ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ನೋಡಲು ಫ್ಯಾನ್ಸ್ ಬಳಗ ಕಾದು ಕುಳಿತಿದೆ. ಆದ್ರೆ ಎಂಗೇಜ್ಮೆಂಟ್ ವಿಷ್ಯವನ್ನೇ ರಿವೀಲ್ ಮಾಡದ ರಶ್ಮಿಕಾ, ಈಗ ಮದುವೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಬಗ್ಗೆ ಚರ್ಚೆ ಜೋರಾಗಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಆಗ್ತಾರೆ ಎನ್ನುವ ಸುದ್ದಿ ಇದೆ. ಈ ಬಗ್ಗೆ ರಶ್ಮಿಕಾ ಆಗ್ಲಿ, ವಿಜಯ್ ದೇವರಕೊಂಡ ಆಗ್ಲಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.
26
ನಿಶ್ಚಿತಾರ್ಥ ಮಾಡ್ಕೊಂಡಿರುವ ಜೋಡಿ
ಏಳು ವರ್ಷಗಳಿಂದ ಪ್ರೀತಿಯಲ್ಲಿರುವ ಜೋಡಿ ಸದ್ಯ ಉಂಗುರ ಬದಲಿಸಿಕೊಂಡಿದ್ದಾರೆ. ಅಕ್ಟೋಬರ್ ನಲ್ಲಿ ಹೈದ್ರಾಬಾದ್ ನಲ್ಲಿ ಎಂಗೇಜ್ಮೆಂಟ್ ನಡೆದಿದೆ ಎನ್ನುವ ಸುದ್ದಿ ಇದೆ. ಇಬ್ಬರ ಕೈನಲ್ಲಿರೂ ಎಂಗೇಜ್ಮೆಂಟ್ ರಿಂಗ್ ಓಡಾಡ್ತಿದೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಎಂಗೇಜ್ ಆಗಿದ್ದಾರೆ ಎಂಬುದನ್ನು ವಿಜಯ್ ದೇವರಕೊಂಡ ಆಪ್ತ ಟೀಂ ದೃಢಪಡಿಸಿದೆ. ಆದ್ರೆ ಈ ಬಗ್ಗೆ ರಶ್ಮಿಕಾ – ವಿಜಯ್ ಯಾವುದೇ ಹೇಳಿಕೆ ನೀಡಿಲ್ಲ, ಫೋಟೋ ಹಂಚಿಕೊಂಡಿಲ್ಲ.
36
ಎಲ್ಲಿ ನಡೆಯುತ್ತಿದೆ ಮದುವೆ ತಯಾರಿ?
ಕಳೆದ ಕೆಲವು ದಿನಗಳಿಂದ, ರಶ್ಮಿಕಾ ಮತ್ತು ವಿಜಯ್ ಉದಯಪುರದಲ್ಲಿ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ವದಂತಿಗಳಿವೆ. . ರಶ್ಮಿಕಾ ಮತ್ತು ವಿಜಯ್ ಅವರ ತಂಡಗಳು ಉದಯಪುರದಲ್ಲಿ ಮದುವೆಗೆ ಎಲ್ಲ ಪ್ಲಾನ್ ಮಾಡ್ತಿದೆ, ಶೀಘ್ರವೆ ಸ್ಥಳ ಅಂತಿಮಗೊಳ್ಳಲಿದೆ ಎನ್ನುವ ಸುದ್ದಿ ಹರಡಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ ತಮ್ಮ ಮದುವೆ ಬಗ್ಗೆ ಹೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ರಶ್ಮಿಕಾ ಉತ್ತರ ನೀಡಿದ್ದಾರೆ. ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ, ಮದುವೆ ಸುದ್ದಿ ಸತ್ಯ ಅಥವಾ ಸುಳ್ಳು ಎಂಬುದನ್ನು ಹೇಳಿಲ್ಲ. ಫ್ಯಾನ್ಸ್ ಮತ್ತು ಮೀಡಿಯಾ ಮುಂದೆ ಮದುವೆಗೆ ಸಂಬಂಧಿಸಿದಂತೆ ಯಾವುದೇ ವಿಷ್ಯ ಹಂಚಿಕೊಳ್ಳುವ ಮೊದಲು ನನಗೆ ಸಮಯ ಬೇಕು ಎಂದಿದ್ದಾರೆ. ನಾನು ಮದುವೆಯನ್ನು ದೃಢೀಕರಿಸಲು ಅಥವಾ ನಿರಾಕರಿಸಲು ಬಯಸುವುದಿಲ್ಲ. ನಮಗೆ ಅಗತ್ಯವಿರುವಾಗ ನಾವು ಅದರ ಬಗ್ಗೆ ಮಾತನಾಡುತ್ತೇವೆ ಎಂದು ರಶ್ಮಿಕಾ ಹೇಳಿದ್ದಾರೆ.
