22 ವರ್ಷ ಪೂರೈಸಿದ ಕುಛ್ ಕುಛ್ ಹೋತಾ ಹೈ: ಇಷ್ಟು ಬದಲಾಗಿದ್ದಾರೆ ನಟ, ನಟಿಯರು!

First Published Oct 17, 2020, 9:11 PM IST

ಕೊರೋನಾತಂಕ ನಡುವೆ ಎಲ್ಲಾ ಸಂಭ್ರಮಗಳಿಗೆ ಪೂರ್ಣ ವಿರಾಮ ಬಿದ್ದಿತ್ತು.. ಲಾಕ್‌ಡೌನ್‌ನಿಂದಾಗಿ ಸ್ತಬ್ಧಗೊಂಡಿದ್ದ ಅನೇಕ ಕ್ಷೇತ್ರಗಳು ಈಗ ಮತ್ತೆ ನಿಧಾನವಾಗಿ ತಲೆ ಎತ್ತಿವೆ. ಇದರಲ್ಲಿ ಸಿನಿ ಕ್ಷೇತ್ರವೂ ಒಂದು ಸ್ಯಾಂಡಲ್‌ವುಡ್, ಬಾಲಿವುಡ್ ಹೀಗೆ ಎಲ್ಲಾ ಸಿನಿ ಇಂಡಸ್ಟ್ರಿ ಮತ್ತೆ ಕೆಲಸ ಆರಂಭಿಸಿವೆ. ಹೀಗಿರುವಾಗ ಶಾರುಖ್ ಹಾಗು ಕಾಜೋಲ್ ಅಭಿನಯದ ಬ್ಲಾಕ್‌ಬಾಸ್ಟರ್ ಸಿನಿಮಾ ಕುಛ್ ಕುಛ್ ಹೋತಾ ಹೈ ತೆರೆ ಕಂಡು ಬರೋಬ್ಬರಿ 22 ವರ್ಷಗಳನ್ನು ಪೂರೈಸಿದೆ. ಕರಣ್ ಜೋಹರ್ ನಿರ್ದೇಶನದ ಈ ಸಿನಿಮಾ 1998ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಅನೇಕರ ಮನ ಗೆದಸ್ದಿತ್ತು. ರಾನಿ ಮುಖರ್ಜಿ ಸೇರಿ ಪುಟ್ಟ ಮಕ್ಕಳಿಬ್ಬರು ಈ ಸಿನಿಮಾದಲ್ಲಿ ನಟಿಸಿದ್ದರು. ಆದರೀಗ 22 ವರ್ಷಗಳ ನಂತರ ಈ ಸಿನಿಮಾದಲ್ಲಿ ನಟಿಸಿದ ನಟ, ನಟಿಯರು ಹೇಗಾಗಿದ್ದಾರೆ? ಎಂಬ ಕುತೂಹಲ ಹಲವರಲ್ಲಿದೆ. ಇಲ್ಲಿದೆ ನೋಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡವರ ಅಂದಿನ ಹಾಗೂ ಇಂದಿನ ಚಿತ್ರಗಳು. 

