ನಟನೆಯನ್ನು ಮುಂದುವರಿಸಲು ತಮ್ಮ 9 to 5 ಜಾಬ್ಸ್ತೊರೆದ ಬಾಲಿವುಡ್‌ನ ಫೇಮಸ್ ಸ್ಟಾರ್ಸ್ ಇವರು.
ತಾಪ್ಸಿ ಪನ್ನು:ನವದೆಹಲಿಯ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ಪನ್ನು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ನಂತರ ರಿಯಾಲಿಟಿ ಶೋಗೆ ಆಡಿಷನ್ ನೀಡಿದತಾಪ್ಸಿ ಸಿನಿಮಾದತ್ತ ಮುಖ ಮಾಡಿದರು. ಅವರು ಚಶ್ಮೆ ಬದೂರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ರಣವೀರ್ ಸಿಂಗ್:ಅಮೆರಿಕದಲ್ಲಿ ಕ್ರಿಯೇಟಿವ್ ರೈಟಿಂಗ್ ಅಧ್ಯಯನ ಮಾಡಿದ ರಣವೀರ್ ನಂತರ, ಅವರು ಜಾಹೀರಾತು ಏಜೆನ್ಸಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಕೆಲವು ಏಜೆನ್ಸಿಗಳಿಗೆ ಕಾಪಿರೈಟರ್ ಆಗಿ ಕೆಲಸ ಮಾಡಿದ ನಂತರ, ಅವರು ಕೆಲಸವನ್ನು ಬಿಟ್ಟು ನಟನೆಗೆ ಇಳಿದರು.ರಣವೀರ್ ಸಿಂಗ್ ಬ್ಯಾಂಡ್ ಬಾಜಾ ಭರಾತ್ ಸಿನಿಮಾದೊಂದಿಗೆ ಬಾಲಿವುಡ್ ಕೆರಿಯರ್ ಶುರು ಮಾಡಿದರು.
ಜಾನ್ ಅಬ್ರಹಾಂ:ಮುಂಬೈನ ಹೆಸರಾಂತ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಜಾನ್ ಅವರು ಮುಂಬೈ ಎಜುಕೇಷನಲ್ ಟ್ರಸ್ಟ್‌ನಲ್ಲಿ ಮಾಸ್ಟರ್ಸ್ ಇನ್ ಮ್ಯಾನೇಜ್‌ಮೆಂಟ್ ಸೈನ್ಸ್ ಪದವಿ ಪಡೆದರು.
ಮೀಡಿಯಾ ಪ್ಲಾನರ್ ಆಗಿ ಕೆಲಸ ಮಾಡುತ್ತಿದ್ದ ಜಾನ್ ಮಾಡೆಲಿಂಗ್‌ನಲ್ಲಿ ಆದೃಷ್ಟ ಪ್ರಯತ್ನಿಸಿದರು. ನಂತರ 2003 ಜಿಸ್ಮ್ ಮೂಲಕ ಸಿನಿಮಾಕ್ಕೆ ಪ್ರವೇಶ ಮಾಡಿದರು.
ವಿಕ್ಕಿ ಕೌಶಲ್:ವಿಕ್ಕಿ ಕೌಶಲ್ 2009 ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್ ಎಂಜಿನಿಯರ್ ಪದವಿ ಪಡೆದರು. ಜಾಬ್ ಪಡೆದರು ಆದರೆ ನಾಟಕದಲ್ಲಿ ಆ ಕೆಲಸ ತೊರೆದರು.ಅಂತಿಮವಾಗಿಮಸಾನ್ ಸಿನಿಮಾದೊಂದಿಗೆ ಬಾಲಿವುಡ್‌ಗೆ ಕಾಲಿಟ್ಟರು.
ಆಯುಷ್ಮಾನ್ ಖುರಾನಾ:ಬಾಲಿವುಡ್‌ನಲ್ಲಿ ನೆಲೆ ಕಾಣುವ ಮೊದಲು ಆಯುಷ್ಮಾನ್ ರೇಡಿಯೋ ಜಾಕಿ, ವಿಜೆ ಮತ್ತು ಟೆಲಿವಿಷನ್ ನಿರೂಪಕರಾಗಿ ಕೆಲಸ ಮಾಡಿದರು.