ಇದರ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಇಂಥದ್ದನ್ನೆಲ್ಲಾ ನೋಡಿದ್ದೇವೆ, ಇವೆಲ್ಲ ಟಿಆರ್‌ಪಿ ರೇಟಿಂಗ್‌ಗಾಗಿ ಮಾಡುವ ಸ್ಟಂಟ್ಸ್ ಎಂದು ಹೇಳುತ್ತಿದ್ದಾರೆ. ಕೊನೆಯಲ್ಲಿ ಏನೂ ಇಲ್ಲ, ಬೇರೆ ಯಾರದ್ದೋ ಹೆಸರು ಬರೆಯುತ್ತಾರೆ, ಇಂಥದ್ದನ್ನು ನಂಬಬೇಡಿ ಎನ್ನುತ್ತಿದ್ದಾರೆ. ಟಿಆರ್‌ಪಿಗಾಗಿ ಸುಧೀರ್‌ರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನಾದರೂ ಈ ರೇಟಿಂಗ್ ಸ್ಟಂಟ್ಸ್ ನಿಲ್ಲಿಸಿ ಎಂದು ರಶ್ಮಿಗೆ ಛೀಮಾರಿ ಹಾಕುತ್ತಿದ್ದಾರೆ. ಇಂಥದ್ದನ್ನು ಸಹಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ರಶ್ಮಿ, ಸುಧೀರ್ ಜೋಡಿಯ ಬಗ್ಗೆ ಮಾಡುವ ಸ್ಕಿಟ್‌ಗಳಿಂದ ನೆಟ್ಟಿಗರು ಬೇಸತ್ತಿದ್ದಾರೆ. ಅದಕ್ಕೇ ಖಾರವಾಗಿಯೇ ಛೀಮಾರಿ ಹಾಕುತ್ತಿದ್ದಾರೆ.