ಹೆರಿಗೆಯಾಗಿ 2 ವಾರ ಆದ್ರೂ ಹಾಲಿಲ್ಲ, ಸ್ತನ ಪ್ರೆಸ್ ಮಾಡಿದ ನರ್ಸ್: ಕರೀನಾ ಹೇಳಿದ್ದಿಷ್ಟು

Published : Aug 15, 2021, 10:49 AM ISTUpdated : Aug 15, 2021, 05:59 PM IST

ಹೆರಿಗೆಯಾಗಿ ಎರಡು ವಾರ ಕಳೆದರೂ ಎದೆ ಹಾಲಿಲ್ಲ ಸ್ತಗಳನ್ನು ಪ್ರೆಸ್ ಮಾಡಿದ ನರ್ಸ್ : ಎದೆ ಹಾಲುಣಿಸುವ ಸವಾಲುಗಳ ಬಗ್ಗೆ ಕರೀನಾ ಮಾತು

PREV
18
ಹೆರಿಗೆಯಾಗಿ 2 ವಾರ ಆದ್ರೂ ಹಾಲಿಲ್ಲ, ಸ್ತನ ಪ್ರೆಸ್ ಮಾಡಿದ ನರ್ಸ್: ಕರೀನಾ ಹೇಳಿದ್ದಿಷ್ಟು

ತೈಮೂರ್ ಹಾಗೂ ಜೆಹಾಂಗೀರ್‌ಗೆ ಅಮ್ಮನಾದ ನಂತರ ಬಾಲಿವುಡ್ ನಟಿ ಕರೀನಾ ಕಪೂರ್ ಪ್ರೆಗ್ನೆನ್ಸಿ ಬೈಬಲ್ ಎಂಬ ಪುಸ್ತಕ ಬರೆದಿದ್ದಾರೆ. ಗರ್ಭಿಣಿಯಾಗುವುದು, ಸೆಕ್ಸ್ ಡ್ರೈವ್ ಕಮ್ಮಿಯಾಗಿದ್ದು, ತಾಯ್ತನದ ಕಷ್ಟ ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸಿ ಬರೆದಿದ್ದಾರೆ ನಟಿ.

28

ಹೊಸ ಪುಸ್ತಕ ಬರೆದ ನಟಿ ಇದರಲ್ಲಿ ತಾಯ್ತನದ ಸವಾಲುಗಳ ಬಗ್ಗೆ ಫೋಟೋ ಸಮೇತ ಬರೆದಿದ್ದಾರೆ. ಇದರಲ್ಲಿ ಹಾಲುಣಿಸುವ ತಾಯಿಯ ಸವಾಲುಗಳನ್ನು ವಿವರಿಸಿ ಬರೆದಿದ್ದಾರೆ ನಟಿ. ಬಹಳಷ್ಟು ಸಂಕೋಚವೆನಿಸೋ ವಿಚಾರಗಳನ್ನು ನಟಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

38

ತನ್ನ ಹೊಸ ಪುಸ್ತಕ ಪ್ರೆಗ್ನೆನ್ಸಿ ಬೈಬಲ್‌ನಲ್ಲಿ ಕರೀನಾ ಕಪೂರ್ ಖಾನ್ 40 ವರ್ಷದ ನಟಿ ಗರ್ಭಾವಸ್ಥೆಯಲ್ಲಿ ಲೈಂಗಿಕತೆಯ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯು ಲೈಂಗಿಕತೆಯ ಅಗತ್ಯವನ್ನು ಅನುಭವಿಸದಿರಬಹುದು, ಪ್ರಚೋದನೆಯನ್ನು ಅನುಭವಿಸುವುದಿಲ್ಲ ಅಥವಾ ಗರ್ಭಾವಸ್ಥೆಯ ಸಮಯದಲ್ಲಿ ತನ್ನನ್ನು ತಾನು ಇಷ್ಟಪಡುವುದಿಲ್ಲ ಎಂದು ಭಾವಿಸುತ್ತಾರೆ.

48
58
Kareena Kapoor

ಹೆರಿಗೆಗೆ ಮುಂಚೆ ಮಹಿಳೆಯರು ಇದನ್ನು ಎದುರಿಸುತ್ತಾರೆ. ಮುಖ್ಯವಾಹಿನಿಯ ನಟಿರು ಈ ವಿಷಯಗಳ ಬಗ್ಗೆ ಮಾತನಾಡುವುದನ್ನು ಜನರು ನೋಡುವುದಿಲ್ಲ ಎಂದ ಕರೀನಾ ಕಪೂರ್ ತಮ್ಮ ಅನುಭವದ ಬಗ್ಗೆ ಮಾತನಾಡಿದ್ದಾರೆ

68

ಕರೀನಾ ತನ್ನ ಪುಸ್ತಕದಲ್ಲಿ ಪ್ರಸ್ತಾಪಿಸಿದ ಇತರ ವಿಷಯಗಳಲ್ಲಿ "ಸ್ಪಾಟಿಂಗ್" (ಮೊದಲ ತ್ರೈಮಾಸಿಕದಲ್ಲಿ ರಕ್ತಸ್ರಾವ) ಮತ್ತು ಸ್ತನ್ಯಪಾನದ ಸವಾಲುಗಳ ಬಗ್ಗೆ ಮುಕ್ತವಾಗಿ ಹಲವು ವಿಚಾರ ಹೇಳಿದ್ದಾರೆ.

78

ತೈಮೂರ್ ಹುಟ್ಟಿದ ಎರಡು ವಾರಗಳ ನಂತರವೂ, ನಾನು ಇನ್ನೂ ಒಣಗಿದ್ದೆ. ನನ್ನ ತಾಯಿ ಮತ್ತು ನರ್ಸ್ ನನ್ನ ಬಗ್ಗೆ ಆಶ್ಚರ್ಯ ಪಡುತ್ತಾ ನನ್ನ ಸ್ತನಗಳನ್ನು ಒತ್ತುತ್ತಿದ್ದರು. ಆದರೂ ಹಾಲು ಬರಲಿಲ್ಲ ಎಂದಿದ್ದಾರೆ.

88

ಇದು ನನ್ನ ಎರಡು ಗರ್ಭಾವಸ್ಥೆಯಲ್ಲಿ ನಾನು ಅನುಭವಿಸಿದ ಎಲ್ಲವುಗಳ ಬ್ಲೋ-ಬೈ-ಬ್ಲೋ ಸಂಗ್ರಹ.  ಇದು ವೈದ್ಯರ ಮಾಹಿತಿಯಾಗಿದೆ. ಇದನ್ನು ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಸಮಾಜಗಳ ಒಕ್ಕೂಟ (ಎಫ್‌ಒಜಿಎಸ್‌ಐ) ಅನುಮೋದಿಸಿದೆ. ಇದು ಇತರ ತಾಯಂದಿರಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ

click me!

Recommended Stories