Published : Mar 05, 2024, 11:05 AM ISTUpdated : Mar 05, 2024, 11:07 AM IST
14 ವರ್ಷಕ್ಕೇ ಆಲ್ಬಂ ಸಾಂಗ್‌ಗಳಲ್ಲಿ, ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಬಾರ್ಬಿ ಡಾಲ್‌ನಂತಿದ್ದ ಈ ನಟಿ, ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ನಟನೆ ಬಿಟ್ಟು ಧರ್ಮ ಬದಲಿಸಿಕೊಂಡಳು. ಯಾರೀಕೆ?
2000ದ ಆರಂಭದಲ್ಲಿ ಮೇರಿ ಚೂನರ್ ಉಡು ಉಡು ಜಾಯೇ ಅಂತ ಫಾಲ್ಗುಣಿ ಪಾಠಕ್ ಆಲ್ಬಂ ಸಾಂಗ್ ಟಿವಿಯಲ್ಲಿ ಬರ್ತಿದ್ದರೆ, ಕೊಂಚ ನಿಂತು ನೋಡದೆ ಮುಂದೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅದರಲ್ಲಿ ಗೊಂಬೆಯಂಥ ಸುಂದರಿಯೊಬ್ಬಳು ಎಲ್ಲರನ್ನೂ ಆಕರ್ಷಿಸಿದ್ದಳು.
210
ಅದೇ 14 ವರ್ಷದ ಹುಡುಗಿ ನಂತರ ಬಾಲಿವುಡ್‌ನ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಳು. 2009ರಲ್ಲಿ ಸಲ್ಮಾನ್ ಖಾನ್ ಜೊತೆ ಆಕೆ ನಟಿಸಿದ 'ವಾಂಟೆಡ್' ಭರ್ಜರಿ ಹಿಟ್ ಆಯಿತು. ಆ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಯಿತು. ಅಲ್ಲಿಂದ ಆಯೇಷಾ ಟಾಕಿಯಾ ಭವಿಷ್ಯ ಬೇರೆಯೇ ಆಗುತ್ತಿತ್ತು.
310
ಆದರೆ, ಅವಳ ಕೆಲ ನಿರ್ಧಾರಗಳಿಂದಾಗಿ ಭವಿಷ್ಯ ಬದಲಾಯಿತು. ಸಲ್ಮಾನ್ ಖಾನ್, ಅಜಯ್ ದೇವಗನ್ ಮತ್ತು ಅನಿಲ್ ಕಪೂರ್ ಅವರಂತಹ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ ನಟಿ ಆಯೇಷಾ ಟಾಕಿಯಾ.
410
2004 ರಲ್ಲಿ 'ಟಾರ್ಜಾನ್: ದಿ ವಂಡರ್ ಕಾರ್' ಮೂಲಕ ಪಾದಾರ್ಪಣೆ ಮಾಡಿದ ಆಯೇಶಾ ಟಾಕಿಯಾ 'ಸೋಚಾ ನಾ ಥಾ' (2005), 'ಸಲಾಮ್-ಇ-ಇಷ್ಕ್' (2007), 'ವಾಂಟೆಡ್' (2009), ಮತ್ತು 'ಪಾತ್ಶಾಲಾ' (2010) ನಂತಹ ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಳು.
510
ಕಡೆಗೆ ಕೆಲ ಚಿತ್ರಗಳು ಸೋಲುತ್ತಲೇ, ಹೋರಾಟವನ್ನೇ ಕೈ ಬಿಟ್ಟ ಆಯೇಷಾ ನಟನಾ ವೃತ್ತಿಗೇ ಗುಡ್ ಬೈ ಹೇಳಿ ತನ್ನ ಗೆಳೆಯ ರ್ಹಾನ್ ಅಜ್ಮಿಯನ್ನು ಮದುವೆಯಾದಳು.
610
ರೆಸ್ಟೋರೆಂಟ್ ಮಾಲೀಕ, ಮತ್ತು ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರ ಮಗ ಫರ್ಹಾನ್‌ನನ್ನು ಟಾಕಿಯಾ ಮದುವೆಯಾದದ್ದು 2009ರಲ್ಲಿ ತನ್ನ 23ನೇ ವಯಸ್ಸಿನಲ್ಲಿ. ಇದೇ ವರ್ಷ ವಾಂಟೆಡ್ ಆಕೆಗೆ ಸಖತ್ ಬ್ರೇಕ್ ನೀಡಿತ್ತು.
710
ಮದುವೆಯ ನಂತರ ತನ್ನ ಕೊನೆಯ ಹೆಸರನ್ನು ಟಾಕಿಯಾ ಅಜ್ಮಿ ಎಂದು ಬದಲಾಯಿಸಿಕೊಂಡ ಆಕೆ, ಪ್ರೀತಿಗಾಗಿ ಇಸ್ಲಾಂಗೆ ಮತಾಂತರಗೊಂಡಳು.
810
ದಂಪತಿಗಳು ತಮ್ಮ ಮದುವೆಯ ನಂತರ ಶೀಘ್ರದಲ್ಲೇ ಮಗನನ್ನು ಸ್ವಾಗತಿಸಿದರು. ಈಗ ಟಾಕಿಯಾ ಇನ್ಸ್ಟಾ ಖಾತೆ ಹೆಚ್ಚಾಗಿ ಮಗನ ಫೋಟೋಗಳಿಂದಲೇ ತುಂಬಿರುತ್ತದೆ.
910
ಆಯೇಶಾ ಟಾಕಿಯಾ ಪ್ರಸ್ತುತ ಗೋವಾದಲ್ಲಿ ವಾಸಿಸುತ್ತಿದ್ದಾರೆ ಮತ್ತು ತನ್ನ ಪತಿಗೆ ತನ್ನ ವ್ಯಾಪಾರ ಉದ್ಯಮಗಳಿಗೆ ಸಹಾಯ ಮಾಡುತ್ತಾರೆ.
1010
ಅವರು ಗ್ಲಾಮರ್ ಪ್ರಪಂಚದಿಂದ ದೂರವಿರುವ ತಮ್ಮ ಜೀವನದಲ್ಲಿ ಸಂತೋಷವಾಗಿದ್ದಾರೆ ಮತ್ತು ಆಗಾಗ್ಗೆ ತಮ್ಮ ಕುಟುಂಬದೊಂದಿಗೆ ಕಾಣಿಸಿಕೊಳ್ಳುತ್ತಾರೆ.