ಮದುವೆಗೆ ಕೆಲವೇ ದಿನ ಬಾಕಿ ಇರುವಾಗ ನಿಗದಿಯಾಗಿದ್ದ ಮಂಟಪ ಬದಲಿಸಿದ ನಟಿ ರಾಕುಲ್!

Published : Jan 31, 2024, 10:08 PM IST

ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ನಟ- ನಿರ್ಮಾಪಕ ಜ್ಯಾಕಿ ಭಗ್ನಾನಿ ನಡುವಿನ ಮದುವೆ ಫಿಕ್ಸ್ ಆಗಿದೆ. ಕಳೆದ 6 ತಿಂಗಳಿಂದ ಮದುವೆಗೆ ತಯಾರಿ ನಡೆಯುತ್ತಿದೆ. ಮದುವೆಗೆ ಕೆಲವೇ ದಿನ ಇರುವಾಗ ಮದುವೆ ಸ್ಥಳ, ಮಂಟಪ ಬದಲಿಸಿದ್ದಾರೆ. 

PREV
18
ಮದುವೆಗೆ ಕೆಲವೇ ದಿನ ಬಾಕಿ ಇರುವಾಗ ನಿಗದಿಯಾಗಿದ್ದ ಮಂಟಪ ಬದಲಿಸಿದ ನಟಿ ರಾಕುಲ್!

ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಜ್ಯಾಕಿ ಭಗ್ನಾನಿ ನಡುವಿನ ಮದುವೆ ವಿಚಾರ ಹೊಸದೇನಲ್ಲ. ಕಳೆದ 6 ತಿಂಗಳಿನಿಂದ ಇವರ ಮದುವೆ ತಯಾರಿಗಳು ನಡೆಯುತ್ತಿದೆ. ಇದೀಗ ಮದುವೆಗೆ ಕೆಲವೇ ದಿನ ಬಾಕಿ ಇರುವಾಗ ಮದುವೆ ಮಂಟಪ, ಸ್ಥಳ ಬದಲಿಸಿದ್ದಾರೆ.

28

ಫೆಬ್ರವರಿ 22ರಂದು ರಾಕುತ್ ಪ್ರೀತ್ ಸಿಂಗ್ ಹಾಗೂ ಜ್ಯಾಕಿ ಭಗ್ನಾನಿ ಮದುವೆ ನಿಗದಿಯಾಗಿದೆ. ನವ ಜೋಡಿಗಳು ಹಾಗೂ ಕುಟುಂಬಸ್ಥರು ಹಲವು ಸುತ್ತಿನ ಮಾತುಕತೆ ನಡೆಸಿ ಮಧ್ಯಪ್ರಾಚ್ಯ ದೇಶದಲ್ಲಿ ವಿವಾಹ ಸಮಾರಂಭ ಆಯೋಜಿಸಲು ನಿರ್ಧಿರಿಸಲಾಗಿತ್ತು.
 

38

ಪ್ರಧಾನಿ ನರೇಂದ್ರ ಮೋದಿ ಮನವಿಯಿಂದ ಇದೀಗ ರಾಕುಲ್ ಪ್ರೀತ್ ಸಿಂಗ್ ತಮ್ಮ ವಿವಾಹ ಮಹೋತ್ಸವವನ್ನು ಮದ್ಯಪ್ರಾಚ್ಯದಿಂದ ಗೋವಾಗೆ ಸ್ಥಳಾಂತರಿಸಿದ್ದಾರೆ.

48

ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರೀಮಂತರು, ಗಣ್ಯರು, ಉದ್ಯಮಿಗಳು, ಸೆಲೆಬ್ರೆಟಿಗಳು ತಮ್ಮ ಮದುವೆ ಸಮಾರಂಭವನ್ನೂ ವಿದೇಶಗಳಲ್ಲಿ ಆಯೋಜಿಸುವ ಬದಲು ಭಾರತದಲ್ಲೇ ಆಯೋಜಿಸಿ ಎಂದು ಮನವಿ ಮಾಡಿದ್ದರು.
 

58

ಭಾರತದಲ್ಲಿ ಅದ್ದೂರಿ ಮದುವೆ ಆಯೋಜನೆಯಿಂದ ಇಲ್ಲಿನ ಆರ್ಥಿಕತೆಯೂ ಅಭಿವೃದ್ಧಿ ಕಾಣಲಿದೆ. ಭಾರತದಲ್ಲೂ ಅಷ್ಟೆ ಸುಂದರ ತಾಣಗಳಿವೆ ಎಂದು ಮೋದಿ ಮನವಿ ಮಾಡಿದ್ದರು.

68

ಪ್ರಧಾನಿ ಮೋದಿ ಮನವಿ ಬಳಿಕ ಜ್ಯಾಕಿ ಭಗ್ನಾನಿ ಹಾಗೂ ರಾಕುಲ್ ಪ್ರೀತ್ ಸಿಂಗ್ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. ಇದೀಗ ಗೋವಾದಲ್ಲಿ ಮದುವೆ ಸಮಾರಂಭ ನಡೆಯಲಿದೆ. ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ.
 

78

ರಾಕುಲ್-ಜ್ಯಾಕಿ ಆಪ್ತರು, ಕುಟುಂಬಸ್ಥರು, ಬಾಲಿವುಡ್ ಹಾಗೂ ದಕ್ಷಿಣ ಭಾರತದ ನಟ ನಟಿಯರು ಮದುವೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಗೋವಾ ಸಮುದ್ರ ಕಿನಾರೆಯಲ್ಲಿ ಅದ್ಧೂರಿ ಮದುವೆ ಸಮಾರಂಭ ನಡೆಯಲಿದೆ.

88

ಗೋವಾದಲ್ಲಿ ಮದುವೆ ಬಳಿಕ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಇದೆ. ಈ ಮೂಲಕ ಮುಂಬೈನ ಸಿನಿ ಕ್ಷೇತ್ರದ ಗಣ್ಯರನ್ನು ಆಹ್ವಾನಿಸಲು ನವ ಜೋಡಿ ಸಜ್ಜಾಗಿದೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories