ಮದುವೆ ಆಗುತ್ತೆ, ಮುಂದೆ ಬರೋದೆಲ್ಲಾ ಒಳ್ಳೆಯ ದಿನಗಳು, ಸಂತೋಷನೇ ಅಂತ ಹೇಳಿದ್ದಾರೆ. ಆದರೆ ಮದುವೆ ಯಾವಾಗ ಅಂತ ಮಾತ್ರ ಖಚಿತವಾಗಿ ಹೇಳಿಲ್ಲ. ಆದರೆ ಪ್ರಭಾಸ್ ಮದುವೆಯ ಬಗ್ಗೆ ಅವರ ಮಾತುಗಳು ಸ್ವಲ್ಪ ಭರವಸೆ ಮೂಡಿಸುತ್ತವೆ. ಮದುವೆ ಆಗುತ್ತೆ ಅನ್ನೋದನ್ನ ಸ್ಪಷ್ಟಪಡಿಸುತ್ತವೆ. ನಿಜವಾಗ್ಲೂ ಆಗುತ್ತಾ? ಆ ವಿಷಯದಲ್ಲಿ ಸ್ವಲ್ಪ ಮುಂದೆ ಹೋಗುತ್ತಾ? ಅನ್ನೋದನ್ನ ನೋಡಬೇಕು.
ಈ ಶುಭ ಸುದ್ದಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ. ಆದರೆ ತಮ್ಮ ಮದುವೆಯ ಬಗ್ಗೆ ಪ್ರಭಾಸ್ ಈ ಹಿಂದೆ ಪ್ರತಿಕ್ರಿಯಿಸಿ, ಅವರು ಮದುವೆ ಆದ್ರೆ ತುಂಬಾ ಹುಡುಗಿಯರು ಬೇಜಾರಾಗ್ತಾರೆ, ಅದಕ್ಕೆ ಮದುವೆ ಆಗ್ತಿಲ್ಲ, ಸಿನಿಮಾ ಮಾಡ್ತಾ ಇದ್ದೀನಿ ಅಂತ ಹೇಳಿದ್ದರು. ಮದುವೆಯ ಬಗ್ಗೆ ಅವರೂ ಆ ಕುತೂಹಲವನ್ನ ಹಾಗೇ ಇಟ್ಟಿದ್ದಾರೆ. ಈಗ ಸತತ ಗೆಲುವಿನಲ್ಲಿರುವ ಪ್ರಭಾಸ್ ಇನ್ಮೇಲಾದ್ರೂ ಮದುವೆಯ ಬಗ್ಗೆ ಯೋಚಿಸುತ್ತಾರಾ? ಅನ್ನೋದನ್ನ ನೋಡಬೇಕು.