ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ನಿಶ್ಚಿತಾರ್ಥ: ಯಾರಿರುತ್ತಾರೆ, ಹೇಗಿರುತ್ತೆ ಡ್ರೆಸ್?
First Published | May 11, 2023, 4:58 PM ISTಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಮತ್ತು ಎಎಪಿ ಸಂಸದ ರಾಘವ್ ಚಡ್ಡಾ (Raghav Chadha) ಸಂಬಂಧದಲ್ಲಿದ್ದಾರೆ ಮತ್ತು ಇಬ್ಬರ ನಿಶ್ಚಿತಾರ್ಥವು ಮೇ 13 ರಂದು ದೆಹಲಿಯಲ್ಲಿ ನಡೆಯಲಿದೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ದಂಪತಿ ದೆಹಲಿಗೆ ಬಂದಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ , ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಕೆಲವು ವಿವರಗಳು ಮುನ್ನೆಲೆಗೆ ಬಂದಿವೆ. ಅದೇ ಸಮಯದಲ್ಲಿ, ನಿಶ್ಚಿತಾರ್ಥ ಸಮಾರಂಭದಲ್ಲಿ ಇಬ್ಬರೂ ಏನು ಧರಿಸುತ್ತಾರೆ ಎಂಬುದೂ ಬಹಿರಂಗವಾಗಿದೆ. ಇಲ್ಲಿದೆ ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ನಿಶ್ಚಿತಾರ್ಥ ಸಮಾರಂಭದ ವಿವರ