OTT: ನವರಾತ್ರಿಯಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಟಾಪ್ 10 ಸಿನಿಮಾ, ವೆಬ್ ಸೀರೀಸ್‌

First Published | Oct 8, 2024, 3:21 PM IST

ಅಕ್ಟೋಬರ್ ಮೊದಲ ವಾರದಲ್ಲಿ ನವರಾತ್ರಿ ಆರಂಭವಾಗಿದ್ದು, ಶಾಲೆಗಳಿಗೆ ರಜೆ ಸಿಕ್ಕಿದೆ. ಅಷ್ಟೇ ಅಲ್ಲ ಹಬ್ಬದ ಸಾಲು ಸಾಲು ರಜೆಗಳು ಸಿಗುತ್ತಿದ್ದು, ಜನರು ರಿಫ್ರೆಶ್ ಆಗಲು ಒಟಿಟಿ ಮೊರೆ ಹೋಗುತ್ತಿದ್ದಾರೆ. ಡಿಸ್ನಿ ಪ್ಲಸ್, ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಮುಂತಾದ ಓಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾದ ಟಾಪ್ 10 ಚಲನಚಿತ್ರಗಳು ಮತ್ತು ವೆಬ್ ಸರಣಿ ಮಾಹಿತಿ ಇಲ್ಲಿದೆ. 

OTTಯಲ್ಲಿ ಹೆಚ್ಚು ವೀಕ್ಷಿಸಿದ ಸಿನಿಮಾಗಳು

ಕಳೆದ 4 ವರ್ಷಗಳಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ ಅಭೂತಪೂರ್ವ ಪ್ರಗತಿ ಕಂಡಿದೆ. ಇದರಿಂದಲೇ ಪ್ರತಿ ವಾರ ಓಟಿಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ. ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 6 ರವರೆಗೆ ಓಟಿಟಿಯಲ್ಲಿ ಹೆಚ್ಚು ವೀಕ್ಷಿಸಲಾದ ವೆಬ್ ಸರಣಿ ಮತ್ತು ಚಲನಚಿತ್ರಗಳ ಟಾಪ್ 10 ಪಟ್ಟಿಯನ್ನು ಓರ್ಮ್ಯಾಕ್ಸ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯಾವ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಸ್ಥಾನ ಪಡೆದಿವೆ? 

ತಲೈವೆಟಿಯನ್ ಪಾಲಯಮ್

10. ಕಳೆದ ತಿಂಗಳು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿರುವ ತಮಿಳು ವೆಬ್ ಸರಣಿ ತಲೈವೆಟಿಯನ್ ಪಾಲಯಮ್. ವಿಭಿನ್ನ ಕಥಾಹಂದರ ಇರುವ ಈ ವೆಬ್ ಸರಣಿ ಹೆಚ್ಚು ವೀಕ್ಷಿಸಿದ ವೆಬ್ ಸರಣಿಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಈ ವೆಬ್ ಸರಣಿಯನ್ನು 16 ಲಕ್ಷ ಜನರು ವೀಕ್ಷಿಸಿದ್ದಾರೆ.

Tap to resize

ದಿ ಪೆಂಗ್ವಿನ್

9. ಕಾಲಿನ್ ಪೆರಲ್‌ ಅಭಿನಯದ ದಿ ಪೆಂಗ್ವಿನ್ ಎಂಬ ಇಂಗ್ಲಿಷ್ ವೆಬ್ ಸರಣಿ ಪ್ರಸ್ತುತ ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದೆ. ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿದ್ದು, ಈ ವೆಬ್ ಸರಣಿಯು 17 ಲಕ್ಷ ವೀಕ್ಷಣೆಗಳೊಂದಿಗೆ ಹೆಚ್ಚು ವೀಕ್ಷಿಸಿದ ವೆಬ್ ಸರಣಿಗಳ ಪಟ್ಟಿಯಲ್ಲಿ 9 ನೇ ಸ್ಥಾನ ಪಡೆದುಕೊಂಡಿದೆ.

ಹನಿಮೂನ್

8. ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿರುವ ಆಶಾ ನೇಗಿಯವರ ಹನಿಮೂನ್ ಎಂಬ ವೆಬ್ ಸರಣಿ ಹೆಚ್ಚು ವೀಕ್ಷಿಸಿದ ವೆಬ್ ಸರಣಿಗಳ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ವೆಬ್ ಸರಣಿಯು 17 ಲಕ್ಷ ವೀಕ್ಷಣೆ ಗಳಿಸಿದೆ.

ಲವ್ ಸಿತಾರ

7. ಸೋಭಿತಾ ಧುಲಿಪಾಲ ಅವರ ಅಭಿನಯದ ಲವ್ ಸೀತಾರ ಚಿತ್ರ ಸೆಪ್ಟೆಂಬರ್ 27 ರಂದು ಜೀ5 ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದೆ. ವಂದನಾ ಕಟಾರಿಯಾ ನಿರ್ದೇಶನದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, 18 ಲಕ್ಷ ವೀಕ್ಷಣೆಗಳೊಂದಿಗೆ 7ನೇ ಸ್ಥಾನದಲ್ಲಿದೆ.

