ರಾಮ, ರಾವಣರಾಗಿ ರಣಬೀರ್, ಹೃತಿಕ್‌ಗೆ 75 ಕೋಟಿ ಸಂಭಾವನೆ

Published : Oct 11, 2021, 09:19 AM ISTUpdated : Oct 11, 2021, 12:35 PM IST

ಬರೋಬ್ಬರ 750 ಕೋಟಿಯಲ್ಲಿ ಸಿದ್ಧವಾಗುತ್ತಿದೆ ವೆಬ್‌ಸಿರೀಸ್ ರಾಮ - ರಾವಣರಾಗಿ ರಣಬೀರ್ ಹಾಗೂ ಹೃತಿಕ್ ರೋಷನ್ ಇಬ್ಬರು ನಟರಿಗೂ ಭರ್ಜರಿ 75 ಕೋಟಿ ಸಂಭಾವನೆ

PREV
18
ರಾಮ, ರಾವಣರಾಗಿ ರಣಬೀರ್, ಹೃತಿಕ್‌ಗೆ 75 ಕೋಟಿ ಸಂಭಾವನೆ

ಮಧು ಮಂತೇನಾ ನಿರ್ಮಾಣದ, ನಿತೇಶ್‌ ತಿವಾರಿ ನಿರ್ದೇಶನದ ರಾಮಾಯಣ(Ramayan) ಕಥೆ ಆಧರಿತ ಹೊಸ ವೆಬ್‌ಸೀರಿಸ್‌ನಲ್ಲಿ(Web Series) ರಾಮ ಮತ್ತು ರಾವಣನ ಪಾತ್ರಕ್ಕಾಗಿ ಬಾಲಿವುಡ್‌ನ ಖ್ಯಾತ ನಟರಾದ ರಣಬೀರ್‌ ಕಪೂರ್‌(Ranbir Kapoor) ಮತ್ತು ಹೃತಿಕ್‌ ರೋಷನ್‌(Hrithik Roshan) ಅವರನ್ನು ಆಯ್ಕೆ ಮಾಡಲಾಗಿದೆ.

28

ಅಚ್ಚರಿಯ ವಿಷಯಷವೆಂದರೆ ಈ ಪಾತ್ರಕ್ಕಾಗಿ ಇಬ್ಬರಿಗೂ ತಲಾ ಭರ್ಜರಿ 75 ಕೋಟಿ ರು.ಸಂಭಾವನೆ ನೀಡಲಾಗುತ್ತಿದೆ. ಈ ವೆಬ್‌ಸೀರೀಸ್‌ಗೆ 750 ಕೋಟಿ ರು. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ವೆಬ್‌ಸೀರೀಸ್‌ ಕುರಿತು ಭಾರೀ ಕುತೂಹಲ ಮೂಡಿದೆ.

38

ಈ ವೆಬ್‌ ಸೀರೀಸ್‌ನಲ್ಲಿ ಸೀತೆಯ ಪಾತ್ರಕ್ಕಾಗಿ ನಟಿ ಕರೀನಾ ಕಪೂರ್‌ ಆಯ್ಕೆಯಾಗಿದ್ದಾರೆ ಎಂದು ಸುದ್ದಿಗಳು ಹಬ್ಬಿದ್ದವಾದರೂ, ಅದು ಸುಳ್ಳು ಎಂದು ಚಿತ್ರ ತಂಡ ಸ್ಪಷ್ಟಪಡಿಸಿದೆ. ಅಲ್ಲದೆ ಸೀತೆಯ ಪಾತ್ರದಾರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ತಿಳಿಸಿದೆ.

48

ಮೂಲಗಳ ಪ್ರಕಾರ, ಹೃತಿಕ್ ಮತ್ತು ರಣಬೀರ್ ಇಬ್ಬರೂ ಕ್ರಮವಾಗಿ ರಾವಣ ಮತ್ತು ರಾಮನಾಗಿ ನಟಿಸುತ್ತಾರೆ. ತಲಾ 75 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಉಳಿದ ಬಜೆಟ್‌ನಲ್ಲಿ ರಾಮಾಯಣವನ್ನು ಹಿಂದೆಂದೂ ನೋಡದ ರೀತಿಯಲ್ಲಿ ಮಹಾಕಾವ್ಯವನ್ನು ರೂಪಿಸಲಾಗುತ್ತದೆ ಎನ್ನಲಾಗಿದೆ

58

ರಾಮ ಮತ್ತು ರಾವಣನ ಪಾತ್ರಧಾರಿಗಳಾಗಿರುವಾಗ, ಮಂಟೇನನ ಅಗಾಧ ಮಹತ್ವಾಕಾಂಕ್ಷೆಯ ಯೋಜನೆಗೆ ಸೀತೆ ಇನ್ನೂ ಸಿಕ್ಕಿಲ್ಲ. ಸೀತೆ ಪಾತ್ರ ಯಾರಿಗೆ ಸಿಗಲಿದೆ ಎಂಬುದು ಕುತೂಹಲ

68

ಕರೀನಾ ಕಪೂರ್ ಖಾನ್ ಅವರ ಪತಿ ಸೈಫ್ ಅಲಿ ಖಾನ್ ರಾವಣನ ಆದಿಪುರುಷ ಎಂಬ ರಾಮಾಯಣವನ್ನು ಆಧರಿಸಿದ ಇನ್ನೊಂದು ಯೋಜನೆಯಲ್ಲಿ ರಾವಣನಾಗಿ ನಟಿಸಿದ್ದಾರೆ. ಇದನ್ನು ಓಂ ರಾವುತ್ ನಿರ್ದೇಶಿಸುತ್ತಿದ್ದಾರೆ.

78

ಸದ್ಯ ರಾಮಾಯಣವನ್ನು ಆಧರಿಸಿ ಎರಡು ಪ್ರಾಜೆಕ್ಟ್‌ಗಳು ಸಿದ್ಧವಾಗಿದ್ದು ಒಂದರಲ್ಲಿ ಪ್ರಭಾಸ್ ಹಾಗೂ ಸೈಫ್ ಅಲಿ ಖಾನ್ ನಟಿಸಿದ್ದರೆ ಇನ್ನೊಂದರಲ್ಲಿ ರಣಬೀರ್ ಹಾಗೂ ಹೃತಿಕ್ ರೋಷನ್ ನಟಿಸುತ್ತಿದ್ದಾರೆ

88

ಇತ್ತೀಚಿನ ದಿನಗಳಲ್ಲಿ OTT ಕ್ರೇಜ್ ಹೆಚ್ಚಾಗಿದ್ದು ಸಿನಿಮಾಗಳ ಜೊತೆ ವೆಬ್ ಸಿರೀಸ್ ಭರಾಟೆ ಜೋರಾಗಿದೆ. ಸಖತ್ ಇಂಟ್ರೆಸ್ಟಿಂಗ್ ಥೀಮ್‌ಗಳ ಜೊತೆ ಹೊಸ ಕಥೆಯೊಂದಿಗೆ ವೆಬ್‌ಸಿರೀಸ್‌ಗಳು ಸಿದ್ಧವಾಗುತ್ತಿದೆ.

click me!

Recommended Stories