Kangna ಸೇರಿದಂತೆ ಈ ಬಾಲಿವುಡ್‌ ನಟಿಯರು ಚೈನ್ ಸ್ಮೋಕರ್ಸ್‌!

Published : May 31, 2022, 05:55 PM IST

ಇಂದು ಅಂದರೆ ಮೇ 31 ರಂದು ಧೂಮಪಾನ ನಿಷೇಧ ದಿನವಾಗಿದೆ (No Tobacco Day)  ಪ್ರಪಂಚದಾದ್ಯಂತ ಸಿಗರೇಟ್ ಮತ್ತು ತಂಬಾಕಿನಿಂದ ಉಂಟಾಗುವ ದೈಹಿಕ ಹಾನಿಯ ಬಗ್ಗೆ ಜಾಗೃತಿ ಮೂಡಿಸಲು ಸೆಲೆಬ್ರಿಟಿಗಳು ಇದನ್ನು ಪ್ರಚಾರ ಮಾಡುತ್ತಾರೆ. ಆದರೆ ಸ್ವತಃ ಇವರೇ  ಧೂಮಪಾನದ ಚಟದಿಂದ ಹೊರಬರಲು ಸಾಧ್ಯವಾಗಿಲ್ಲ. ಒಂದು ದಿನವೂ ಸಿಗರೇಟ್ ಇಲ್ಲದೆ ಇರಲಾರರು ಈ ಬಾಲಿವುಡ್ ನಟಿಯರು.

PREV
19
Kangna  ಸೇರಿದಂತೆ ಈ ಬಾಲಿವುಡ್‌ ನಟಿಯರು ಚೈನ್ ಸ್ಮೋಕರ್ಸ್‌!

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಬೆಳಗಿಸಿದವರಲ್ಲಿ ಬಾಲಿವುಡ್‌ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಮೊದಲ ಸ್ಥಾನದಲ್ಲಿದ್ದಾರೆ ಹಾಗೂ ಸಿನಿಮಾದಲ್ಲೂ ಸಹ ಅನೇಕ ಉತ್ತಮ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಆದರೆ ಅವರು ಸಾರ್ವಜನಿಕವಾಗಿ ಸಿಗರೇಟ್ ಸೇದುವಾಗ ಕ್ಯಾಮಾರಗೆ ಸಿಕ್ಕಿಬಿದ್ದಿದ್ದಾರೆ.

29

ಬಾಲಿವುಡ್ ನಟಿಯರ ಮೊದಲಿನ  ಜೀವನವನ್ನು ನೋಡಿದರೆ, ಈ ನಟಿಯರಲ್ಲಿ ಅನೇಕರು ಬಹಿರಂಗವಾಗಿ ಸಿಗರೇಟ್ ಮತ್ತು ಮದ್ಯ ಸೇವಿಸುತ್ತಾರೆ. ಅನೇಕ ಮಹಿಳಾ ಸೆಲೆಬ್ರಿಟಿಗಳು ಸಿಗರೇಟ್ ಚಟಕ್ಕೆ ಬಿದ್ದಿದ್ದಾರೆ. ಇವತರು ಚೈನ್ ಸ್ಮೋಕರ್ ಆಗಿದ್ದರು. ಈ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಹೆಸರು ಕೂಡ ಸೇರಿದೆ.

 

39

ಸುಶ್ಮಿತಾ ಸೇನ್ ಭಾರತದ ಹೆಮ್ಮೆ. ಮೊದಲ ವಿಶ್ವ ಸುಂದರಿ ಪಟ್ಟವನ್ನು ಸಹ ಗೆದ್ದಿದ್ದಾರೆ. ಅವರನ್ನು ಅನೇಕರು ತಮ್ಮ ರೋಲ್‌ ಮಾಡೆಲ್‌ ಎಂದು ಪರಿಗಣಿಸುತ್ತಾರೆ. ಆದರೆ ಅವರು ಚೈನ್ ಸ್ಮೋಕರ್. ಅವರ ಪ್ರಕಾರ, ಮೊದಲು ಅವರ ಅದನ್ನು ಸ್ಟೈಲ್ ಆಗಿ ಮಾಡುತ್ತಿದ್ದರು ಆದರೆ ಈಗ ಅದು ಅವರ ಅಭ್ಯಾಸವಾಗಿದೆ.

