ತೆಲುಗು ಸಿನಿಮಾ ಇಂಡಸ್ಟ್ರಿ ಕೆಲವು ಕುಟುಂಬಗಳ ಕೈಯಲ್ಲಿ ಇದೆ ಅಂತ ಎಲ್ಲರಿಗೂ ಗೊತ್ತು. ಸ್ವಶಕ್ತಿಯಿಂದ ಬೆಳೆದವರು ತುಂಬಾ ಕಡಿಮೆ. ಅಂಥವರಲ್ಲಿ ಒಬ್ಬರು ದಿಲ್ ರಾಜು. ಮೊದಲು ವಿತರಕರಾಗಿ, ನಂತರ ನಿರ್ಮಾಪಕರಾಗಿ, ಈಗ ದೊಡ್ಡ ಸಿನಿಮಾಗಳನ್ನ ನಿರ್ಮಿಸುತ್ತಿದ್ದಾರೆ.
24
‘ದಿಲ್’ ಸಿನಿಮಾದಿಂದ ನಿರ್ಮಾಪಕರಾದ ದಿಲ್ ರಾಜು, ಈವರೆಗೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಹಲವು ಥಿಯೇಟರ್‌ಗಳು ಅವರದ್ದೇ. ಟಾಪ್ ನಿರ್ಮಾಪಕರಷ್ಟೇ ಅಲ್ಲ, ಟಾಪ್ ವಿತರಕ, ಪ್ರದರ್ಶಕ ಕೂಡ.
34
ಈ ವರ್ಷ ಸಂಕ್ರಾಂತಿಗೆ ಬಿಡುಗಡೆಯಾದ ರಾಮ್ ಚರಣ್ 'ಗೇಮ್ ಚೇಂಜರ್` ಸಿನಿಮಾವನ್ನು ದಿಲ್ ರಾಜು ನಿರ್ಮಿಸಿದ್ದರು. ₹450 ಕೋಟಿ ಬಜೆಟ್‌ನ ಈ ಸಿನಿಮಾ ಪ್ಲಾಪ್ ಆಯ್ತು. ದಿಲ್ ರಾಜುಗೆ ₹100 ಕೋಟಿ ನಷ್ಟ ಆಯ್ತು ಅಂತಾರೆ.
44
ಆದ್ರೆ, ಇದೇ ಸಂಕ್ರಾಂತಿಗೆ ಬಂದ ಇನ್ನೊಂದು ಸಿನಿಮಾದಿಂದ ₹100 ಕೋಟಿ ಲಾಭ ಬಂತು. ಹೌದು! ‘ಸಂಕ್ರಾಂತಿಕಿ ವಸ್ತುನ್ನಾಂ’ ಸಿನಿಮಾ ₹300 ಕೋಟಿ ಗಳಿಸಿತು. ಇದರಿಂದ ದಿಲ್ ರಾಜುಗೆ ₹100 ಕೋಟಿಗೂ ಹೆಚ್ಚು ಲಾಭ. `ಗೇಮ್ ಚೇಂಜರ್` ನಷ್ಟವನ್ನು ಭರ್ತಿ ಮಾಡಿಕೊಂಡರು.