ರಾಮ್ ಚರಣ್ ಅವರಿಗೂ ಕಾರುಗಳೆಂದರೆ ತುಂಬಾ ಇಷ್ಟ. ಅವರ ಗ್ಯಾರೇಜ್‌ನಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಆಸ್ಟನ್ ಮಾರ್ಟಿನ್ V8 ವಾಂಟೇಜ್, ಮರ್ಸಿಡಿಸ್ ಮೇಬ್ಯಾಕ್ GLS 600 ನಂತಹ ಕಾರುಗಳಿವೆ. ಇಷ್ಟೇ ಅಲ್ಲ, ರಾಮ್ ಚರಣ್ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಇದರ ವೆಚ್ಚ 100-200 ಕೋಟಿ ರೂ.ಗಳಾಗಬಹುದು ಎಂದು ಹೇಳಲಾಗುತ್ತಿದೆ. ಅವರು ಹೈದರಾಬಾದ್‌ನಲ್ಲಿ ಆರ್‌ಸಿ ಎಚ್‌ಪಿಆರ್‌ಸಿ ಎಂಬ ಪೋಲೋ ರೈಡಿಂಗ್ ಕ್ಲಬ್ ಅನ್ನು ಸಹ ಹೊಂದಿದ್ದಾರೆ.