ಶಾರುಖ್‌ನಷ್ಟೇ ಸಂಭಾವನೆ ಪಡೆಯುತ್ತಾರಾ ಬಾಹುಬಲಿ ನಟ ಪ್ರಭಾಸ್‌?

First Published | Apr 2, 2021, 5:09 PM IST

ಪ್ರಭಾಸ್‌ ತೆಲಗು ಚಿತ್ರರಂಗದ ಸೂಪರ್‌ಸ್ಟಾರ್‌. ಬ್ಲಾಕ್‌ಬಸ್ಟರ್‌ ಸಿನಿಮಾ ಬಾಹುಬಲಿ ನಂತರ ಪ್ರಭಾಸ್‌ ಮಾರ್ಕೆಟ್‌ ವ್ಯಾಲ್ಯೂ ಸಿಕ್ಕಾಪಟ್ಟೆ ಏರಿದೆ. ಇತ್ತಿಚಿನ ವರದಿಗಳ ಪ್ರಕಾರ ಟಾಲಿವುಡ್‌ನ ಸ್ಟಾರ್‌ ಒಂದು ಸಿನಿಮಾದ ಸಂಭಾವನೆ ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್‌ ಫೀಸ್‌ಗೆ ಸಮ. ಹಾಗಾದರೆ ಸಿನಿಮಾವೊಂದಕ್ಕೆ ಪ್ರಭಾಸ್‌ರ ಗಳಿಕೆ ಎಷ್ಟು? 

ಟಾಲಿವುಡ್ ತಾರೆ ಪ್ರಭಾಸ್ ಒಂದು ಚಿತ್ರಕ್ಕೆ 100 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಎಂದು ವರದಿಗಳು ಹೇಳುತ್ತಿವೆ.
ಬಾಹುಬಲಿನಂತರ ಪ್ಯಾನ್-ಇಂಡಿಯಾ ಸ್ಟಾರ್‌ ಆಗಿರುವ ಪ್ರಭಾಸ್ ಅತಿ ಹೆಚ್ಚು ಗಳಿಸುವ ನಟರಲ್ಲಿ ಒಬ್ಬರಾಗಿದ್ದಾರೆ.
Tap to resize

