6 ಸಾವಿರ ಮದುವೆ ಪ್ರಪೋಸಲ್‌ ರಿಜೆಕ್ಟ್‌ ಮಾಡಿದ್ದಾರಂತೆ ಬಾಹುಬಲಿ ನಟ!

Published : Oct 25, 2021, 03:02 PM IST

ಬಾಹುಬಲಿ (Baahubali) ಚಿತ್ರದ ಮೂಲಕ ಇಡೀ ಪ್ರಪಂಚದ ಗಮನ ಸೆಳೆದಿರುವ ತೆಲಗು (Telugu) ಸೂಪರ್‌ ಸ್ಟಾರ್‌ ಪ್ರಭಾಸ್ (Prabhas) 42 ವರ್ಷಗಳನ್ನು ಪೂರೈಸಿದ್ದಾರೆ. ಅಕ್ಟೋಬರ್ 23, 1979 ರಂದು ಚೆನ್ನೈನಲ್ಲಿ ಜನಿಸಿದ ಪ್ರಭಾಸ್ ಅವರ ಪೂರ್ಣ ಹೆಸರು ಪ್ರಭಾಸ್ ರಾಜು ಉಪ್ಪಲಪತಿ. 'ಬಾಹುಬಲಿ' ಸಿನಿಮಾಕ್ಕಾಗಿ ಪ್ರಭಾಸ್‌ ತುಂಬಾ ಶ್ರಮಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಪ್ರಭಾಸ್ ತನ್ನ ಸಹನಟ ಅನುಷ್ಕಾ ಶೆಟ್ಟಿ (Anushka Shetty) ಸಹ ಶೂಟಿಂಗ್ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕೆಂದು ಬಯಸಿದ್ದರು. ನಟ ಈ ಸಿನಿಮಾಗಾಗಿ ತನ್ನ ಮದುವೆಯನ್ನು ಮುಂದೂಡಿದ್ದಲ್ಲದೆ ಅನುಷ್ಕಾರೂ ಮದುವೆಯಾಗದಂತೆ ತಡೆದರು. ಸೌತ್‌ನ ಈ ಸೂಪರ್ ಸ್ಟಾರ್ ಸುಮಾರು 6000 ಮದುವೆ ಪ್ರಪೋಸಲ್‌ಗಳನ್ನು ರಿಜೆಕ್ಟ್‌ ಮಾಡಿದ್ದಾರಂತೆ. ಇಲ್ಲಿದೆ ಪೂರ್ತಿ ವಿವರ.

PREV
110
6 ಸಾವಿರ ಮದುವೆ ಪ್ರಪೋಸಲ್‌ ರಿಜೆಕ್ಟ್‌ ಮಾಡಿದ್ದಾರಂತೆ ಬಾಹುಬಲಿ ನಟ!

ಮೇ 2017 ರಲ್ಲಿ ವೆಬ್ ಪೋರ್ಟಲ್ ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಅನುಷ್ಕಾ ಮದುವೆ 2015 ರಲ್ಲಿ ನಿಶ್ಚಯವಾಗಿತ್ತು. ಆದರೆ ಪ್ರಭಾಸ್ ಅವರ ಒತ್ತಾಯದ ಮೇರೆಗೆ ನಟಿ ಈ ಮದುವೆಯನ್ನು ನಿಲ್ಲಿಸಬೇಕಾಯಿತು.ವಾಸ್ತವವಾಗಿ, ಅನುಷ್ಕಾ ಅವರು 'ಬಾಹುಬಲಿ' ಚಿತ್ರೀಕರಣದ ಮೇಲೆ ಮಾತ್ರ ಗಮನ ಹರಿಸಬೇಕೆಂದು ಪ್ರಭಾಸ್ ಬಯಸಿದ್ದರು. 

210

ಪ್ರಭಾಸ್ ಸಹ 'ಸಾಹೋ' ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ ಹೆಸರನ್ನು ಶಿಫಾರಸು ಮಾಡಿದ್ದರು. ಆದರೆ ಅನುಷ್ಕಾರ ಅಧಿಕ ತೂಕದ ಕಾರಣ,ತಯಾರಕರು ನಂತರ ಅನುಷ್ಕಾ ಬದಲಿಗೆ ಶ್ರದ್ಧಾ ಕಪೂರ್ ಅವರನ್ನು ಆಯ್ಕೆ ಮಾಡಿದರು.

 

310

ಸಿನಿಮಾದ ಶೂಟಿಂಗ್​ ವೇಳೆ ಪ್ರಭಾಸ್​ಗೆ ಮದುವೆಗಾಗಿ ಸುಮಾರು 6 ಸಾವಿರ ಹುಡುಗಿಯರ ಪ್ರಪೋಸಲ್‌ಗಳು ಬಂದಿತ್ತು. ಆದರೆ, ಬಾಹುಬಲಿ  ಚಿತ್ರದತ್ತ ಗಮನಹರಿಸಲು ಪ್ರಭಾಸ್ ಈ ಎಲ್ಲಾ ಸಂಬಂಧಗಳನ್ನು ತಿರಸ್ಕರಿಸಿದರು .

410

ಪ್ರಭಾಸ್ ಮತ್ತು ಅನುಷ್ಕಾ ಸುಮಾರು 12 ವರ್ಷಗಳ ಹಿಂದೆ 2009 ರ ತೆಲುಗು ಚಿತ್ರ 'ಬಿಲ್ಲಾ'ದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದಾದ ನಂತರ 2013ರಲ್ಲಿ ತೆರೆಕಂಡ ‘ಮಿರ್ಚಿ’ ಚಿತ್ರದಲ್ಲಿ ಇಬ್ಬರೂ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದರು.