ಸೆಕ್ಟರ್ 36

6. ವಿಕ್ರಾಂತ್ ಮೆಸ್ಸಿ ಅಭಿನಯದ ಕ್ರೈಮ್ ಥ್ರಿಲ್ಲರ್ ಚಿತ್ರ ಸೆಕ್ಟರ್ 36 ನೆಟ್‌ಫ್ಲಿಕ್ಸ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿ, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಕಳೆದ ವಾರ ನಾಲ್ಕನೇ ಸ್ಥಾನದಲ್ಲಿದ್ದ ಈ ಚಿತ್ರ ಈ ವಾರ 22 ಲಕ್ಷ ವೀಕ್ಷಣೆಗಳೊಂದಿಗೆ 6ನೇ ಸ್ಥಾನಕ್ಕೆ ಬಂದಿದೆ.

ಸ್ಕೂಲ್ ಫ್ರೆಂಡ್ಸ್ ಸೀಸನ್ 2

5. ಸ್ಕೂಲ್ ಫ್ರೆಂಡ್ಸ್ ವೆಬ್ ಸರಣಿ ಎರಡನೇ ಸೀಸನ್ ಅಮೆಜಾನ್ ಎಂಎಕ್ಸ್ ಪ್ಲೇಯರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇದಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಈ ವೆಬ್ ಸರಣಿಯು ಕಳೆದ ವಾರ 6 ನೇ ಸ್ಥಾನದಲ್ಲಿದ್ದರೆ ಈ ವಾರ 25 ಲಕ್ಷ ವೀಕ್ಷಣೆಗಳೊಂದಿಗೆ 5 ನೇ ಸ್ಥಾನಕ್ಕೇರಿದೆ.

CTRL ಸಿನಿಮಾ

4. ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನದ CTRL ಹಿಂದಿಯಲ್ಲಿ ಬಿಡುಗಡೆಯಾದ ಚಿತ್ರ.  ಅನನ್ಯಾ ಪಾಂಡೆ ಅಭಿನಯದ ಥ್ರಿಲ್ಲರ್ ಚಿತ್ರವು ನೆಟ್‌ಫ್ಲಿಕ್ಸಿನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಚಿತ್ರವು 26 ಲಕ್ಷ ವೀಕ್ಷಣೆಗಳೊಂದಿಗೆ 4 ನೇ ಸ್ಥಾನದಲ್ಲಿದೆ.

ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ

3. ಕಳೆದ ವಾರ ಮೊದಲ ಸ್ಥಾನದಲ್ಲಿದ್ದ ಕಪಿಲ್ ಶರ್ಮಾ ಅವರ ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ ಈ ವಾರ ಮೂರನೇ ಸ್ಥಾನಕ್ಕೆ ಕುಸಿದಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಕಪಿಲ್ ಶರ್ಮಾ ಅವರ ಈ ಕಾರ್ಯಕ್ರಮ 35 ಲಕ್ಷ ವೀಕ್ಷಣೆ ಗಳಿಸಿದೆ.

ದಿ ರಿಂಗ್ಸ್ ಆಫ್ ಪವರ್ ಸೀಸನ್ 2

2. ಕಳೆದ ವಾರ ಮೂರನೇ ಸ್ಥಾನದಲ್ಲಿದ್ದ ದಿ ರಿಂಗ್ಸ್ ಆಫ್ ಪವರ್ ಸೀಸನ್ 2 ಎಂಬ ಹಾಲಿವುಡ್ ವೆಬ್ ಸರಣಿ ಈ ವಾರ ಒಂದು ಸ್ಥಾನ ಮೇಲೇರಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ವೆಬ್ ಸರಣಿಯು 45 ಲಕ್ಷ ವೀಕ್ಷಣೆಗಳೊಂದಿಗೆ ಅಮೆಜಾನ್ ಪ್ರೈಮ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ತಾಜಾ ಖಬರ್ 2

1. ಭುವನ್ ಬ್ಯಾಮ್ ಅವರ ವೆಬ್ ಸರಣಿ ತಾಜಾ ಖಬರ್‌ನ ಎರಡನೇ ಸೀಸನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ ವಾರ 3 ನೇ ಸ್ಥಾನದಲ್ಲಿದ್ದ ಈ ವೆಬ್ ಸರಣಿಯು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ವೆಬ್ ಸರಣಿಯು 52 ಲಕ್ಷ ವೀಕ್ಷಣೆಗಳೊಂದಿಗೆ ನಂ. 1 ಸ್ಥಾನದಲ್ಲಿದೆ.

Latest Videos

click me!