1990 ರಲ್ಲಿ ರೆಡಿಫ್ AMAನಲ್ಲಿ, ಅಭಿಮಾನಿಯೊಬ್ಬ ನಮ್ರತಾರನ್ನ ದೀಪಕ್‌ರನ್ನ ಮದುವೆಯಾಗ್ತೀರಾ ಅಂತ ಕೇಳಿದ್ರು. ಆ ಪ್ರಶ್ನೆಗೆ ಉತ್ತರಿಸಿದ ಅವರು ಖಂಡಿತವಾಗಳು ಶೀಘ್ರದಲ್ಲೇ ದೀಪಕ್‌ರನ್ನ ಮದುವೆಯಾಗ್ತೀನಿ ಅಂದ್ರಂತೆ. ಅಲ್ಲದೇ ನಾವು ಸರಿಯಾದ ಸಮಯಕ್ಕಾಗಿ ಕಾಯ್ತಿದ್ದೀವಿ ಅಂತ ಹೇಳಿದ್ರು. ಆದ್ರೆ, ಇದಾದ ನಂತರ ಈ ಜೋಡಿ ಬೇರ್ಪಟ್ಟಿತು. ಕೆಲವು ವರ್ಷಗಳ ನಂತರ ದೀಪಕ್ ಸಾವನ್ನಪ್ಪಿದರು. ಹೌದು! ಗೋವಾದಲ್ಲಿ ಒಂದು ಪುಟ್ಟ ಮಗುವನ್ನು ರಕ್ಷಿಸಲು ಹೋಗಿ ದೀಪಕ್ ಪ್ರಾಣ ಕಳೆದುಕೊಂಡರು ಅನ್ನೋದು ತಿಳಿದುಬಂದಿದೆ. ಅದೇ ವರ್ಷ ನಮ್ರತಾ ತಾಯಿ ಕುಂದಾ ಕೂಡ ಕ್ಯಾನ್ಸರ್‌ನಿಂದ ಸಾವನ್ನಪ್ಪಿದರು. ನಂತರ ಹೀರೋಯಿನ್ ಆಗಿ ಮುಂದುವರೆದ ನಮ್ರತಾ.. ಮಹೇಶ್ ಬಾಬಬು ಜೊತೆ ಪ್ರೀತಿಗೆ ಬಿದ್ದರು.