ಸಾಹೋ ಚಿತ್ರದ ಪ್ರಚಾರದ ವೇಳೆ ಈ ಪ್ರಶ್ನೆ ಪ್ರಭಾಸ್ ಅವರನ್ನು ಬಹಳವಾಗಿ ಕಾಡಿತ್ತು. ಅವರು ಎಲ್ಲಿಗೆ ಹೋದರೂ ಮಾಧ್ಯಮದವರು, "ನೀವು ಅನುಷ್ಕಾ ಅವರನ್ನು ಮದುವೆಯಾಗುತ್ತಿರುವುದು ನಿಜವೇ?" ಎಂದು ಕೇಳುತ್ತಿದ್ದರು. ಪ್ರಭಾಸ್ ಅವರು ತಾವು ಮತ್ತು ಅನುಷ್ಕಾ ಒಳ್ಳೆಯ ಸ್ನೇಹಿತರು ಮಾತ್ರ ಎಂದು ಸ್ಪಷ್ಟಪಡಿಸಿದರು ಮತ್ತು ಅವರಿಬ್ಬರ ನಡುವೆ ಬೇರೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಅದೇ ರೀತಿ, ಕೆ. ರಾಘವೇಂದ್ರ ರಾವ್ ಅವರ ಪುತ್ರ ಪ್ರಕಾಶ್ ಅವರೊಂದಿಗೆ ಅನುಷ್ಕಾ ಮದುವೆಯಾಗುತ್ತಿದ್ದಾರೆ ಎಂಬ ವಾದವೂ ಮುನ್ನೆಲೆಗೆ ಬಂದಿತ್ತು. ಪ್ರೀತಿಸಿ ಮದುವೆಯಾಗಿದ್ದ ಪ್ರಕಾಶ್ ನಂತರ ವಿಚ್ಛೇದನ ಪಡೆದಿದ್ದರು. ಅನುಷ್ಕಾ ಅವರೊಂದಿಗೆ ಮದುವೆಯಾಗಿದ್ದಾರೆ ಎಂಬ ವರದಿಗಳಿದ್ದವು. ಈ ಸುದ್ದಿ ಸುಳ್ಳೆಂದು ಬಳಿಕ ತಿಳಿತು. ನಟ ರಕ್ಷಿತ್ ಶೆಟ್ಟಿ ಜೊತೆಗೂ ಮದುವೆ ಸುದ್ದಿ ಹಬ್ಬಿ ಆಮೇಲೆ ತಣ್ಣಗಾಯ್ತು. ಇತ್ತೀಚೆಗೆ ಮತ್ತೆ ಅನುಷ್ಕಾ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.