ಅನಸೂಯ ಭಾರದ್ವಾಜ್ ತಮ್ಮ ವೃತ್ತಿಜೀವನವನ್ನು ಆಂಕರ್ ಆಗಿ ಪ್ರಾರಂಭಿಸಿದವರು. ಆ ನಂತರ ನಟಿಯಾದವರು. ಸದ್ಯ ಟಾಲಿವುಡ್‌ನಲ್ಲಿ ವಿಭಿನ್ನ ಪಾತ್ರಗಳಲ್ಲಿ ಬ್ಯುಸಿಯಾಗಿರುವ ಅನಸೂಯಾ ಇದೀಗ ಸುಂದರವಾದ ಡ್ರೆಸ್ ಧರಿಸಿ ಭರ್ಜರಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ತೆಲುಗು ನಟಿ ಪುಷ್ಪ ಸಿನಿಮಾ ಖ್ಯಾತಿಯ ಅನಸೂಯಾ ಭಾರಧ್ವಾಜ್ ಅವರು ಇತ್ತೀಚೆಗೆ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಟ್ರೆಂಡಿಯಾಗಿ ರೆಡಿಯಾಗಿದ್ದ ನಟಿ ಮಾಡರ್ನ್ ಲುಕ್ನಲ್ಲಿ ಹಾಟ್ ಆಗಿ ಮಿಂಚಿದ್ದಾರೆ.
27
ಪುಷ್ಪ ಸಿನಿಮಾದಲ್ಲಿ ವಿಲನ್ ರೋಲ್ ಮಾಡುವ ಮೂಲಕ ಅನಸೂಯಾ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ್ದರು. ಈ ಸಿನಿಮಾ ನಂತರ ನಟಿಗೆ ಸಿನಿಮಾಗಳಲ್ಲಿ ಅವಕಾಶಗಳೂ ಹೆಚ್ಚಾದವು.
37
ಇದೀಗ ನಟಿ ಮತ್ತಷ್ಟು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಇಷ್ಟೇ ಅಲ್ಲದೆ ಪುಷ್ಪ 2 ಸಿನಿಮಾದ ಶೂಟಿಂಗ್ನಲ್ಲಿಯೂ ಫುಲ್ ಬ್ಯುಸಿಯಾಗಿದ್ದಾರೆ. ಈ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ನಟಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.
47
ನಟಿ ಇತ್ತೀಚೆಗೆ ಮಾಡಿಸಿಕೊಂಡಿರುವ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಇದರಲ್ಲಿ ನಟಿಯನ್ನು ನೋಡಿದ ನೆಟ್ಟಿಗರು, ತಾಯಿಯಾದ್ರೂ ನಿಮ್ಮ ಫಿಗರ್ ಹೇಗೆ ಮೆಂಟೈನ್ ಮಾಡ್ತೀರಾ, ನಿಮ್ಮ ಏಜ್ ಎಷ್ಟು ಎಂದು ಕಾಮೆಂಟ್ ಮಾಡಿದ್ದಾರೆ.
57
ಅಂದ ಹಾಗೆ ನಟಿ ಅನಸೂಯಾ ಅವರ ವಯಸ್ಸು 38. ಆದರೆ ಪುಷ್ಪಾ ಅವರಿಗೆ 38 ವರ್ಷ ವಯಸ್ಸು ಎಂದರೆ ನಂಬುವುದು ಕಷ್ಟ ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ. ಅಂತೂ ಇಂತೂ ನಟಿಯ ಫೋಟೋಸ್ ವೈರಲ್ ಆಗಿವೆ.
67
ನಿರೂಪಕಿಯಾಗಿ ಮನರಂಜನಾ ಕ್ಷೇತ್ರಕ್ಕೆ ಅನಸೂಯ ಭಾರಧ್ವಜ್ ಎಂಟ್ರಿ ಕೊಟ್ಟರು. 'ಜಬರ್ದಸ್ತ್' ಕಾಮಿಡಿ ಶೋ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದರು. ನಂತರ ಸಿನಿಮಾಗಳನ್ನು ಸಣ್ಣಪುಟ್ಟ ಪಾತ್ರ ಮಾಡಲು ಅನು ಆರಂಭಿಸಿದ್ದರು.
77
ರಾಮ್‌ಚರಣ್ ನಟನೆಯ 'ರಂಗಸ್ಥಳಂ' ಚಿತ್ರದಲ್ಲಿ ರಂಗಮತ್ತೆ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು. ಇನ್ನು ಅನಸೂಯ ವಿವಾಹಿತೆಯಾಗಿದ್ದು ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಹೀಗಿದ್ದರೂ ಅವರಿಗೆ ಈಗಲೇ ಸಿನಿಮಾದಲ್ಲಿ ಹೆಚ್ಚಿನ ಅವಕಾಶ ಸಿಗುತ್ತಿದೆ. ಅವರ ಡಿಮ್ಯಾಂಡ್ ಕೂಡಾ ಹೆಚ್ಚುತ್ತಿದೆ.