ಸೂಪರ್‌ಸ್ಟಾರ್‌ಗಳ ಹೃದಯ ಕದ್ದ ದೇಸಿಗರ್ಲ್‌ ಪಿಸಿ ಡೇಟಿಂಗ್‌ ಇತಿಹಾಸ

Published : Jul 18, 2022, 05:39 PM IST

ಬಾಲಿವುಡ್ ಇಂಡಸ್ಟ್ರಿಯಲ್ಲಿ (Bollywood Industry) ದೇಸಿ ಗರ್ಲ್ ಎಂದೇ ಫೇಮಸ್ ಆಗಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಇಂದು ಅಂದರೆ ಜುಲೈ 18 ರಂದು ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1982 ರಲ್ಲಿ ಜಮ್ಶೆಡ್ಪುರದಲ್ಲಿ ಜನಿಸಿದ ಪ್ರಿಯಾಂಕಾ 2000ನೇ ಇಸವಿಯಲ್ಲಿ ವಿಶ್ವ ಸುಂದರಿ ಪಟ್ಟವನ್ನು ಗೆದ್ದುಕೊಂಡಿದ್ದರು. ಅವರು ಬಾಲಿವುಡ್‌ಗಿಂತ ಮೊದಲು ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2003ರಲ್ಲಿ ತಮಿಳನ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಒಂದಕ್ಕಿಂತ ಹೆಚ್ಚು ಹಿಟ್‌ ಚಿತ್ರಗಳಲ್ಲಿ ಕೆಲಸ ಮಾಡಿರುವ ಪ್ರಿಯಾಂಕಾ ಚೋಪ್ರಾ ಅವರ ಸಾಧನೆಯ ಜೊತೆಗೆ ಲವ್‌ ಲೈಫ್‌ ಸಹ ಸಾಕಷ್ಟು ಫೇಮಸ್‌ ಆಗಿದೆ. ಇಲ್ಲಿದೆ ಪಿಸಿಯ ಡೇಟಿಂಗ್‌ ಹಿಸ್ಟರಿ.

PREV
17
ಸೂಪರ್‌ಸ್ಟಾರ್‌ಗಳ ಹೃದಯ ಕದ್ದ ದೇಸಿಗರ್ಲ್‌ ಪಿಸಿ ಡೇಟಿಂಗ್‌ ಇತಿಹಾಸ

ನಿಕ್ ಜೋನಾಸ್ ಅವರನ್ನು ಮದುವೆಯಾಗುವ ಮೊದಲು, ಪ್ರಿಯಾಂಕಾ ಚೋಪ್ರಾ ಅನೇಕರ ಹೃದಯಗಳನ್ನು ಗೆದಿದ್ದರು ಮತ್ತು ಅನೇಕ ಹೃದಯಗಳನ್ನು ಮುರಿದರು. ಬಾಲಿವುಡ್‌ಗೆ ಕಾಲಿಡುವ ಮುನ್ನ ಪ್ರಿಯಾಂಕಾ ಅಸೀಮ್ ಮರ್ಚಂಟ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಇಂಡಸ್ಟ್ರಿಯಲ್ಲಿ ಹೆಸರು, ಪ್ರಖ್ಯಾತಿ ಸಿಕ್ಕ ತಕ್ಷಣ ಅಸೀಮ್ ನನ್ನು ದೂರವಿಟ್ಟರು

27

ತನ್ನ ಮೊದಲ ಹಿಟ್ ಚಿತ್ರ ಅಂದಾಜ್‌ನಲ್ಲಿ ಕೆಲಸ ಮಾಡುವಾಗ, ಪ್ರಿಯಾಂಕಾ ಚೋಪ್ರಾ ಅಕ್ಷಯ್ ಕುಮಾರ್‌ಗೆ ಹತ್ತಿರವಾದರು. ಇಬ್ಬರೂ ಒಟ್ಟಿಗೆ ಅನೇಕ ಹಿಟ್ ಚಿತ್ರಗಳನ್ನು ನೀಡಿದರು ಮತ್ತು ಅವರ ಸಂಬಂಧವೂ ಸುದ್ದಿಯಲ್ಲಿತ್ತು. ವರದಿಗಳ ಪ್ರಕಾರ, ಇಬ್ಬರ ಸಂಬಂಧದ ವಿಷಯ ಅಕ್ಷಯ್ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರ ಕಿವಿಗೆ ಬಂದಾಗ, ಅವರು ಕೋಪಗೊಂಡರು. ಪ್ರಿಯಾಂಕಾಗೆ ಪಾಠ ಕಲಿಸಲು ಟ್ವಿಂಕಲ್ ಶೂಟಿಂಗ್ ಗೆ ಆಗಮಿಸಿದ್ದರು ಎನ್ನಲಾಗಿದೆ. ಪತ್ನಿಯ ಬೆದರಿಕೆಯ ನಂತರ ಅಕ್ಷಯ್ ಪಿಸಿ ಜೊತೆ ಕೆಲಸ ಮಾಡುವುದನ್ನು ನಿಲ್ಲಿಸಿದ್ದರು.

