟಿ, ಹೈದರಾಬಾದ್, ಮುಂಬೈ ಹಾಗೂ ವಿದೇಶಗಳಲ್ಲೂ ಶೂಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ಸತತ ಕೆಲಸ,ಶೂಟಿಂಗ್ ಕುರಿತು ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಇದೇ ವೇಳೆ ಯುವ ಸಮೂಹ ಗೆಳೆತನ ಮಾಡುವಾಗ ಎಚ್ಚರವಿರಬೇಕು ಎಂದು ಸಲಹೆ ನೀಡಿದ್ದರು.