ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿಯ ನಡುವೆಯೇ, ವಿಜಯ್ ಜೊತೆಗಿನ ತಮ್ಮ ಮೊದಲ ಕಿಸ್ಸಿಂಗ್ ಅನುಭವವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ನೂರಾರು ಜನರ ಮುಂದೆ ಕಿಸ್ ಮಾಡಲು ಆರಂಭದಲ್ಲಿ ಮುಜುಗರವಾದರೂ, ವಿಜಯ್ ಅವರ ಸಹಕಾರದಿಂದ ಆ ದೃಶ್ಯವನ್ನು ಸುಲಭವಾಗಿ ಮಾಡಿದೆ ಎಂದಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಜೋಡಿ ನಾಳೆ ಅರ್ಥಾತ್ ಫೆ.26ರಂದು ಮದುವೆಯಾಗಲಿದೆ. ಇದಾಗಲೇ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಇಂದು ಹಳದಿ ಶಾಸ್ತ್ರ ಮಾಡಲಾಗಿದ್ದು, ಅದರ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
26
ಹಲವು ವರ್ಷಗಳ ಸಂಬಂಧ
ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಹಲವು ವರ್ಷಗಳಿಂದ ಸಂಬಂಧದಲ್ಲಿ ಇದ್ದರು. ಮದುವೆಯ ಬಗ್ಗೆ ಕೊನೆಯವರೆಗೂ ಗುಟ್ಟಾಗಿಯೇ ಇಟ್ಟಿದ್ದರು. ಇವರ ಮದುವೆ ಬಗ್ಗೆ ಸುದ್ದಿಗಳು ಹರಡುತ್ತಿದ್ದರೂ ಅದನ್ನು ಅವರು ಅಲ್ಲಗಳೆಯುತ್ತಲೇ ಬಂದವರು. ಹಲವಾರು ಊರುಗಳಿಗೆ, ದೇಶಗಳಿಗೆ ಒಟ್ಟಿಗೇ ಹೋಗಿ ಮಾಡಿ ಬಂದಿದ್ದರೂ, ಜೋಡಿ ಎಲ್ಲವನ್ನೂ ಗುಟ್ಟಾಗಿಯೇ ಇಟ್ಟಿತ್ತು.
36
ಕಿಸ್ಸಿಂಗ್ ಅನುಭವ
ಇದೀಗ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಜೊತೆಗೆ ತಮ್ಮ ಮೊದಲ ಕಿಸ್ಸಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಇದು ಆನ್ಸ್ಕ್ರೀನ್ ಕಿಸ್ಸಿಂಗ್ ಕುರಿತು, ಅರ್ಥಾತ್ ಸಿನಿಮಾದಲ್ಲಿ ಮೊದಲ ಬಾರಿಗೆ ವಿಜಯ್ ಜೊತೆಗೆ ಕಿಸ್ ಮಾಡಿದಾಗ ಏನಾಯ್ತು ಎಂದು ಅವರು ವಿವರಿಸಿದ್ದಾರೆ. ಅದರ ಸಂದರ್ಶನದ ತುಣುಕು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅದು ಗೀತ ಗೋವಿಂದಂ ಚಿತ್ರ. ಈ ಚಿತ್ರ 2018ರಲ್ಲಿ ರಿಲೀಸ್ ಆಗಿದೆ. ಇದರಲ್ಲಿ ಇವರಿಬ್ಬರೂ ಗಂಡ-ಹೆಂಡತಿ. ಆ ಸಮಯದಲ್ಲಿ ಅಲ್ಲಿದ್ದ 200 ಮಂದಿಯ ಎದುರು ಮೊದಲ ಬಾರಿಗೆ ವಿಜಯ್ ಅವರನ್ನು ಮುತ್ತಿಕ್ಕಬೇಕಾದರೆ ಎಷ್ಟು ಕಷ್ಟ ಆಯಿತು ಎಂದು ಅವರು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
56
ಕಂಫರ್ಟ್ ಎನ್ನಿಸಬೇಕು
ನನಗೆ ಇದರ ಅನುಭವ ಇರಲಿಲ್ಲ. ಆರಂಭದಲ್ಲಿ ಆಘಾತಕಾರಿಯಾಗಿತ್ತು. ಅದೇ ವೇಳೆ ಯಾರೊಂದಿಗೆ ಆ ದೃಶ್ಯವನ್ನು ಮಾಡುತ್ತೀರಿ ಎನ್ನುವುದೂ ಮುಖ್ಯವಾಗುತ್ತದೆ. ಆ ಕಡೆ ಇದ್ದವರಿಗೂ ಇದೇ ರೀತಿಯ ಮುಜುಗರ ಆಗುತ್ತಿರುತ್ತದೆ. ಆದ್ದರಿಂದ ಅವರು ನಮಗೆ ಕಂಫರ್ಟ್ ಎನ್ನಿಸಿದರೆ ಇಂಥ ದೃಶ್ಯ ಮಾಡಲು ಸುಲಭವಾಗುತ್ತದೆ. ಹಾಗೆಯೇ ನಾನೂ ಅಡ್ಜೆಸ್ಟ್ ಆಗಿಬಿಟ್ಟೆ ಎಂದಿದ್ದಾರೆ.
66
ವಿಜಯ್ ಸಹಕರಿಸಿದ್ರು
ಸಿನಿಮಾಕ್ಕೆ ಅಗತ್ಯ ಬಿದ್ದರೆ ಇಂಥ ದೃಶ್ಯಗಳನ್ನು ಬೇಡ ಎನ್ನಲು ಆಗುವುದಿಲ್ಲ. ಈ ಸಿನಿಮಾದಲ್ಲಿ ನಮ್ಮದು ಪತಿ-ಪತ್ನಿ ರೋಲ್. ಮದುವೆಯಾದ ಮೇಲೆ ದಂಪತಿ ಎಲ್ಲವನ್ನೂ ಮಾಡಬೇಕಾಗುತ್ತದೆ. ಆದ್ದರಿಂದ ಕಿಸ್ ಮಾಡುವುದು ಅನಿವಾರ್ಯವಾಗಿತ್ತು. ವಿಜಯ್ ಅವರು ಕೂಡ ತುಂಬಾ ಸಹಕರಿಸಿದ್ದರಿಂದ ಈಸಿಯಾಗಿ ಕಿಸ್ ಮಾಡಿದೆ ಎಂದಿದ್ದಾರೆ ರಶ್ಮಿಕಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.