ರಾಮ್ ಗೋಪಾಲ್ ವರ್ಮ ಅಂದ್ರೆ ಮೊದಲು ನೆನಪಿಗೆ ಬರೋದೆ ವಿವಾದಗಳು. ಚರ್ಚಾಸ್ಪದ ಹೇಳಿಕೆಗಳಿಂದ ವರ್ಮಾ ಸದಾ ಸುದ್ದಿಯಲ್ಲಿರ್ತಾರೆ. ಅವರು ನಿರ್ದೇಶಿಸುವ ಸಿನಿಮಾಗಳೂ ಸಹ ಸಿನಿಮಾ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗ್ತವೆ. ಇದೀಗ ರಾಮ್ ಗೋಪಾಲ್ ವರ್ಮ ಒಂದು ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಕೇಸ್‌ನಲ್ಲಿ ಮುಂಬೈ ಕೋರ್ಟ್ ವರ್ಮಾಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.