ಕಥೆ ಕೇಳಿದ ತಕ್ಷಣ ಪವನ್ ಕಲ್ಯಾಣ್, 'ಯಾವಾಗ ಶೂಟಿಂಗ್ ಶುರು ಮಾಡ್ತೀವಿ?' ಅಂತ ಕೇಳಿದ್ರು. ನಾನು 'ಅಡ್ವಾನ್ಸ್ ಎಷ್ಟು ಕೊಡ್ಬೇಕು?' ಅಂತ ಕೇಳಿದೆ. 'ಅದೆಲ್ಲ ನಂತರ ನೋಡಿಕೊಳ್ಳೋಣ, ಮೊದಲು ಲೊಕೇಶನ್ ಫೈನಲ್ ಮಾಡಿ ಶೂಟಿಂಗ್ ಶುರು ಮಾಡಬೇಕು' ಅಂದ್ರು. 'ತೊಲಿಪ್ರೇಮ' ಕಥೆ ಪವನ್‌ಗೆ ತುಂಬ ಇಷ್ಟವಾಗಿತ್ತು. ನನ್ನ ಸ್ನೇಹಿತ ಮಹೇಂದರ್ ರೆಡ್ಡಿ ಇದ್ದರು. ನಾವಿಬ್ಬರೂ ಪಾರ್ಟ್ನರ್ಸ್. ಹೀಗೆ ಪವನ್ ಜೊತೆ ಸಿನಿಮಾ ಓಕೆ ಆಯ್ತು. ಇಬ್ಬರೂ ಸೇರಿ ಮಾಡೋಣ, ಈಗ ನೀನು ದುಡ್ಡು ಹಾಕು ಅಂತ ಹೇಳಿದೆ. ಅವರ ಹತ್ರ ನನಗೆ ಬರಬೇಕಾದ ಹಣ ಇತ್ತು.