56
ಎಲ್ಲಿಂದ ಶುರು ಆಯ್ತು ಪ್ರೀತಿ?
2018ರಲ್ಲಿ ವಿಜಯ್ ಹಾಗೂ ರಶ್ಮಿಕಾ, ಗೀತಾ ಗೋವಿಂದಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. 2019ರಲ್ಲಿ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆಗ್ಲೇ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು ಎನ್ನಲಾಗ್ತಿದೆ. ವಿಜಯ್ ಹಾಗೂ ರಶ್ಮಿಕಾ ಡೇಟಿಂಗ್ ಸುದ್ದಿ ಎರಡು ವರ್ಷಗಳಿಂದ ಹೆಚ್ಚು ಸುದ್ದಿ ಆಗ್ತಿದೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವರ್ಷ ಆಗಸ್ಟ್ನಲ್ಲಿ, ಅವರು ನ್ಯೂಯಾರ್ಕ್ನಲ್ಲಿ ನಡೆದ 43 ನೇ ಇಂಡಿಯಾ ಡೇ ಪೆರೇಡ್ ಮುನ್ನಡೆಸಿದ್ದರು. ಅವರು ಇಂಡಿಯಾ ಬಿಯಾಂಡ್ ಬಾರ್ಡರ್ಸ್ ಎಂಬ ಕಾರ್ಯಕ್ರಮಕ್ಕೂ ಹಾಜರಾಗಿದ್ದರು.
66
ವಿಜಯ್ ಬಗ್ಗೆ ರಶ್ಮಿಕಾ ಮನದಾಳದ ಮಾತು
ದಿ ಗರ್ಲ್ಫ್ರೆಂಡ್ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾ, ವಿಜಯ್ ಅವರನ್ನು ಹೊಗಳಿದ್ದರು. ಭಾವುಕರಾಗಿದ್ದ ರಶ್ಮಿಕಾ, ವಿಜು, ಈ ಚಿತ್ರದ ಆರಂಭದಿಂದಲೂ ಮತ್ತು ಅದರ ಯಶಸ್ಸಿನವರೆಗೆ ಸಿನಿಮಾ ಭಾಗವಾಗಿದ್ದೀರಿ. ಪ್ರತಿಯೊಬ್ಬರ ಜೀವನದಲ್ಲೂ ವಿಜಯ್ ದೇವರಕೊಂಡ ಇರುವುದು ಆಶೀರ್ವಾದಕ್ಕಿಂತ ಕಡಿಮೆಯಿಲ್ಲ ಎಂದಿದ್ದರು. ಇದೇ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಕೂಡ ರಶ್ಮಿಕಾ ಅವರನ್ನು ಹೊಗಳಿದ್ದರು. ಹಿಂದೆ ಇವೆಂಟ್ ಒಂದರಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ, ಯಾರನ್ನು ಮದುವೆ ಆಗ್ತೀರಿ ಎಂದಾಗ ವಿಜಯ್ ದೇವರಕೊಂಡ ಹೆಸರು ಹೇಳಿದ್ದರು.