ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಮೂಲಕ ಹಲವು ಗಾಸಿಪ್‌ಗಳಿಗೆ ಈ ಜೋಡಿ ಪೂರ್ಣ ವಿರಾಮ ಹಾಕಿದೆ.
26
ಡಿಜಿಟಲ್ ಪ್ಲಾಟ್‌ಫಾರಂನಲ್ಲಿ ವಿರೋಶ್ ಮದುವೆಯಿಂದ ಹೊಸ ಮೈಲಿಗಲ್ಲು
ಇನ್ನು ಈ ವಿರೋಶ್ ಜೋಡಿಯ ಮದುವೆಯೂ ಡಿಜಿಟಲ್ ಫ್ಲಾಟ್‌ಫಾರಂನಲ್ಲಿ ಹೊಸದೊಂದು ಮೈಲಿಗಲ್ಲನ್ನೇ ಸೃಷ್ಟಿಸಿದ್ದು, ಇಲ್ಲಿಯವರೆಗೆ ರಶ್ಮಿಕಾ-ವಿಜಯ್ ಅವರ ಮದುವೆಯ ಫೋಟೋಕ್ಕೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ 23 ಮಿಲಿಯನ್ ಲೈಕ್ಸ್ ಬಂದಿದೆ.
36
ರಶ್ಮಿಕಾ ಮದುವೆ ಪೋಸ್ಟ್‌ಗೆ 23+ ಮಿಲಿಯನ್ ಲೈಕ್ಸ್
ರಶ್ಮಿಕಾ ಮಂದಣ್ಣ ತಮ್ಮ ಇನಿಯ ಮದುವೆಯ ಸುಂದರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದೀಗ ಫೆಬ್ರವರಿ 28ರ ಬೆಳಗ್ಗೆ 9 ಗಂಟೆಯ ಸುಮಾರಿಗೆ 23 ಮಿಲಿಯನ್ ಲೈಕ್ಸ್ ಬಂದಿದೆ. ಈ ಮೂಲಕ ಏಷ್ಯಾದಲ್ಲೇ ಫೋಟೋವೊಂದಕ್ಕೆ ಅತಿಹೆಚ್ಚು ಲೈಕ್ ಪಡೆದ ಸೆಲಿಬ್ರಿಟಿ ಎನ್ನುವ ಹಿರಿಮೆಗೆ ರಶ್ಮಿಕಾ ಮಂದಣ್ಣ ಪಾತ್ರರಾಗಿದ್ದಾರೆ.
2024ರಲ್ಲಿ ಏಷ್ಯಾದ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದ ವಿರಾಟ್ ಕೊಹ್ಲಿ
ಇನ್ನು ಇದಕ್ಕೂ ಮೊದಲು 2024ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆಗ ವಿರಾಟ್ ಕೊಹ್ಲಿ ಟ್ರೋಫಿಗೆ ಮುತ್ತಿಕ್ಕುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ 22.8 ಮಿಲಿಯನ್ ಮಂದಿ ಲೈಕ್ ಮಾಡಿದ್ದರು. ಇದು ಏಷ್ಯಾದಲ್ಲೇ ಕಳೆದೆರಡು ವರ್ಷಗಳಲ್ಲಿ ಅತಿಹೆಚ್ಚು ಲೈಕ್ ಪಡೆದ ಸಾರ್ವಜನಿಕ ಪೋಸ್ಟ್ ಎನಿಸಿಕೊಂಡಿತ್ತು.
56
ರಶ್ಮಿಕಾ ಏಷ್ಯಾದ ಕ್ವೀನ್ ಆಫ್ ಇನ್‌ಸ್ಟಾಗ್ರಾಮ್
ಇದೀಗ ಭಾರತದ ಕ್ರಶ್ ಎಂದೇ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಬ್ರೇಕ್ ಮಾಡುವ ಮೂಲಕ ಏಷ್ಯಾದ ಕ್ವೀನ್ ಆಫ್ ಇನ್‌ಸ್ಟಾಗ್ರಾಮ್ ಎನಿಸಿಕೊಂಡಿದ್ದಾರೆ.
66
ವಿಜಯ್ ದೇವರಕೊಂಡ ಹಂಚಿಕೊಂಡ ಪೋಸ್ಟ್‌ಗೆ 18+ ಮಿಲಿಯನ್ ಲೈಕ್ಸ್
ಇನ್ನು ರಶ್ಮಿಕಾ ಮಂದಣ್ಣ ಅವರ ಕೈ ಹಿಡಿದ ವಿಜಯ್ ದೇವರಕೊಂಡ ಅವರು ಹಂಚಿಕೊಂಡಿರುವ ಮದುವೆ ಫೋಟೋಗೆ 18 ಮಿಲಿಯನ್‌ಗೂ ಅಧಿಕ ಮಂದಿ ಲೈಕ್ ಒತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.