ನಟಿ ಪ್ರಿಯಾಂಕಾ ಚೋಪ್ರಾಗೆ ಶೂಟಿಂಗ್ ಸ್ಪಾಟ್‌ನಲ್ಲಿ ಗಾಯ; ರಕ್ತಸಿಕ್ತ ಘಟನೆ ಬಗ್ಗೆ ಮಾಹಿತಿ ಬಿಚ್ಚಿಟ್ಟ ನಟಿ

First Published | Jun 22, 2024, 12:10 PM IST

ಹಾಲಿವುಡ್‌ನ ದಿ ಬ್ಲಫ್ ಸಿನಿಮಾ ಶೂಟಿಂಗ್‌ ವೇಳೆ ನಟಿ ಪ್ರಿಯಾಂಕಾ ಚೋಪ್ರಾ ಕುತ್ತಿಗೆ ಹಾಗೂ ಕೈಗಳಿಗೆ ಚಾಕು ಇರಿತದ ಗಾಯಗಳಾಗಿವೆ. ಮೂಗು ಬಾಯಲ್ಲಿ ರಕ್ತ ಸೋರುತ್ತಿರುವುದು ಕಂಡು ಅಭಿಮಾನಿಗಳು ಆತಂಕಗೊಂಡಿದ್ದಾರೆ. ಈ ಘಟನೆಯ ಬಗ್ಗೆ ಸ್ವತಃ ಪ್ರಿಯಾಂಕಾ ಚೋಪ್ರಾ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಪ್ರಸ್ತುತ ಹಾಲಿವುಡ್‌ನಲ್ಲಿ ಬಿಜಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರಿಗೆ ಶೂಟಿಂಗ್‌ ವೇಳೆ ಇರಿತವಾಗಿದೆ ಎಂದು ಅಭಿಮಾನಿಗಳಲ್ಲಿ ಆತಂಕ ಉಂಟಾಗಿತ್ತು. ಕುತ್ತಿಗೆ ಭಾಗದಲ್ಲಿ ಚಾಕು ಇರಿತದ ಫೋಟೋ ವೈರಲ್ ಆಗಿತ್ತು.

ಹಾಲಿವುಡ್‌ನಲ್ಲಿ 'ದಿ ಬ್ಲಫ್‌' ಚಿತ್ರದಲ್ಲಿ (The Bluff Movie) ನಟಿಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾಗೆ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಗಂಟಲಿನ ಹೊರಭಾಗದಲ್ಲಿ ಉದ್ದವಾಗಿ ಚಾಕುವಿನಿಂದ ಇರಿದಂತೆ ಕುತ್ತುಗೆ ಭಾಗ ಸೀಳಾಗಿರುವುದನ್ನು ನೋಡಬಹುದು. ಈ ಮಾಹಿತಿಯನ್ನು ಖುದ್ದು ನಟಿಯೇ ತಮ್ಮ  ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಈ ಪೋಸ್ಟ್‌ಗೆ ವೃತ್ತಿ ಜೀವನದಲ್ಲಿ ಎದುರಾಗುವ ಅಪಾಯಗಳು' ಟ್ಯಾಗ್‌ಲೈನ್ ಕೂಡ ಬರೆದುಕೊಂಡಿದ್ದಾರೆ.

Tap to resize

ಸಿನಿಮಾದಲ್ಲಿ ಸ್ಟಂಟ್ ಮಾಡುವಾಗ (Movie stunt) ಗಾಯಗೊಂಡ ದೃಶ್ಯವೆಂದೂ ಹೇಳಿಕೊಂಡಿದ್ದಾರೆ. ಆದರೆ, ಸಿನಿಮಾ ಶೂಟಿಂಗ್ ವೇಳೆ ದೊಡ್ಡ ಮಟ್ಟದ ಗಾಯವಾಗಿದ್ದು, ಕುತ್ತಿಗೆ, ಬೆನ್ನು, ಕೈಗಳು, ಭುಜ ಹಾಗೂ ಇತರೆಡೆ ಚಾಕು ಇರಿತದ ಗಾಯಗಳಾಗಿವೆ. ಜೊತೆಗೆ, ಮೂಗು ಹಾಗೂ ಬಾಯಿಯಿಂದ ರಕ್ತ ಸೋರುತ್ತಿದ್ದು, ಎದೆ ಭಾಗಕ್ಕೆ ಹೆಚ್ಚು ಹೊಡೆದ ಬಿದ್ದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಆದರೆ, ಈ ಘಟನೆಯ ಬಗ್ಗೆ ಸ್ವತಃ ಸ್ಪಷ್ಟೀಕರಣ ಕೊಟ್ಟಿರುವ ನಟಿ ಪ್ರಿಯಾಂಕಾ ಚೋಪ್ರಾ 'ದಿ ಬ್ಲಫ್' ಚಿತ್ರದ ಶೂಟಿಂಗ್‌ನಲ್ಲಿ ನಾವು ಚಲನಚಿತ್ರಗಳಿಗೆ ನಕಲಿ ರಕ್ತವನ್ನು ಬಳಸುತ್ತೇವೆ. ಇದು ಮೇಕಪ್ ಆಗಿದೆ (for those who can’t tell. We use fake blood for movies. It’s make up. Thank you.) ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.

