ಇನ್ನೊಂದು ವಿಷಯ ಏನೆಂದರೆ, 'ನನ್ನ ಕಥೆಯಾದರೆ ನ್ಯಾಯ ಒದಗಿಸುತ್ತೇನೆ, ಬೇರೆಯವರ ಕಥೆಗೆ ನ್ಯಾಯ ಒದಗಿಸಲಾರೆ' ಅಂತ ಬಾಬಿ ಚಿರುಗೆ ಹೇಳಿದ್ದರಂತೆ. 'ನಿಮ್ಮ ತಮ್ಮ ಪವನ್ ಕಲ್ಯಾಣ್ ಜೊತೆ ಮಾಡಿದ 'ಸರ್ದಾರ್ ಗಬ್ಬರ್ ಸಿಂಗ್' ಏನಾಯ್ತು ಅಂತ ನೋಡಿದ್ದೇವೆ. ಅದು ನನ್ನ ಕಥೆ ಅಲ್ಲ, ಹಾಗಾಗಿ ಹಿನ್ನಡೆಯಾಯಿತು. ವೆಂಕಿಮಾಮ ಕೂಡ ಹಾಗೆಯೇ. ನನ್ನ ಕಥೆಯಾದರೆ ಪೂರ್ಣ ನ್ಯಾಯ ಒದಗಿಸುತ್ತೇನೆ' ಅಂತ ಬಾಬಿ ಹೇಳಿದ್ದಾರೆ. ಬಾಬಿ ಅಭಿಪ್ರಾಯಕ್ಕೆ ಗೌರವ ನೀಡಿದ ಚಿರು, 'ಸರಿ, ನಾವು ಇನ್ನೊಂದು ಸಿನಿಮಾ ಮಾಡೋಣ' ಅಂದರಂತೆ. ಬಾಬಿ ಹೇಳಿದಂತೆಯೇ 'ಗಾಡ್‌ಫಾದರ್' ನಿರಾಸೆ ಮೂಡಿಸಿತು. ಆನಂತರ ಬಾಬಿ ನಿರ್ದೇಶನದ 'ವಾಲ್ತೇರು ವೀರಯ್ಯ' ಬ್ಲಾಕ್‌ಬಸ್ಟರ್ ಹಿಟ್ ಆಯಿತು.