510
Prabhas

ಆರಂಭಿಕ ಶಿಕ್ಷಣವನ್ನು ಭೀಮಾವರಂನ ಡಿಎನ್ಆರ್ ಶಾಲೆಯಲ್ಲಿ ಮುಗಿಸಿದ ಪ್ರಭಾಸ್‌ ಬಳಿಕ ಹೈದರಾಬಾದ್‌ನ ಶ್ರೀ ಚೈತನ್ಯ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪಡೆದರು. ಪ್ರಭಾಸ್ ಅವರ ತಂದೆ ನಿರ್ಮಾಪಕ ಸೂರ್ಯನಾರಾಯಣರಾಜು.

610

ಸೂರ್ಯನಾರಾಯಣ ರಾಜು ಅವರು ತೆಲುಗು ಚಲನಚಿತ್ರಗಳ ಪ್ರಸಿದ್ಧ ನಿರ್ಮಾಪಕರಾಗಿದ್ದಾರೆ. ಅವರು ಕೃಷ್ಣವೇಣಿ, ಅಮರ್ ದೀಪಮ್, ಮಧುರ ಸ್ವಪ್ನಂ, ತ್ರಿಶೂಲಂ, ಧರ್ಮ ಅಧಿಕಾರಿ ಮತ್ತು ಬಿಲ್ಲಾ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ ಮತ್ತು ಪ್ರಭಾಸ್ ತಾಯಿ ಶಿವಕುಮಾರಿ ಗೃಹಿಣಿ.

710

ಪ್ರಭಾಸ್ ಅವರ ಅಣ್ಣನ ಹೆಸರು ಪ್ರಬೋಧ್ ಮತ್ತು ಅವರು ಸಾಫ್ಟ್‌ವೇರ್ ಇಂಜಿನಿಯರ್. ಪ್ರಸ್ತುತ ಗೋವಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಭಾಸ್ ಒಮ್ಮೆ ತಮ್ಮ ಅಣ್ಣನಿಗೆ ಸಿನಿಮಾದಲ್ಲಿ ಕೆಲಸ ಮಾಡುವಂತೆ ಕೇಳಿದರು. ಆದರೆ ಅವರು ನಿರಾಕರಿಸಿದರು. 4 ವರ್ಷಗಳ ಹಿಂದೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಪ್ರಬೋಧ್ ಶಿಕ್ಷೆಗೊಳಗಾಗಿದ್ದರು.
 

810

'ಬಾಹುಬಲಿ' ಯಶಸ್ಸಿನ ನಂತರ, ಪ್ರಭಾಸ್ ಅನೇಕ ಶೂ ಬ್ರ್ಯಾಂಡ್‌ಗಳು ಮತ್ತು ಡಿಯೋ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡರು. ಪ್ರಭಾಸ್‌ ಅವರ ಬ್ರಾಂಡ್ ಎಂಡಾರ್ಸ್‌ಮೆಂಟ್ ಶುಲ್ಕ 2 ಕೋಟಿ ರೂ ಎಂದು ಹೇಳಲಾಗುತ್ತದೆ. ಮಹೀಂದ್ರಾ ಅಂಡ್‌  ಮಹೀಂದ್ರಾ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿರುವ‌  ಪ್ರಭಾಸ  ಮಹೀಂದ್ರಾ TUV 300ನ ಜಾಹೀರಾತಿನಲ್ಲಿ ಕೆಲಸ ಮಾಡಿದ್ದಾರೆ.
 

910

ಪ್ರಭಾಸ್ ಲಕ್ಷುರಿಯಸ್‌ ಲೈಫ್‌ಸ್ಟೈಲ್‌ ಹಾಗೂ ಕಾರುಗಳನ್ನು ಇಷ್ಟಪಡುತ್ತಾರೆ. ಅವರ ಸಂಗ್ರಹದಲ್ಲಿ ಐಷಾರಾಮಿ ಕಾರುಗಳಾದ ರೋಲ್ಸ್ ರಾಯ್ಸ್ ಫ್ಯಾಂಟಮ್ (ರೂ. 8 ಕೋಟಿ), ರೇಂಜ್ ರೋವರ್ (ರೂ. 3.89 ಕೋಟಿ), ಜಾಗ್ವಾರ್ ಎಕ್ಸ್‌ಜೆ (ರೂ. 2 ಕೋಟಿ), ಬಿಎಂಡಬ್ಲ್ಯು ಎಕ್ಸ್ 3 (ರೂ. 48 ಲಕ್ಷ), ಸ್ಕೋಡಾ ಸೂಪರ್ಬ್ (ರೂ. 30 ಲಕ್ಷ) ಸೇರಿವೆ.

1010

2002 ರಲ್ಲಿ 'ಈಶ್ವರ್' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಈ ನಟ .ಬಾಹುಬಲಿ' ಚಿತ್ರದ ಮೂಲಕ ಹಿಂದಿ ಪ್ರೇಕ್ಷಕರಿಗೂ ಫೇವರೇಟ್‌ ಆಗಿದ್ದಾರೆ. ಇವರು  ಛತ್ರಪತಿ (2005), ಬಿಲ್ಲಾ (2009), ಏಕ್ ನಿರಂಜನ್ (2009), ಡಾರ್ಲಿಂಗ್ (2010), ರೆಬೆಲ್ (2012) ಮತ್ತು ಮಿರ್ಚಿ (2013), ಸಾಹೋ (2019) ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಬಾಲಿವುಡ್ ಚಿತ್ರ 'ಆಕ್ಷನ್ ಜಾಕ್ಸನ್'ನಲ್ಲಿ ಪ್ರಭಾಸ್ ಅತಿಥಿ ಪಾತ್ರವನ್ನೂ ಸಹ ಮಾಡಿದ್ದಾರೆ.

click me!

Recommended Stories