ಧಮ್ ಮಾರೋ ಧಮ್ ಎಂದ ನಟಿ ಜೀನತ್ ಅಮನ್ ಪ್ರೀತಿಯಲ್ಲಿ ಬಿದ್ದಿದ್ರು ನಟ ದೇವ್ ಆನಂದ್…ಕೊನೆಗೆ ಆಗಿದ್ದು ಹಾರ್ಟ್ ಬ್ರೇಕ್!

First Published | Sep 27, 2024, 5:18 PM IST

ಹರೇ ರಾಮ ಹರೇ ಕೃಷ್ಣ ಚಿತ್ರದಲ್ಲಿ ನಟಿಸಿದ್ದ ದೇವಾನಂದ್ ಸಹನಟಿ ಜೀನತ್ ಅಮನ್ ಅವರನ್ನು ಲವ್ ಮಾಡ್ತಿದ್ರಂತೆ, ಆಕೆಗೆ ಪ್ರಪೋಸ್ ಮಾಡಲು ಎಲ್ಲಾ ಸಿದ್ಧತೆಯೂ ಮಾಡ್ಕೊಂಡಿದ್ರು, ಆದ್ರೆ ಕೊನೆಗೆ ಹಾರ್ಟ್ ಬ್ರೇಕ್ ಆಗೋಯ್ತು. 
 

ದೇವಾನಂದ್ (Dev Anand) ಬಾಲಿವುಡ್ ಸೂಪರ್ ಸ್ಟಾರ್ ನಟ. ನಟನ ಅದ್ಭುತ ಅಭಿನಯ ಸ್ಟೈಲ್ ಗೆ ಪ್ರೇಕ್ಷಕರು ಫಿದಾ ಆಗಿದ್ರಂತೆ. ಹುಡುಗಿಯರಿಗೆ ದೇವ್ ಆನಂದ್ ಅವರ ಮೇಲೆ ಎಷ್ಟೊಂದು ಕ್ರಶ್ ಆಗಿತ್ತು ಅಂದ್ರೆ, ದೇವ್ ಆನಂದ್ ಬ್ಲ್ಯಾಕ್ ಕೋಟ್ ಧರಿಸಿ ನಿಂತ್ರೆ ಅವರನ್ನ ನೋಡೋದಕ್ಕೆ ಹೆಣ್ಮಕ್ಕಳು ಛಾವಣಿ ಮೇಲಿಂದ ಜಿಗಿದು ಬರುತ್ತಿದ್ದರಂತೆ. ಅಷ್ಟೊಂದು ಕ್ರೇಜ್ ಇತ್ತು ಅಭಿಮಾನಿಗಳಿಗೆ. ಈ ಕಾರಣದಿಂದಾಗಿ ನಟನನ್ನು ಕಪ್ಪು ಬಟ್ಟೆಗಳನ್ನು ಧರಿಸದಂತೆ ನಿಷೇಧಿಸಲಾಯಿತು. ದೇವ್ ಆನಂದ್ ಕಪ್ಪು ಬಣ್ಣದ ಬಟ್ಟೆ ಧರಿಸೋದನ್ನೇ ನಿಷೇಧಿಸಿದ್ರಂತೆ. 
 

ಒಂದೆಡೆ ಹೆಣ್ಣುಮಕ್ಕಳೆಲ್ಲಾ ದೇವ್ ಆನಂದ್ ಮೇಲೆ ಹುಚ್ಚರಂತೆ ಪ್ರೀತಿ ತೋರಿಸುತ್ತಿದ್ರೆ, ಅದೇ ಸಮಯದಲ್ಲಿ, ದೇವಾನಂದ್ ಬೇರೊಬ್ಬರತ್ತ ಆಕರ್ಷಿತರಾಗಿದ್ದರು. ಅವರು ಬೇರಾರು ಅಲ್ಲ, ಜೀನತ್ ಅಮನ್ (Zeenat Aman), ಜೀನತ್ ಅಂದ್ರೆ ದೇವಾನಂದ್ ಗೆ ಹುಚ್ಚು ಪ್ರೀತಿ ಇತ್ತಂತೆ.  ಅವರು ನಟಿಗೆ ಪ್ರಪೋಸ್ ಮಾಡಲು ಸಹ ಸಿದ್ಧರಾಗಿದ್ದರು, ಆದರೆ ನಂತರ ರಾಜ್ ಕಪೂರ್ ಕಾರಣದಿಂದಾಗಿ ದೇವಾನಂದ್ ಹೃದಯವೇ ಒಡೆದು ಹೋಗಿತ್ತಂತೆ. 

Tap to resize

ದೇವಾನಂದ್ ಮತ್ತು ಜೀನತ್ ಅಮನ್ 'ಹರೇ ರಾಮ ಹರೇ ಕೃಷ್ಣ' (Hare Rama Hare Krishna), 'ಹೀರಾ ಪನಾ' ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ದೇವಾನಂದ್ ಅವರ 'ಹರೇ ರಾಮ ಹರೇ ಕೃಷ್ಣ' ಚಿತ್ರದಲ್ಲಿ ನಟಿಸಿದ ಬಳಿಕ ಜೀನತ್ ರಾತ್ರೋರಾತ್ರಿ ಸ್ಟಾರ್ ಆದರು. ಈ ಚಿತ್ರದಲ್ಲಿ ಜೀನತ್ ದೇವ್ ಆನಂದ್ ಅವರ ಸಹೋದರಿಯಾಗಿ ನಟಿಸಿದ್ದರು. ಆದರೆ, ನಟ-ನಿರ್ದೇಶಕರಾಗಿದ್ದ ದೇವ್ ಆನಂದ್ ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಜೀನತ್ ಅವರನ್ನ ಲವ್ ಮಾಡ್ತಿದ್ರಂತೆ. ಇದನ್ನ ದೇವ್ ಆನಂದ್ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. 
 