49

ಬಾಲಿವುಡ್‌ನ ಅತ್ಯಂತ ವಿವಾದಾತ್ಮಕ ನಟಿಯಾಗಿರುವ ಕಂಗನಾ ರಣಾವತ್‌ ಒಮ್ಮೆ  ಡ್ರಗ್ಸ್‌ನ ಅಭ್ಯಾಸವಾಗಿತ್ತು ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ಈ ನಟಿ ಮಾದಕ ವ್ಯಸನವನ್ನು ತ್ಯಜಿಸಿರಬಹುದು, ಆದರೆ ಇನ್ನೂ ಸಿಗರೇಟ್ ಸೇದುವ ಅಭ್ಯಾಸವನ್ನು ಹೊಂದಿದ್ದಾರೆ. ಕಂಗನಾ ಚೈನ್ ಸ್ಮೋಕರ್.

59

ಕೊಂಕಣ ಸೇನ್ ಅವರನ್ನು ಸೂಕ್ಷ್ಮನಟಿ ಎಂದು ಪರಿಗಣಿಸಲಾಗಿದೆ.ಒಳ್ಳೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಈ ನಟಿಗೆ ಧೂಮಪಾನದ ಅಭ್ಯಾಸವೂ ಇದೆ. ಗರ್ಭಾವಸ್ಥೆಯಲ್ಲಿ, ಈ ಚಟದಿಂದಾಗಿ, ಅವರನ್ನು ಆಸ್ಪತ್ರೆಗೆ ಆಡ್ಮೀಟ್‌ ಸಹ  ಮಾಡಬೇಕಾಯಿತು.

69

ಮನಿಶಾ ಕೊಯಿರಾಲಾ  ಚೈನ್ ಸ್ಮೋಕರ್ ಜೊತೆಗೆ ಹೆಚ್ಚು ಮದ್ಯಪಾನ ಮಾಡುವ  ಕುಖ್ಯಾತಿ ಪಡೆದಿದ್ದಾರೆ. ಆದರೆ, ಕ್ಯಾನ್ಸರ್ ನಂತಹ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದ ಈ ನಟಿ ಚಿಕಿತ್ಸೆಯ ಸಮಯದಲ್ಲಿ ತನ್ನೆಲ್ಲಾ ಕೆಟ್ಟ ಚಟಗಳನ್ನು ತ್ಯಜಿಸಿದರು. ಆದರೆ ಮದುವೆಯ ದಿನದಂದು ಅವರು ಹೆಚ್ಚು ಧೂಮಪಾನ ಮಾಡಿದರು.

79

ಚೈನ್ ಸ್ಮೋಕಿಂಗ್ ಕೆಟ್ಟ ಅಭ್ಯಾಸ ಹೊಂದಿರುವ ಹಳೆ ನಟಿಯರ ಪಟ್ಟಿಯಲ್ಲಿ ಮಾಹಿ ಗಿಲ್, ಮಹಿರಾ ಖಾನ್, ಮೀನಾ ಕುಮಾರಿ ಸೇರಿದಂತೆ ಹಲವು ಹೆಸರುಗಳಿವೆ.  

89

ಇತ್ತೀಚೆಗೆ, ಆನ್‌ಲೈನ್ ಶಿಕ್ಷಣವನ್ನು ಒದಗಿಸುವ ಬೈಜೂಸ್ ಸಂಸ್ಥೆಯು ತನ್ನ ಕಂಪನಿಯನ್ನು ಪ್ರಚಾರ ಮಾಡುವ ಅವಕಾಶವನ್ನು ಶಾರುಖ್ ಖಾನ್ ಅವರಿಗೆ ನೀಡಿದ   ಕಾರಣ ಟ್ರೋಲ್ ಮಾಡಲ್ಪಟ್ಟಿದೆ. ಸೆಲೆಬ್ರಿಟಿ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಇದೀಗ ಈ ಪ್ರಕರಣದಿಂದ ಅವರಿಗೆ ಕ್ಲೀನ್ ಚಿಟ್ ಸಿಕ್ಕಿರುವುದು ಬೇರೆ ವಿಚಾರ.

99

ನಟಿ ರಾಣಿ ಮುಖರ್ಜಿ ತುಂಬಾ ಯಶಸ್ವಿ ನಟಿ. ಆದರೆ ಸಿಗರೇಟಿನ ಚಟವನ್ನು ಹೊಂದಿದ್ದಾರೆ ಈಗ ಅವರು ಅದನ್ನು ಬಿಡಲು ಸಾಧ್ಯವಾಗುತ್ತಿಲಿಲ್ಲ. ರಾಣಿ ಮುಖರ್ಜಿಗೆ ಬೆಳಗ್ಗೆ ಎದ್ದ ತಕ್ಷಣ ಧೂಮಪಾನ ಮಾಡುವ ಅಭ್ಯಾಸವಿದೆ ಎನ್ನಲಾಗಿದೆ.
 

Read more Photos on
click me!

Recommended Stories