ಅಭಿನಯ, ಸೌಂದರ್ಯ ಹಾಗೂ ಬದ್ಧತೆಯಿಂದ ಚಿತ್ರ ರಸಿಕರ ಮನ ಗೆದ್ದ ನಟ ಪ್ರಭಾಸ್.
ವರದಿಗಳ ಪ್ರಕಾರ, ಪ್ರಭಾಸ್ ಅವರು ಸಂಭಾವನೆ ರೂಪದಲ್ಲಿ 75-100 ಕೋಟಿ ರೂ.
ದಕ್ಷಿಣ ಭಾರತದಲ್ಲಿ ಹಲವಾರು ಆಸ್ತಿಗಳನ್ನು ಹೊಂದಿರುವ ಈ ನಟ ಈಗ ಮುಂಬೈನಲ್ಲಿ ಮನೆ ಖರೀದಿಸುತ್ತಾರಂತೆ.
ಟಾಲಿವುಡ್‌ ನಟ ಪ್ರಭಾಸ್‌ ಸ್ಟಾರ್ಡಮ್ ಕೇವಲ ದಕ್ಷಿಣಕ್ಕೆ ಮಾತ್ರ ಸೀಮಿತವಾಗಿಲ್ಲ, ಅವರು ಉತ್ತರದಲ್ಲೂ ಸಖತ್‌ ಫೇಮಸ್‌.
ಅವರ ಕೊನೆಯ ಪ್ಯಾನ್ ಇಂಡಿಯ ಫಿಲ್ಮ್‌ ಸಾಹೋಗೆ ಹಿಂದಿ ಮಾರುಕಟ್ಟೆಗಳಲ್ಲೂ ಉತ್ತಮ ರೆಸ್ಪಾನ್ಸ್‌ ದೊರೆತಿತ್ತು.
'ಅತಿ ದೊಡ್ಡ ಮೊತ್ತದ ಫೀಸ್‌ ಡಿಮ್ಯಾಂಡ್‌ ಮಾಡುವ ಸ್ಥಿತಿಯಲ್ಲಿರುವ ಏಕ ಮಾತ್ರ ಭಾರತೀಯ ನಟ ಪ್ರಭಾಸ್. 100 ಕೋಟಿ ಸಂಭಾವನೆ ಅವರಿಗೆ ನ್ಯಾಯುಯುತವಾಗಿದೆ. ಏಕೆಂದರೆ ಪ್ರತಿ ಚಿತ್ರದ ಮೂಲಕ ಅವರ ನಿರ್ಮಾಪಕರಿಗೆ ಪ್ರಭಾಸ್‌ ಹೆಚ್ಚು ಸಂಪಾದಿಸುತ್ತಿದ್ದಾರೆ. ಅವರು ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ,' ಎಂದು ಪಿಂಕ್‌ವಿಲ್ಲಾದಲ್ಲಿ ಪ್ರಕಟವಾದ ವರದಿ ಹೇಳಿದೆ.
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಲಾರ್ ಚಿತ್ರ ಮಾಡುತ್ತಿದ್ದಾರೆ ತೆಲುಗಿನ ಈ ನಟ.
ಶಾರುಖ್ ಖಾನ್ ಮೂರು ವರ್ಷಗಳ ನಂತರ ಮತ್ತೆ ಸಿನಿಮಾಕ್ಕೆ ಎಂಟ್ರಿ ಮಾಡುತ್ತಿದ್ದಾರೆ ಕೊಡಲಿದ್ದು, YRF ಸಿನಿಮಾಪಠಾಣ್‌ನಲ್ಲಿ ಕೆಲಸ ಮಾಡಲಿದ್ದಾರೆ ಮತ್ತು ಈ ಬಾರಿ ಖಾನ್ ತಮ್ಮ ಪಾತ್ರಕ್ಕಾಗಿ 100 ಕೋಟಿ ರೂ ಪಡೆಯಲ್ಲಿದ್ದಾರೆ ಎಂದು ಕೆಲವು ದಿನಗಳ ಹಿಂದೆ ವರದಿಯಾಗಿದೆ.
ಇತ್ತಿಚಿನ ವರದಿಗಳ ಪ್ರಕಾರ ಟಾಲಿವುಡ್‌ನ ಸ್ಟಾರ್‌ ಒಂದು ಸಿನಿಮಾದ ಸಂಭಾವನೆ ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್‌ ಫೀಸ್‌ಗೆ ಸಮ.
ಪ್ರಸ್ತುತ, ಪ್ರಭಾಸ್ ಅವರು ಮುಂಬರುವ ದೊಡ್ಡ ಪ್ರಾಜೆಕ್ಟ್‌ ಆದಿಪುರುಶ್, ಸಲಾರ್ ಮತ್ತು ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಜೊತೆ ಅನ್‌ಟೈಟಲ್ದ್‌ 21 ಸಿನಿಮಾಕ್ಕೆ ರೆಡಿಯಾಗಿದ್ದಾರೆ.
ಶೀಘ್ರದಲ್ಲೇ ಅವರು ಅನೇಕ ಭಾಷೆಗಳಲ್ಲಿ ಪ್ಯಾನ್ ಇಂಡಿಯನ್ ಸಿನಿಮಾ ರಾಧೆ ಶ್ಯಾಮ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೂಜಾ ಹೆಗ್ಡೆ ಅವರೊಂದಿಗೆ ನಟಿಸಿರುವ ಈ ಸಿನಿಮಾದ ಗ್ರ್ಯಾಂಡ್‌ ರಿಲೀಸ್‌ಗೆ ಫ್ಯಾನ್ಸ್‌ ಎದುರು ನೋಡುತ್ತಿದ್ದಾರೆ.

Latest Videos

click me!