ಇದಕ್ಕೆ ಸಲಾರ್, ದೇವರ, ಕಲ್ಕಿ ಚಿತ್ರಗಳೇ ಉದಾಹರಣೆ ಎಂದು ನಾಗವಂಶಿ ಹೇಳಿದ್ದಾರೆ. ಗುಂಟೂರು ಕಾರಂ ಚಿತ್ರ ಕೂಡ ಹಾಗೆಯೇ ಎಂದಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಎಲಿವೇಷನ್ ದೃಶ್ಯಗಳು ಚೆನ್ನಾಗಿವೆ. ಆದರೂ ಕೆಲವರು ನೆಗೆಟಿವ್ ಅಂಶಗಳನ್ನು ಹರಡಿದರು. ಸಿನಿಮಾದಲ್ಲಿನ ದೋಷಗಳನ್ನು ಹುಡುಕಿದರು. ಕಲ್ಕಿ ಚಿತ್ರದ ಬಗ್ಗೆಯೂ ವಿಷ ಕಕ್ಕಿದರು. ಮೊದಲಾರ್ಧ ಚೆನ್ನಾಗಿಲ್ಲ ಎಂದು ಟ್ರೋಲ್ ಮಾಡಿದರು. ಅಂದರೆ ಎರಡನೇ ಅರ್ಧದಲ್ಲಿ ತೋರಿಸಿದ ಕರ್ಣನನ್ನು 3 ಗಂಟೆಗಳ ಕಾಲ ತೋರಿಸಬೇಕೆಂದು ಅವರ ಉದ್ದೇಶವೇ ಎಂದು ನಾಗವಂಶಿ ಪ್ರಶ್ನಿಸಿದ್ದಾರೆ.