ಶ್ರೀಲಂಕಾದಲ್ಲಿ ವೈಲ್ಡ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಮಂಗಳೂರು ಹುಡುಗಿ ಪೂಜಾ ಹೆಗ್ಡೆ

First Published | Oct 16, 2024, 8:30 PM IST

ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ನಡುವೆ ಬ್ರೇಕ್ ತೆಗೆದುಕೊಂಡು ತಮ್ಮ ಹುಟ್ಟುಹಬ್ಬವನ್ನ ಶ್ರೀಲಂಕಾದಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. 
 

ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲಿ ಮಿಂಚುತ್ತಿರುವ ಕುಡ್ಲದ ಬೆಡಗಿ ಪೂಜಾ ಹೆಗ್ಡೆ (Pooja Hegde) ಸದ್ಯಕ್ಕಂತೂ ಬ್ಯುಸಿ ನಟಿ. ಒಂದು ಹಿಂದಿ ಸಿನಿಮಾ ಮತ್ತು ಎರಡು ತಮಿಳು ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಇದ ನಡುವೆ ಬ್ರೇಕ್ ತೆಗೆದುಕೊಂಡು ನಟಿ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರೆ. 
 

ಹೌದು ಇತ್ತೀಚೆಗಷ್ಟೇ ಅಂದ್ರೆ ಅಕ್ಟೋಬರ್ 13ರಂದು ತಮ್ಮ 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ನೀಳ ಸುಂದರಿ ಪೂಜಾ, ತಮ್ಮ ಬರ್ತ್ ಡೇಯನ್ನು ವೈಲ್ಡ್ ಆಗಿ ಎಂಜಾಯ್ ಮಾಡೋದಕ್ಕೆ ಶ್ರೀಲಂಕಾದ (Srilanka)ಕಾಡಿಗೆ ತೆರಳಿದ್ದಾರೆ. ಅಲ್ಲಿನ ಸುಂದರವಾದ ತಾಣದಲ್ಲಿ ಎಂಜಾಯ್ ಮಾಡುತ್ತಾ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ನಟಿ. 
 

Tap to resize

ಸುತ್ತೆಲ್ಲಾ ಹಸಿರು ತುಂಬಿರುವ ಕಾಡಿನಂತಿರುವ ಕಾಟೇಜ್ ನಲ್ಲಿ ಪೂಜಾ ಉಳಿದುಕೊಂಡಿದ್ದು, ಅಲ್ಲಿನ ಪೂಲ್ ಬಳಿ ಕೆಂಪು ಮತ್ತು ಬಿಳಿ ಬಣ್ಣದ ಕಾಂಬಿನೇಶನ್ ಇರುವ ಟಾಪ್ ಮತ್ತು ಶಾರ್ಟ್ಸ್ ಧರಿಸಿ, ಬಿಂದಾಸ್ ಆಗಿ ಪೋಸ್ ನೀಡಿರುವ ಫೋಟೊಗಳನ್ನು ಹಾಗೂ ಖುಷಿ ಖುಷಿಯಲ್ಲಿ ಕೇಕ್ ಕತ್ತರಿಸೋ ವಿಡಿಯೋವನ್ನು ಸಹ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಮುಗಮೂಡಿ ಎನ್ನುವ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪೂಜಾ ಹೆಗ್ಡೆ ನಂತರ ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾದರು. ಆದರೆ ತೆಲುಗಿನಲ್ಲಿ ಒಂದೆರಡು ಹಿಟ್ ಚಿತ್ರಗಳು ಹಾಗೂ ಹಿಂದಿಯಲ್ಲೂ ಒಂದೆರಡು ಹಿಟ್ ಚಿತ್ರಗಳನ್ನ ನೀಡಿದ ಪೂಜಾ, ನಂತರ ನಟಿಸಿದ ಎಲ್ಲಾ ಸಿನಿಮಾಗಳು ಸಾಲು ಸಾಲಾಗಿ ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಆಗಿತ್ತು. ಹಾಗಾಗಿ 2022ರ ನಂತರ ನಟಿಯ ಸಿನಿಮಾಗಳೇ ಇಲ್ಲವಾಗಿತ್ತು. 
 

ಪೂಜಾ ಹೆಗ್ಡೆ ಸಿನಿಮಾದಲ್ಲಿದ್ದರೆ ಸಿನಿಮಾ ಫ್ಲಾಪ್ ಆಗುತ್ತೆ(flop heroine) ಎನ್ನುವ ಮಾತುಗಳು ಕೇಳಿ ಬಂತು, ಆಕೆಯನ್ನು ಐರನ್ ಲೆಗ್ ಅಂತಾನೂ ಕರೆದ್ರು ಜನ. ಹಾಗಾಗಿ ತೆಲುಗು ಚಿತ್ರರಂಗದಲ್ಲಿ ಅವಕಾಶಗಳು ಸಿಗೋದು ಕಡಿಮೆಯಾಯ್ತು. ಆದರೆ ನಟಿಗೆ ತಮಿಳು ಚಿತ್ರರಂಗ ಬಾಗಿಲು ತೆರೆದಿದೆ. ಸದ್ಯ ಒಂದು ಹಿಂದಿ ಸಿನಿಮಾ ದೇವಾ ದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾಹಿದ್ ಕಪೂರ್ ಗೆ ಜೋಡಿಯಾಗಿ ಪೂಜಾ ನಟಿಸುತ್ತಿದ್ದಾರೆ. 
 

ಇನ್ನು ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳಿಗೆ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೂರ್ಯ (Suriya) ಅಭಿನಯದ ಸೂರ್ಯ 44 ಸಿನಿಮಾಗೆ ಹಾಗೂ ದಳಪತಿ ವಿಜಯ್ (Vijay) ಅಭಿನಯದ 69ನೇ ಸಿನಿಮಾಗೂ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಈ ಮೂರು ಸಿನಿಮಾಗಳು ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಾಲು ಸಾಲು ಸೋಲುಗಳಿಂದ ಬೇಸತ್ತಿದ್ದ ನಟಿಗೆ, ಈ ಮೂರು ಸಿನಿಮಾಗಳಿಂದ ಮತ್ತೆ ಯಶಸ್ಸು ಸಿಗುತ್ತಾ ಕಾದು ನೋಡಬೇಕು. 
 

Latest Videos

click me!