2 ಭಾಗಗಳಲ್ಲಿ ಬರಲಿದೆ ರಾಕಿಂಗ್ ಸ್ಟಾರ್ ಯಶ್ ನಟನೆ, ನಿರ್ಮಾಣದ 'ರಾಮಾಯಣ'!

Published : Nov 07, 2024, 12:28 PM IST

ಯಶ್ ನಟನೆ, ನಿರ್ಮಾಣದ ವರ್ಲ್ಡ್‌ ಕ್ಲಾಸ್‌ ಸಿನಿಮಾ ‘ರಾಮಾಯಣ’ 2 ಭಾಗಗಳಲ್ಲಿ ಬಿಡುಗಡೆಯಾಗಲಿದೆ. ನಿತೀಶ್‌ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್‌ ಕಪೂರ್‌ ರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. 

PREV
15
2 ಭಾಗಗಳಲ್ಲಿ ಬರಲಿದೆ ರಾಕಿಂಗ್ ಸ್ಟಾರ್ ಯಶ್ ನಟನೆ, ನಿರ್ಮಾಣದ 'ರಾಮಾಯಣ'!

ರಾಕಿಂಗ್ ಸ್ಟಾರ್ ಯಶ್ ನಟನೆ, ನಿರ್ಮಾಣದ ವರ್ಲ್ಡ್‌ ಕ್ಲಾಸ್‌ ಸಿನಿಮಾ ‘ರಾಮಾಯಣ’ 2 ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ಮುಂದಿನ ವರ್ಷ 2026ರ ದೀಪಾವಳಿ ಹಬ್ಬಕ್ಕೆ ರಿಲೀಸ್‌. 

25

ಆದರೆ, ಎರಡನೇ ಭಾಗ 2027ರ ದೀಪಾವಳಿ ವೇಳೆಗೆ ಬಿಡುಗಡೆಯಾಗಲಿದೆ ಎಂದು ಈ ಸಿನಿಮಾದ ನಿರ್ಮಾಪಕ ನಮಿತ್‌ ಮಲ್ಹೋತ್ರ ಅಧಿಕೃತವಾಗಿ ಘೋಷಿಸಿದ್ದಾರೆ. ನಿತೀಶ್‌ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್‌ ಕಪೂರ್‌ ರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. 

35

ಯಶ್‌ ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಕೈಕೇಯಿಯಾಗಿ ಲಾರಾ ದತ್ತಾ, ದಶರಥನಾಗಿ ಅರುಣ್‌ ಗೋವಿಲ್‌, ಹನುಮಂತನಾಗಿ ಸನ್ನಿ ಡಿಯೋಲ್‌ ಕಾಣಿಸಿಕೊಳ್ಳಲಿದ್ದಾರೆ. 

45

ಈ ಸಿನಿಮಾ ಕುರಿತು ನಿರ್ಮಾಪಕ ನಮಿತ್‌ ಮಲ್ಹೋತ್ರಾ, ‘ಐದು ಸಾವಿರ ವರ್ಷಗಳ ಹಿಂದಿನ ಈ ಮಹಾಕಾವ್ಯವನ್ನು ದೊಡ್ಡ ಪರದೆಯ ಮೇಲೆ ತರಲು ನಾನು ಹತ್ತು ವರ್ಷಗಳ ಹಿಂದೆಯೇ ಯೋಜನೆ ರೂಪಿಸಿದ್ದೆ. ಆ ಕನಸು ಈಗ ಸುಂದರ ರೂಪ ಪಡೆದುಕೊಳ್ಳುತ್ತಿದೆ. ಇದರ ಹಿನ್ನೆಲೆಯಲ್ಲಿ ತಂಡದ ನಿರಂತರ ಶ್ರಮವೂ ಇದೆ. 

55

ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆ, ಸತ್ಯವನ್ನು ದೃಶ್ಯ ವೈಭವದ ಮೂಲಕ ಪ್ರಪಂಚಕ್ಕೆ ತೋರಿಸಲು ತಂಡ ಸಿದ್ಧತೆ ನಡೆಸುತ್ತಿದೆ’ ಎಂದಿದ್ದಾರೆ. ರಾಮಾಯಣ ಮೊದಲ ಭಾಗಕ್ಕೆ 835 ಕೋಟಿ ರು. ಬಂಡವಾಳ ಹೂಡಲಾಗುತ್ತಿದ್ದು, ಪೋಸ್ಟ್ ಪ್ರೊಡಕ್ಷನ್‌ ಕೆಲಸವೇ ಬಹಳಷ್ಟು ಕಾಲ ನಡೆಯಲಿದೆ ಎನ್ನಲಾಗಿದೆ.

Read more Photos on
click me!

Recommended Stories