ಅಮಲ ತಮಿಳಿನಲ್ಲಿ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ. ಜೊತೆಗೆ ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ತೆಲುಗಿನಲ್ಲಿ ಮೊದಲ ಬಾರಿಗೆ ನಾಗಾರ್ಜುನ ಜೊತೆ 'ಕಿರಾಯಿ ದಾದಾ' ಚಿತ್ರದಲ್ಲಿ ನಟಿಸಿದರು. ಮದುವೆಯ ನಂತರ ಅಮಲ ಸಿನಿಮಾಗಳಿಂದ ದೂರ ಉಳಿದರು. ಇತ್ತೀಚೆಗೆ 'ಒಕೇ ಒಕ್ಕ ಜೀವಿತಂ' ಚಿತ್ರದಲ್ಲಿ ಶರ್ವಾನಂದ್‌ಗೆ ತಾಯಿಯಾಗಿ ನಟಿಸಿದ್ದಾರೆ.