ಕುಟುಂಬ ಸ್ನೇಹಿ ಶೋನಲ್ಲಿ ನೋರಾ ಫತೇಹಿ ಅಶ್ಲೀಲ ನೃತ್ಯ; 'ಇವಳಿಗೆ ತಲೆ ಕೆಟ್ಟಿದೆ' ಎಂದ್ರು ನೆಟಿಜನ್ಸ್

First Published | Jan 31, 2024, 6:31 PM IST

ಡ್ಯಾನ್ಸ್ ರಿಯಾಲಿಟಿ ಶೋ, 'ಡ್ಯಾನ್ಸ್ ಪ್ಲಸ್ ಪ್ರೊ'ನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿ ನೋರಾ ಫತೇಹಿ, ಅಶ್ಲೀಲ ಡ್ಯಾನ್ಸ್ ಮೂವ್ಸ್‌ನಿಂದಾಗಿ ಜನರ ಆಕ್ರೋಶಕ್ಕೆ ಒಳಗಾಗಿದ್ದಾರೆ. ಕುಟುಂಬ ನೋಡುವಂಥ ಶೋನಲ್ಲಿ ಹೇಗಿರಬೇಕು ಎಂಬ ಸೆನ್ಸ್ ಇಲ್ಲ ಎಂದು ನೆಟ್ಟಿಗರು ಬೈಯ್ಯುತ್ತಿದ್ದಾರೆ. 

ಬಾಲಿವುಡ್‌ನ ಬೆಲ್ಲಿ ಡ್ಯಾನ್ಸ್‌ ಕ್ವೀನ್ ಎಂದು ಯಾರಾದರೂ ಇದ್ದರೆ ಅದು ನೋರಾ ಫತೇಹಿ. ಅವರು ತಮ್ಮ ಡ್ಯಾನ್ಸ್‌ಗೆ ಹಾಗೂ ದಿಟ್ಟ ನಡೆಗೆ ಹೆಸರುವಾಸಿ. 

ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವುದರಿಂದ ಹಿಡಿದು ಟಿವಿಯಲ್ಲಿ ಖ್ಯಾತ ಜಡ್ಜ್ ಆಗುವವರೆಗೆ ನೋರಾ ಬಹಳ ದೂರ ಸಾಗಿದ್ದಾರೆ. 

Tap to resize

ಆದರೆ, ಇತ್ತೀಚೆಗೆ ಜನಪ್ರಿಯ ನೃತ್ಯ ಕಾರ್ಯಕ್ರಮವಾದ ಡ್ಯಾನ್ಸ್ ಪ್ಲಸ್ ಪ್ರೊ ನ ವಿಶೇಷ ಅತಿಥಿಯಾಗಿ ಭಾಗವಹಿಸಿದ ನೋರಾ, ಅಲ್ಲಿ ಕುಣಿದ ನೃತ್ಯ ಮಾತ್ರ ಅವರಿಗೆ ಬ್ಯಾಕ್‌ಫೈರ್ ಆಗಿದೆ.

ರೆಮೋ ಡಿಸೋಜಾ, ಶಕ್ತಿ ಮೋಹನ್, ಪುನಿತ್ ಪಾಠಕ್ ಮತ್ತು ರಾಘವ್ ಜುಯಲ್ ತೀರ್ಪುಗಾರರಾಗಿರುವ ಈ ಶೋದಲ್ಲಿ ನೋರಾ ಅಶ್ಲೀಲ ಡ್ಯಾನ್ಸ್ ಮೂವ್ಸ್ ತೋರಿಸಿದ್ದಾರೆ. 
 

ದೇಹಕ್ಕೆ ಅಂಟಿಕೊಂಡ ಮೆಟಾಲಿಕ್ ಡ್ರೆಸ್‌ನಲ್ಲಿ  ನೋರಾ ಫತೇಹಿ ತನ್ನ ಹಾಡಿನ ನಾಚ್ ಮೇರಿ ರಾಣಿಯಲ್ಲಿ ವೇದಿಕೆಯ ಪ್ರದರ್ಶನ ನೀಡಿದ್ದಾರೆ. 

ಎಂದಿನಂತೆ ಸೆಕ್ಸಿಯಾಗಿ ಕಾಣುತ್ತಿದ್ದ ನೋರಾ, ತನ್ನ ಪ್ರದರ್ಶನದ ಸಮಯದಲ್ಲಿ ತನ್ನ ಸೊಂಟದ ಮೇಲೆ ನೀರನ್ನು ಸುರಿದುಕೊಳ್ಳುತ್ತಾ ವೇದಿಕೆಯ ಕಡೆ ತಿರುಗಿದಳು. 

ನೋರಾಳ ಈ ಸ್ಟೆಪ್‌ಗೆ ಅಲ್ಲಿದ್ದವರೆಲ್ಲ ಏದುಸಿರು ಬಿಡುತ್ತಾ, ಹುಬ್ಬೇರಿಸಿದ್ದು ಕಂಡು ಬಂತು. ಆದರೆ, ನೆಟಿಜನ್‌ಗಳಿಗೆ ಮಾತ್ರ ಈ ಪ್ರದರ್ಶನ ಕೋಪ ತರಿಸಿದೆ.

ಕುಟುಂಬ ಸ್ನೇಹಿ ಕಾರ್ಯಕ್ರಮಕ್ಕೆ ನೋರಾ ಫತೇಹಿಯ ಅಭಿನಯವು ತುಂಬಾ ಅಸಭ್ಯವಾಗಿದೆ ಎಂದು ನೆಟಿಜನ್‌ಗಳು ಭಾವಿಸುತ್ತಾರೆ. ಈ ಶೋ ಮಕ್ಕಳು ನೋಡುವಂತಿಲ್ಲವೇ ಎಂದು ಕೇಳಿದ್ದಾರೆ. 

ಈ ಬಗ್ಗೆ ಸೋಷ್ಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿರುವ ಹಲವರು, ನೋರಾ ನೃತ್ಯ ಅಸಭ್ಯ ಅಶ್ಲೀಲವಾಗಿದೆ. ಎಲ್ಲಿ ಹೇಗಿರಬೇಕೆಂಬ ಪ್ರಜ್ಞೆ ಈಕೆಗಿದ್ದಂತಿಲ್ಲ ಎಂದಿದ್ದಾರೆ.
 

ಮತ್ತೊಬ್ಬರು ಕಾಮೆಂಟ್ ಮಾಡಿ, ಈಕೆಗೆ ತಲೆ ಕೆಟ್ಟಿದೆ. ಕುಟುಂಬ ನೋಡುವಂಥ ಕಾರ್ಯಕ್ರಮದಲ್ಲಿ ಹೇಗಿರಬೇಕೆಂಬ ಸೆನ್ಸ್ ಇಲ್ಲದ ಅಸಭ್ಯ ನಟಿ ಎಂದಿದ್ದಾರೆ.

ಈಕೆಗೆ ದೇಹ ಪ್ರದರ್ಶನ ಬಿಟ್ಟು ಬೇರೇನೂ ತಿಳಿದಿಲ್ಲ. ಅದಕ್ಕಾಗಿಯೇ ಹೆಸರು ಮಾಡಲು ಇಂಥ ಸರ್ಕಸ್ ಮಾಡುತ್ತಾಳೆ ಎಂದು ಇನ್ನೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 
 

Latest Videos

click me!