ತಮ್ಮ ಲವ್ ಬಗ್ಗೆ  ದೇವಾನಂದ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದು ಏನೆಂದರೆ, "ಇದ್ದಕ್ಕಿದ್ದಂತೆ, ಒಂದು ದಿನ ನನಗೆ ನಾನುಜೀನತ್ ನನ್ನು ತುಂಬಾನೇ ಪ್ರೀತಿಸುತ್ತೇನೆ ಎಂದು ಅನಿಸಿತು. ನನ್ನ ಪ್ರೀತಿಯನ್ನು ಆಕೆಯ ಮುಂದೆ ಹೇಳಲು ತಯಾರಿ ಮಾಡಿದ್ದೆ. ಪ್ರಪೋಸ್ ಮಾಡಲು, ರೊಮ್ಯಾಂಟಿ ತಾಣಕ್ಕಾಗಿ ಹುಡುಕಿ ಕೊನೆಗೆ ನಗರದ ಉನ್ನತ ಹೊಟೇಲ್ ತಾಜ್ ಆಯ್ಕೆ ಮಾಡಿದ್ರಂತೆ. ಅಲ್ಲಿ ಇಬ್ಬರು ಈ ಹಿಂದೆ ಜೊತೆಯಾಗಿ ಡಿನ್ನರ್ ಮಾಡಿದ್ದರಂತೆ. 

ದೇವ್ ಆನಂದ್ ತಮ್ಮ ಆತ್ಮಚರಿತ್ರೆ 'ರೊಮ್ಯಾನ್ಸಿಂಗ್ ವಿತ್ ಲೈಫ್' (Romancing with Life) ನಲ್ಲಿ ಈ ಕುರಿತು ಬರೆದಿದ್ದು, ದೇವ್ ಜೀನತ್ ಗೆ ಕರೆ ಮಾಡಿ, ಡಿನ್ನರ್ ಬಗ್ಗೆ ತಿಳಿಸಿದ್ರು, ಜೀನತ್ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿ ಒಟ್ಟಿಗೆ ಪಾರ್ಟಿಯಲ್ಲಿ ಭಾಗವಹಿಸಿದ ನಂತರ ತಾಜ್ ಗೆ ಹೋಗಲು ನಿರ್ಧರಿಸಿದರು. ಆದರೆ ಈ ಪಾರ್ಟಿಯಲ್ಲಿ ರಾಜ್ ಕಪೂರ್ ಕೂಡ ಭಾಗವಹಿಸಿದ್ದರು ಮತ್ತು ಅವರು ಜೀನತ್ ಅವರ ಕುತ್ತಿಗೆಯ ಸುತ್ತ ಕೈಗಳನ್ನು ಹಾಕಿ ತುಂಬಾನೆ ಕ್ಲೋಸ್ ಆಗಿ ಮೂವ್ ಮಾಡುತ್ತಿದ್ದರಂತೆ. 
 

ಜೀನತ್ ಮತ್ತು ರಾಜ್ ಕಪೂರ್ (Raj Kapoor) ನಡುವೆ ಏನೋ ಇತ್ತು, ಅದು ರಾಜ್ ಕಪೂರ್ ಗೆ ತುಂಬಾನೆ ಕೋಪ ಬರುವಂತೆ ಮಾಡಿತ್ತಂತೆ. ಅಷ್ಟೇ ಅಲ್ಲ ಕುಡಿದ ಅಮಲಿನಲ್ಲಿ, ಕಪೂರ್ 'ಸತ್ಯಂ ಶಿವಂ ಸುಂದರಂ' ನಟಿಗೆ, 'ನೀವು ಯಾವಾಗಲೂ ಬಿಳಿ ಸೀರೆಯಲ್ಲಿ ನನ್ನೆದುರು ಕಾಣಿಸಿಕೊಳ್ತೀರಿ ಅಂತ, ನನಗೆ ಪ್ರಾಮಿಸ್ ಮಾಡಿದ್ದನ್ನು ಮುರಿದು ಬಿಟ್ರಲ್ಲ ಎಂದು ಕೇಳಿದ್ರಂತೆ, ಇದನ್ನೆಲ್ಲಾ ಕೇಳಿ ದೇವ್ ಆನಂದ್ ಹೃದಯ ಚೂರಾಗಿ ಹೋಗಿತ್ತಂತೆ. 
 

ನಂತರ ತನ್ನ ಹಾರ್ಟ್ ಬ್ರೇಕ್(heart break) ಆದ ವಿಷ್ಯವನ್ನು ಜೀನತ್ ಮುಂದೆ ಹೇಳಿದ್ರಂತೆ ದೇವ್ ಆನಂದ್,  ಆವಾಗ ಜೀನತ್ ನಾಚಿಗೆಯಿಂದ ತಲೆ ತಗ್ಗಿಸಿದ್ರಂತೆ, ಜೀನತ್ ಈಗ ನನಗೆ ಮೊದಲಿನಂತೆ ಇಲ್ಲ, ನನ್ನ ಹೃದಯವು ತುಂಡುಗಳಾಗಿ ಒಡೆದುಹೋಯಿತು ... ನನ್ನ ಮನಸ್ಸಿನಲ್ಲಿ, ಈ ಭೇಟಿಗೆ ಯಾವುದೇ ಅರ್ಥವಿಲ್ಲ. ನಾನು ಅಲ್ಲಿಂದ ಸದ್ದಿಲ್ಲದೆ ಹೊರಟೆ ಎಂದು ದೇವ್ ಆನಂದ್ ಪುಸ್ತಕದಲ್ಲಿ ಬರೆದಿದ್ದಾರೆ. 
 

Latest Videos

click me!