ಬಾಲಿವುಡ್ ಬಾದ್‌ಶಾಹ್ ಶಾರುಖ್ ಖಾನ್: ಸಿನಿಮಾದಲ್ಲಿ ರಾಹುಲ್ ಖನ್ನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ಕಾಲೇಜು ಹುಡುಗನ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾ ಮೂಲಕ ಹಲವು ಯುವತಿಯರ ಹೃದಯಕ್ಕೆ ಕನ್ನ ಹಾಕಿದ್ದರು.
undefined
ಕಾಜೋಲ್ ದೇವ್‌ಗನ್: ಅಂಜಲಿ ಶರ್ಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಾಜೋಲ್ ಸಿನಿಮಾದಲ್ಲಿ ಟಾಮ್‌ಬಾಯ್‌ಯಂತೆ ಕಾಣಿಸಿಕೊಂಡಿದ್ದರು. ಅವರ ಈ ಕ್ಯೂಟ್ ನಟನೆ ಜನರ ಮನ ಗೆದ್ದಿತ್ತು.
undefined
ರಾಣಿ ಮುಖರ್ಜಿ: ಟೀನಾ ಮಲ್ಹೋತ್ರಾರಾಗಿ ಕಾಣಿಸಿಕೊಳ್ಳುವ ರಾಣಿ ಸಿನಿಮಾ ಫಸ್ಟ್‌ ಹಾಫ್‌ನಲ್ಲಷ್ಟೇ ಇರುತ್ತಾರೆ. ಹೀಗಿದ್ದರೂ ರಾಹುಲ್ ಹಾಗೂ ಅಂಜಲಿ ಇವರಿಬ್ಬರೂ ಪರಸ್ಪರ ಪ್ರೀರತಿಸುತ್ತಿದ್ದಾರೆಂಬುವುದನ್ನು ಅವರಿಗೆ ಅರ್ಥ ಮಾಡಿಸುವಲ್ಲಿ ಟೀನಾ ಪಾತ್ರ ಪ್ರಮುಖವಾಗಿತ್ತು.
undefined
ಸಲ್ಮಾನ್ ಖಾನ್: ಅಮರ್ ಮೆಹ್ರಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಲ್ಮಾನ್‌ರದ್ದು ಕೇವಲ ಗೆಸ್ಟ್‌ ಅಪಿಯರೆನ್ಸ್. ಅಂಜಲಿ ಜೊತೆ ಮದುವೆಯಾಗುವ ಕನಸು ಕಾಣುವ ಅಮರ್ ಕನಸು ಮಾತ್ರ ಕನಸಾಗಿಯೇ ಉಳಿಯುತ್ತದೆ,.
undefined
ಸನಾ ಸಯ್ಯದ್: ಅಂಜಲಿ ಖನ್ನಾ, ಟೀನಾ ಹಾಗೂ ರಾಹುಲ್ ಮಗಳಾಗಿ ಕಾಣಿಸಿಕೊಳ್ಳುವ ಅಂಜಲಿ, ತನ್ನ ತಾಯಿ ಇಚ್ಛೆಯಂತೆ ರಾಹುಲ್ ಹಾಗೂ ಅಂಜಲಿಯನ್ನು ಒಂದಾಗಿಸುತ್ತಾರೆ. ಪುಟ್ಟ ಮಗುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸನಾ ತಮ್ಮ ಮುದ್ದುಮುಖದಿಂದ ಅನೇಕ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದರು. ಅಂದಿನ ಸನಾ ಈಗ ಹೇಗಾಗಿದ್ದಾರೆ ನೀವೇ ನೋಡಿ.
undefined
ಪರ್ಜಾನ್ ದಸ್ತುರ್: ಸೈಲೆಂಟ್ ಸರ್ದಾರ್‌ಜೀ ಪಾತ್ರದಲ್ಲಿ ಕಾಣಿಸಿಕೊಳ್ಳುವ ಈ ಪುಟ್ದಟ ಬಾಲಕ ಅಂಜಲಿ ಸ್ನೇಹಿತ. ಸನ್ನೆಗಳಿಂದಲೇ ಇವರು ಪ್ರೇಕ್ಷಕರ ಹೃದಯ ಕದ್ದಿದ್ದರು. ಅಂದಿನ ಸೈಲೆಂಟ್ ಸರ್ದಾರ್‌ಜೀ ಈಗ ಗುರುತಿಸಲಾಗದಷ್ಟು ಬದಲಾಗಿದ್ದಾರೆ
undefined
ಅನುಪಮ್ ಖೇರ್: ಪ್ರಿನ್ಸಿಪಾಲ್ ಮಲ್ಹೋತ್ರ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅನುಪಮ್ ಖೇರ್ ಪ್ರೇಕ್ಷಕರಿಗೆ ನಗುವಿನ ಔತಣ ಉಣಿಸಿದ್ದಾರೆ. ಟೀನಾ ತಂದೆಯಾಗಿ, ಕಾಲೇಜು ಪ್ರಾಂಶುಪಾಲರಾಗಿ ಉತ್ತಮವಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ.
undefined
click me!