ಊದಿದ ಕಾಲು, ನಡೆಯಲು ಕಷ್ಟ ಪಡುತ್ತಿರುವ ಕರೀನಾ ಫೋಟೊ ವೈರಲ್!
First Published | Feb 6, 2021, 2:38 PM ISTಬಾಲಿವುಡ್ ದಿವಾ ಕರೀನಾ ಕಪೂರ್‌ರ ಪ್ರೆಗ್ನೆಂಸಿಯ ಕೊನೆಯ ತಿಂಗಳು ನಡೆಯುತ್ತಿದೆ. ಯಾವುದೇ ಸಮಯದಲ್ಲಿ ಕರೀನಾ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಪರಿಸ್ಥಿತಿಯಲ್ಲಿ, ಕರೀನಾ ಕಾಲುಗಳು ಊದಿಕೊಂಡಿದ್ದು, ಆಕೆಗೆ ನಡೆಯುವುದು ಕಷ್ಟವಾಗುತ್ತಿದೆ. ಇದರ ಹೊರತಾಗಿಯೂ, ಮನೆಯಲ್ಲಿ ವಿಶ್ರಾಂತಿ ಪಡೆಯುವ ಬದಲು, ಕರೀನಾ ಜಾಹೀರಾತುಗಳನ್ನು ಚಿತ್ರೀಕರಿಸುತ್ತಿದ್ದಾರೆ. ಗುರುವಾರ ಶೂಟಿಂಗ್‌ಗಾಗಿ ಮುಂಬೈನ ಬಾಂದ್ರಾದಲ್ಲಿ ಕಾಣಸಿಕೊಂಡ ನಟಿ, ಪಿಂಕ್ ಬಣ್ಣದ ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಳು. ಕರೀನಾ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.