ಹಾಲಿವುಡ್‌ ನಿರ್ದೇಶಕ ಫ್ರಾಂಕ್ ಇ. ಫ್ಲವರ್ಸ್ ನಿರ್ದೇಶನದಲ್ಲಿ 'ದಿ ಬ್ಲಫ್' ಚಿತ್ರ ನಿರ್ಮಾಣವಾಗುತ್ತಿದೆ. ಇದರಲ್ಲಿ ಪ್ರಿಯಾಂಕಾ ನಾಯಕಿ ಆಗಿದ್ದು, ಕಾರ್ಲ್ ಅರ್ಬನ್, ಇಸ್ಮಾಯೆಲ್ ಕ್ರೂಜ್ ಕಾರ್ಡೋವಾ, ನಟಿ ಸಫಿಯಾ ಓಕ್ಲೆ ಗ್ರೀನ್ ಸೇರಿ ಹಲವರು ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರವನ್ನು ಎಜಿಬಿಒ ನ ಆಂಥೋನಿ ರುಸ್ಸೋ, ಜೋ ರುಸ್ಸೋ, ಏಂಜೆಲಾ ರುಸ್ಸೋ-ಓಟ್ ಸ್ಟಾಟ್ ಮತ್ತು ಮೈಕಲ್ ಡಿಸ್ಕೋ ನಿರ್ಮಿಸಿದ್ದಾರೆ.

ಇನ್ನು ದಿ ಬ್ಲಫ್ ಚಿತ್ರವನ್ನು ಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಈ ಚಿತ್ರವು ಅಮೇಜಾನ್ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. 'ದಿ ಬ್ಲಫ್' ಸಿನಿಮಾ ಮಾಜಿ ಮಹಿಳಾ ದರೋಡೆಕೋರರ ಕಥೆಯ ಹಿನ್ನೆಲೆ ಹೊಂದಿದೆ. ನಟಿ ಪ್ರಿಯಾಂಕಾ ಚೀಪ್ರಾ ದರೋಡೆಕೋರರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ತಾನು ದರೋಡೆ ಮಾಡಿದ್ದರ ಪಾಪಗಳು ಕಾಡತೊಡಗುತ್ತಿದ್ದಂತೆ ಇತರೆ ದರೋಡೆಕೋರರಿಂದ ಕುಟುಂಬವನ್ನು ರಕ್ಷಿಸಲು ಹೆಣಗಾಡುತ್ತಾಳೆ.

ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಲ್ಲಿ ಪತಿ ನಿಕ್ ಜೋನಸ್‌ ಜೊತೆ ಹಾಗೂ ಪುಟ್ಟ ಮಗಳ ಜೊತೆ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. ಆದರೆ, ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್‌ ಜೋನಸ್ ನಡುವೆ  10 ವರ್ಷಗಳ ವಯಸ್ಸಿನ ಅಂತರವಿದೆ.

ಭಾರತದಲ್ಲಿ ಕೆಲ ದಿನಗಳ ಕಾಲ ಭಾರಿ ಪ್ರಸಿದ್ಧಿ ಗಳಿಸಿದ್ದ ಟಿಕ್‌ಟಾಕ್‌ ಬಗ್ಗೆ ಗೊತ್ತಿಲ್ಲ, ಆದರೆ, ಅಮೇರಿಕಾದಲ್ಲಿ ಚಾಲ್ತಿಯಲ್ಲಿರುವ ಟಿಕ‌ಟಾಕ್ ಬಗ್ಗೆ ನಿಕ್ ನನಗೆ ಕಲಿಸುತ್ತಿದ್ದಾರೆ. ಈ ರೀತಿಯಲ್ಲಿ ನಾವು ಒಬ್ಬರಿಗೊಬ್ಬರು ಕಲಿಸುತ್ತ, ಕಲಿಯುತ್ತ ಚೆನ್ನಾಗಿ ಪರಸ್ಪರ ಅರ್ಥ ಮಾಡಿಕೊಂಡು ಸುಖವಾಗಿ ಜೀವನ ನಡೆಸುತ್ತಿದ್ದೇವೆ ಎಂದು ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.

Latest Videos

click me!