ರಾಮ್ ಚರಣ್-ಉಪಾಸನಾ ಮದುವೆ ವಾರ್ಷಿಕೋತ್ಸವ: ಪವರ್‌ ಕಪಲ್‌ ಸುಂದರ ಲವ್‌ಸ್ಟೋರಿ ಇಲ್ಲಿದೆ

First Published | Jun 14, 2023, 5:06 PM IST

ಸೌತ್‌ ಸೂಪರ್‌ ಸ್ಟಾರ್‌ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ತಮ್ಮ 11ನೇ ವಿವಾಹ ವಾರ್ಷಿಕೋತ್ಸವ ಆಚರಿಸುಕೊಳ್ಳುತ್ತಿದ್ದಾರೆ. ಈ ಜೋಡಿ ಮುಂದಿನ ತಿಂಗಳು ತಮ್ಮ ಮೊದಲ ಮಗುವನ್ನು ಆಹ್ವಾನಿಸಲು ಸಿದ್ಧರಾಗಿರಾಗಿದ್ದಾರೆ. ಈ ಸಮಯದಲ್ಲಿ ಅವರ ಸುಂದರ ಲವ್‌ ಸ್ಟೋರಿ ಇಲ್ಲಿದೆ.

ಟಾಲಿವುಡ್‌ನ ಸ್ಟಾರ್ ಜೋಡಿ ರಾಮ್ ಚರಣ್ ಮತ್ತು ಉಪಾಸನಾ ಇಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಂಪತಿ 2012 ರಲ್ಲಿ ವಿವಾಹವಾದರು ಮತ್ತು 11 ವರ್ಷಗಳ ಕಾಲ ಸಂಸಾರ ನಡೆಸುತ್ತಿದ್ದಾರೆ.

ಕಳೆದ ವರ್ಷ ಅವರ ಮದುವೆಯ  ವಾರ್ಷಿಕೋತ್ಸವದ ನಂತರ, ದಂಪತಿ ಕುಟುಂಬವನ್ನು ಪ್ರಾರಂಭಿಸುವ ಬಯಕೆ ಘೋಷಿಸಿದರು. ಅದರೆ  ಡಿಸೆಂಬರ್ 12, 2022 ರಂದು, ದಂಪತಿ  ಪೋಷಕರಾಗಲಿರುವ ವಿಷಯವನ್ನು  ಘೋಷಿಸಿದರು.

Latest Videos


ಡ್ಯಾಶಿಂಗ್ ಮೆಗಾಸ್ಟಾರ್ ರಾಮ್‌ ಚರಣ್‌  ಮತ್ತು ಉಪಾಸನಾ ಕಾಲೇಜು ಸಮಯದಲ್ಲಿ ಮತ್ತೆ ಭೇಟಿಯಾದರು. ಮೊದಲ ನೋಟದಲ್ಲಿ, ಇಬ್ಬರೂ  ಸಂಪೂರ್ಣವಾಗಿ ವ್ಯತಿರಿಕ್ತ ವ್ಯಕ್ತಿತ್ವ ಹೊಂದಿದ್ದರು.

ರಾಮ್ ಚರಣ್ ಅವರ ಶಾಂತ ವ್ಯಕ್ತಿಯಾಗಿದ್ದರೆ, ಉಪಾಸನಾ ಬಹಿರ್ಮುಖಿಯಾಗಿದ್ದರು. ಅವರು 7 ವರ್ಷಗಳ ಸುದೀರ್ಘ ಸ್ನೇಹವನ್ನು ಹೊಂದಿದ್ದರು.

ಅವರ ಕಾಲೇಜು ದಿನಗಳ ನಂತರ ಉಪಾಸನ ವಿದೇಶದಲ್ಲಿದ್ದಾಗ ಮತ್ತು ರಾಮ್ ಚರಣ್ ಅವರ ವೃತ್ತಿ ಜೀವನವನ್ನು ನಿರ್ಮಿಸುತ್ತಿರುವ ಸಮಯದಲ್ಲಿ  ಅವರ ನಡುವಿನ ಪ್ರೀತಿಯ ಅರಿವಾಯಿತು.

ರಾಮ್ ಚರಣ್ ಅವರು ತಮ್ಮ ಐಕಾನಿಕ್ ಚಿತ್ರ ಮಗಧೀರ ಚಿತ್ರೀಕರಣದ ನಂತರ ಉಪಾಸನಾ ಜೊತೆ ಡೇಟಿಂಗ್ (Dating) ಮಾಡಲು ಪ್ರಾರಂಭಿಸಿದರು ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು. ಚಿತ್ರೀಕರಣದ ಸಮಯದಲ್ಲಿ (Shooting Time) ಅವನು ಅವಳನ್ನು ಎಷ್ಟು ಮಿಸ್ ಮಾಡಿಕೊಂಡಿದ್ದನೆಂದು ಅವನು ಅರಿತುಕೊಂಡರು ಎಂದೂ ಹೇಳಿದ್ದರು.

ಅವರ ಕುಟುಂಬಗಳು ಒಬ್ಬರಿಗೊಬ್ಬರು ತಿಳಿದಿರುವ ಕಾರಣ ಅವರು ಯಾವುದೇ ಆಕ್ಷೇಪಣೆಯನ್ನು ಹೊಂದಿರಲಿಲ್ಲ ಮತ್ತು ಅವರು ಉತ್ತಮ ಮ್ಯಾಚ್‌ ಎಂದು ಪರಿಗಣಿಸಿ ಈ ಸಂಬಂಧವನ್ನು ಸುಲಭವಾಗಿ ಒಪ್ಪಿಕೊಂಡರು. 

ಡಿಸೆಂಬರ್ 11, 2011 ರಂದು ನಿಶ್ಚಿತಾರ್ಥ ಮಾಡಿಕೊಂಡ ರಾಮ್‌ ಚರಣ್‌ ಉಪಾಸನಾ ಹೆಚ್ಚು ವಿಳಂಬ ಮಾಡದೆ, ಒಂದು ವರ್ಷದ ನಂತರ ಜೂನ್‌ನಲ್ಲಿ, ದಕ್ಷಿಣ ಭಾರತೀಯ ಸಾಂಪ್ರದಾಯಿಕ ರೀತಿಯಲ್ಲಿ ಅದ್ದೂರಿ ವಿವಾಹವಾದರು. 

click me!