'ಶಾದಿ ಮುಬಾರಕ್' ಎಂದವರಿಗೆ ರಶ್ಮಿಕಾ ಮಂದಣ್ಣ ಕೊಟ್ಟ ರಿಯಾಕ್ಷನ್ ಇದು.. ಅಂದ್ರೆ, ವಿಜಯ್-ರಶ್ಮಿಕಾ ಮದುವೆ ಕಥೆ ಏನು?

Published : Feb 16, 2026, 04:23 PM IST

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಆಸಕ್ತಿದಾಯಕ ಘಟನೆಯೊಂದು ನಡೆದಿದೆ. ಆಗಿ ಸಖತ್ ಮಿಂಚುತ್ತಿದ್ದ ರಶ್ಮಿಕಾ ಅವರನ್ನು ಕಂಡ ಕ್ಯಾಮರಾ ಕಣ್ಣುಗಳು ಸುಮ್ಮನಿರಲಿಲ್ಲ. ‘ಗುಂಪಿನಲ್ಲೊಬ್ಬರು ’ಶಾದಿ ಮುಬಾರಕ್' ಎಂದಾಗ ರಶ್ಮಿಕಾ ಹೇಳಿದ್ದೇನು?

PREV
15

ಮುಂಬೈ: ಸ್ಯಾಂಡಲ್‌ವುಡ್‌ನಿಂದ ಕೆರಿಯರ್ ಆರಂಭಿಸಿ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ 'ಕಿರಿಕ್ ಬೆಡಗಿ' ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಟಾಲಿವುಡ್‌ನ 'ರೌಡಿ ಸ್ಟಾರ್' ವಿಜಯ್ ದೇವರಕೊಂಡ (Vijay Deverakonda) ಅವರ ಮದುವೆಯ ಸುದ್ದಿ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹಲ್ಚಲ್ ಎಬ್ಬಿಸಿದೆ. ಈ ಜೋಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂಬ ವದಂತಿಗಳು ಹಬ್ಬಿರುವ ಬೆನ್ನಲ್ಲೇ, ಪಾಪರಾಜಿಗಳು ರಶ್ಮಿಕಾ ಮಂದಣ್ಣ ಬೆನ್ನುಬಿದ್ದಿದ್ದಾರೆ.

25

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಆಸಕ್ತಿದಾಯಕ ಘಟನೆಯೊಂದು ನಡೆದಿದೆ. ಸ್ಟೈಲಿಶ್ ಬ್ಲೇಜರ್ ಟಾಪ್, ಬ್ಲ್ಯಾಕ್ ಸನ್ ಗ್ಲಾಸ್ ಮತ್ತು ಗ್ರೀನ್ ಕಲರ್ ಶೂ ಧರಿಸಿ ಸಖತ್ ಆಗಿ ಮಿಂಚುತ್ತಿದ್ದ ರಶ್ಮಿಕಾ ಅವರನ್ನು ಕಂಡ ಕ್ಯಾಮರಾ ಕಣ್ಣುಗಳು ಸುಮ್ಮನಿರಲಿಲ್ಲ. ಫೋಟೋ ಮತ್ತು ವಿಡಿಯೋಗಳಿಗಾಗಿ ಮುಗಿಬಿದ್ದ ಪಾಪರಾಜಿಗಳ ಗುಂಪಿನಿಂದ ಒಬ್ಬ ವ್ಯಕ್ತಿ ರಶ್ಮಿಕಾ ಅವರನ್ನು ಕಂಡು ಸಡನ್ ಆಗಿ "ಮ್ಯಾಡಮ್, ಶಾದಿ ಮುಬಾರಕ್ ಹೋ" (ಮದುವೆಯ ಶುಭಾಶಯಗಳು) ಎಂದು ಜೋರಾಗಿ ಕೂಗಿದ್ದಾನೆ.

35

ಫೆಬ್ರವರಿ 20, 2026 ರಂದು ರಶ್ಮಿಕಾ ಮತ್ತು ವಿಜಯ್ ಮದುವೆ ನಡೆಯಲಿದೆ ಎಂಬ ಸುದ್ದಿಗಳು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಈ ಮಾತು ಕೇಳಿಬಂದಿದೆ. ಇದನ್ನು ಕೇಳಿದ ರಶ್ಮಿಕಾ ಮಂದಣ್ಣ ಅವರು ಸಿಟ್ಟಾಗುವ ಬದಲಿಗೆ, ನಾಚಿ ನೀರಾಗಿ ಮುಗುಳ್ನಕ್ಕಿದ್ದಾರೆ. ಯಾವುದೇ ನೇರ ಉತ್ತರ ನೀಡದ ಅವರು, ಸುಮ್ಮನೆ ಭುಜ ಕುಣಿಸಿ (Shrug) ನಗುತ್ತಲೇ ಅಲ್ಲಿಂದ ನಡೆದುಹೋಗಿದ್ದಾರೆ. ರಶ್ಮಿಕಾ ಅವರ ಈ ಮೌನ ಮತ್ತು ಆ ನಗು ಈಗ 'ಹೌದು, ಮದುವೆ ನಿಜವಿರಬಹುದು' ಎಂಬ ಅನುಮಾನಕ್ಕೆ ಇನ್ನಷ್ಟು ತುಪ್ಪ ಸುರಿದಿದೆ.

45

ಈ ಹಿಂದೆ ಅಂದರೆ ಅಕ್ಟೋಬರ್ 2025 ರಲ್ಲಿ, ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಅವರ ನಿವಾಸದಲ್ಲಿ ಅತ್ಯಂತ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನಡೆದಿದೆ ಎಂದು ವರದಿಗಳಾಗಿದ್ದವು. ಅಲ್ಲದೆ, ಫೆಬ್ರವರಿ 26, 2026 ರಂದು ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಈ ಬಗ್ಗೆ ರಶ್ಮಿಕಾ ಆಗಲಿ ಅಥವಾ ವಿಜಯ್ ಆಗಲಿ ಅಧಿಕೃತವಾಗಿ ಎಲ್ಲಿಯೂ ಬಾಯಿ ಬಿಟ್ಟಿಲ್ಲ.

55

ಸಿನಿಮಾ ವಿಚಾರಕ್ಕೆ ಬಂದರೆ, ರಶ್ಮಿಕಾ ಮಂದಣ್ಣ ಸದ್ಯಕ್ಕೆ 'ಮೈಸ' (Mysaa) ಎಂಬ ಸಿನಿಮಾದಲ್ಲಿ ಅತ್ಯಂತ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ವಿಜಯ್ ದೇವರಕೊಂಡ ಜೊತೆಗೆ 'ರಣಬಾಲಿ' (Ranabaali) ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ಒಂದಾಗುತ್ತಿದ್ದಾರೆ. ತೆರೆಯ ಮೇಲೆ ಮೋಡಿ ಮಾಡಿದ್ದ ಈ ಜೋಡಿ ಈಗ ನಿಜ ಜೀವನದಲ್ಲೂ ಒಂದಾಗಲಿ ಎಂಬುದು ಅವರ ಅಭಿಮಾನಿಗಳ ಬಹುದಿನಗಳ ಆಸೆಯಾಗಿದೆ. ಒಟ್ಟಿನಲ್ಲಿ 'ಶಾದಿ ಮುಬಾರಕ್' ಎಂಬ ಶುಭಾಶಯಕ್ಕೆ ರಶ್ಮಿಕಾ ಕೊಟ್ಟ ಆ ತುಂಟ ನಗು ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಮದುವೆಯ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories