ಗೆಳತಿಯ ವಿವಾಹ ಸಂಭ್ರಮದಲ್ಲಿ ರಶ್ಮಿಕಾ; ಮದುವೆ ಬಳಿಕ ಮುಂಬೈ ಪಾರ್ಟಿಯಲ್ಲಿ ಕಾಣಿಸಿಕೊಂಡ ನಟಿ

First Published | May 26, 2022, 6:48 PM IST

ಬೆಂಗಳೂರಿನಲ್ಲಿ ಗೆಳತಿಯ ಮದುವೆ ಸಂಭ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದಾರೆ. ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದರು. ಗಣಪತಿ ದರ್ಶನ ಪಡೆಯದೆ ಪಯಣ ಪ್ರಾರಂಭ ಮಾಡಲ್ಲ ಎಂದು ಹೇಳಿದ್ದರು. ಇದೀಗ ಸ್ನೇಹಿತೆಯ ಮದುವೆ ಸಂಭ್ರಮದ ಫೋಟೋ ಶೇರ್ ಮಾಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಬಹು ಬೇಡಿಕೆಯ ನಟಿ. ಸಾಲು ಸಾಲು ಸಿನಿಮಾಗಳ ಚಿತ್ರೀಕರಣದ ನಡುವೆಯೂ ರಶ್ಮಿಕಾ ಗೆಳತಿಯ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಇತ್ತೀಚಿಗಷ್ಟೆ ರಶ್ಮಿಕಾ ಗೆಳತಿಯ ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ಮದುಮಗಳಿಗೆ ಶುಭಹಾರೈಸಿದ್ದರು. ಸ್ನೇಹಿತೆ ರಾಗಿಣಿ ಮದುವೆ ಸಂಭ್ರಮ ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ರಶ್ಮಿಕಾ ಕೂರ್ಗ್ ಶೈಲಿಯಲ್ಲಿ ಮಿಂಚುವ ಮೂಲಕ ಗಮನ ಸೆಳೆದಿದ್ದರು. ಇದೀಗ ಮತ್ತೋರ್ವ ಗೆಳತಿಯ ಮದುವೆಯಲ್ಲಿ ಮಿಂಚುತ್ತಿದ್ದಾರೆ.

Tap to resize

ಇದೀಗ ಬೆಂಗಳೂರಿನಲ್ಲಿ ಗೆಳತಿಯ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದರು. ಗಣಪತಿ ದರ್ಶನ ಪಡೆಯದೆ ಪಯಣ ಪ್ರಾರಂಭ ಮಾಡಲ್ಲ ಎಂದು ಹೇಳಿದ್ದರು. ಇದೀಗ ಸ್ನೇಹಿತೆಯ ಮದುವೆ ಸಂಭ್ರಮದ ಫೋಟೋ ಶೇರ್ ಮಾಡಿದ್ದಾರೆ.

ಮದುವೆಯಲ್ಲಿ ರಶ್ಮಿಕಾ ಗುಲಾಬಿ ಬಣ್ಣದ ಜೆರಿ ಸೀರೆಯಲ್ಲಿ ಮಿಂಚಿದ್ದಾರೆ. ಮದುಮಗಳ ಜೊತೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಶ್ಮಿಕಾ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ.

ನೀವು ಭೇಟಿಯಾದ ದಿನದಿಂದ, ಡೇಟಿಂಗ್ ಮಾಡಲು ಪ್ರಾರಂಭಿಸಿದ ದಿನದಿಂದ, ನೀವು ಈಗ ಮದುವೆಯಾಗುವವರೆಗೂ ನಾನು ನಿಮ್ಮ ಜೊತೆ ಇದ್ದೆ. ನಿಮ್ಮ ಸುಂದರ ಪಯಣಕ್ಕೆ ಸಾಕ್ಷಿಯಾಗುತ್ತಿದ್ದೇನೆ. ಇಬ್ಬರನ್ನೂ ತುಂಬಾ ಪ್ರೀತಿಸುತ್ತೇನೆ. ನಾವು ನನ್ನ ಜೀವನದಲ್ಲಿರುವುದು ನಿಜಕ್ಕೂ ಸಂತಸದ ವಿಚಾರ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ರಶ್ಮಿಕಾ ಬೆಂಗಳೂರಿನಲ್ಲಿ ಗೆಳತಿಯ ಮದುವೆ ಮುಗಿಸಿ ಬಳಿಕ ಮತ್ತೆ ಮುಂಬೈ ಹಾರಿದ್ದಾರೆ. ಮುಂಬೈನಲ್ಲಿ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರ ಬರ್ತಡೇ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ದಕ್ಷಿಣ ಭಾರತದಿಂದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರು ಭಾಗಿಯಾಗಿದ್ದರು.

Latest Videos

click me!