37

ಅಕ್ಷಯ್ ಕುಮಾರ್ ಜೊತೆಗಿನ ಬ್ರೇಕ್ಅಪ್ ನಂತರ, ಪ್ರಿಯಾಂಕಾ ಚೋಪ್ರಾ ಹರ್ಮನ್ ಬವೇಜಾ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಲವ್ ಸ್ಟೋರಿ 2050 ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಬ್ಬರ ಡೇಟಿಂಗ್ ಸಮಯದಲ್ಲಿ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ವೇಗವಾಗಿ ಹರಡಿತು.  ಲವ್ ಸ್ಟೋರಿ 2050 ಸೂಪರ್ ಫ್ಲಾಪ್ ಆದ ನಂತರ ಇಬ್ಬರೂ ಬೇರ್ಪಟ್ಟರು.


 

47

ಫರ್ಹಾನ್ ಅಖ್ತರ್ ಅವರ ಡಾನ್ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ಶಾರುಖ್ ಖಾನ್ ಜೊತೆ ಕೆಲಸ ಮಾಡುವ ಅವಕಾಶ ಪ್ರಿಯಾಂಕಾ ಚೋಪ್ರಾಗೆ ಸಿಕ್ಕಿತು. ಒಟ್ಟಿಗೆ ಕೆಲಸ ಮಾಡುತ್ತಿರುವಾಗ ಇಬ್ಬರ ನಡುವೆ ಆತ್ಮೀಯತೆ ಬೆಳೆಯತೊಡಗಿತು ಮತ್ತು ಈ ವಿಷಯ  ಕಿಂಗ್‌ ಖಾನ್‌ ಪತ್ನಿ ಗೌರಿಯ ಕಿವಿಗೂ ಬಿದ್ದಿತ್ತು.


 

57

ಪ್ರಿಯಾಂಕಾ ಕಾರಣದಿಂದ ಶಾರುಖ್-ಗೌರಿ ಸಂಬಂಧ ವಿಚ್ಛೇದನದ ಅಂಚಿಗೆ ತಲುಪಿತ್ತು ಎನ್ನಲಾಗಿದೆ. ಅಷ್ಟೇ ಅಲ್ಲ ಗೌರಿ ಮನೆ ಬಿಟ್ಟು ಹೋಗುವುದಾಗಿ ಬೆದರಿಸಿದ್ದಾರೆ. SRK ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು ಮತ್ತು PC ಯಿಂದ ದೂರವಾದರು.

67

ಶಾರುಖ್ ಖಾನ್ ಅವರಿಂದು ದೂರವಾದ ನಂತರ  ನಂತರ, ಪ್ರಿಯಾಂಕಾ ಚೋಪ್ರಾ ಶಾಹಿದ್ ಕಪೂರ್ ಅವರೊಂದಿಗೆ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದರು ಮತ್ತು ಈ ಸಮಯದಲ್ಲಿ ಅವರ ಸಂಬಂಧದ ವಿಷಯಗಳು ಸಹ ಮುನ್ನೆಲೆಗೆ ಬಂದವು. ಆದರೆ ಆ ಸಮಯದಲ್ಲಿ ಪಿಸಿ ಟಾಪ್ ನಟಿಯಾಗಿದ್ದ ಕಾರಣ ಮತ್ತು ಶಾಹಿದ್ ಇನ್ನೂ ನ್ಯೂಕಮ್ಮರ್‌ ಆಗಿದ್ದ ಕಾರಣದಿಂದ ಸಂಬಂಧವು ದೀರ್ಘಕಾಲ ಉಳಿಯಿತು.


 

77

ಪ್ರಿಯಾಂಕಾ ಚೋಪ್ರಾಗೆ ವಿದೇಶಿ ಗೆಳೆಯ ಗೆರಾರ್ಡ್ ಬಟ್ಲರ್ ಜೊತೆ ಸಂಬಂಧ  ಹೊಂದಿದ್ದರಂತೆ. ವರದಿಗಳ ಪ್ರಕಾರ, ಗೆರಾರ್ಡ್ 2009ರಲ್ಲಿ ಭಾರತದಲ್ಲಿ ಪಾರ್ಟಿಯನ್ನು ಆಯೋಜಿಸಿದ್ದರು ಮತ್ತು ಪಿಸಿ ಕೂಡ ಅದರಲ್ಲಿ ಭಾಗವಹಿಸಿದ್ದರು. ಪಾರ್ಟಿಯಲ್ಲಿ ಪ್ರಿಯಾಂಕಾಗೆ ಪ್ರಪೋಸ್‌ ಮಾಡಿದ್ದರು  ಆದರೆ ಈ ಸಂಬಂಧ ಅಲ್ಪಕಾಲಿಕವಾಗಿತ್ತು. ಅಂತಿಮವಾಗಿ ಪಿಸಿ 2018 ರಲ್ಲಿ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರನ್ನು ವಿವಾಹವಾದರು. ಪ್ರಿಯಾಂಕಾ ಮತ್ತು ನಿಕ್‌ ದಂಪತಿಗೆ ಮಾಲ್ತಿ ಮೇರಿ ಎಂಬ ಮಗಳೂ ಇದ್ದಾಳೆ.

Read more Photos on
click me!

Recommended Stories