ತಮಿಳಿನಲ್ಲಿ 'ರೋಜಾ' ಚಿತ್ರ ದೊಡ್ಡ ಹಿಟ್ ಆದ ನಂತರ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲೂ ಎ.ಆರ್ ರೆಹಮಾನ್ ಸಂಗೀತ ಸಂಯೋಜಿಸಲು ಆರಂಭಿಸಿದರು. 1992 ರಲ್ಲಿ ಬಿಡುಗಡೆಯಾದ ಮೋಹನ್ ಲಾಲ್ ಅಭಿನಯದ 'ಯೋಧ' ಚಿತ್ರಕ್ಕೆ ಸಂಗೀತ ನೀಡಿದವರು ರೆಹಮಾನ್. 'ಪುತಿಯ ಮುಖಂ', 'ಜೆಂಟಲ್ ಮ್ಯಾನ್', 'ಕಿಳಕ್ಕು ಸೀಮೈಯಿಲೆ', 'ಉಳವನ್', 'ತಿರುಡಾ ತಿರುಡಾ', 'ವಂಡಿಚೋಲ ಚಿನ್ನರಾಸು', 'ಡ್ಯುಯೆಟ್', 'ಮೇ ಮಾದಮ್', 'ಕಾದಲನ್', 'ಪವಿತ್ರ', 'ಕರುತ್ತಮ್ಮ' ಮತ್ತು 'ಪುತಿಯ ಮನ್ನರ್ಗಳ್' ಹೀಗೆ ಎ.ಆರ್ ರೆಹಮಾನ್ ಸಂಗೀತ ನೀಡಿದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆದವು.