ಮದುವೆಯಾಗಿ ಎರಡು ವರ್ಷಗಳಾಗುತ್ತಿರುವಾಗ ಹನ್ಸಿಕಾ, ಈಗ ಒಂದು ಖುಷಿ ಸುದ್ದಿ ಹಂಚಿಕೊಂಡಿದ್ದಾರೆ. ತಮ್ಮ ಗಂಡ ಸೋಹೈಲ್ ಖತೂರಿಯಾ ಜೊತೆ ಸುಂದರ ಬಂಗಲೆ ಕಟ್ಟಿಸಿ, ಗೃಹಪ್ರವೇಶ ಮಾಡಿದ್ದಾರೆ. ಆ ಫೋಟೋಗಳನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹೊಸ ಆರಂಭ ಎಂದು ಹನ್ಸಿಕಾ ಪೋಸ್ಟ್ ಮಾಡಿದ ಫೋಟೋಗಳಿಗೆ ಲೈಕ್‌ಗಳು, ಶುಭಾಶಯಗಳು ಹರಿದುಬರುತ್ತಿವೆ. ಹನ್ಸಿಕಾ ಗೃಹಪ್ರವೇಶದಲ್ಲಿ ಅವರ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.